• -20%

    ಊರು ಸುಟ್ಟರೂ ಹನುಮಪ್ಪ ಹೊರಗ

    0

    ಊರು ಸುಟ್ಟರೂ ಹನುಮಪ್ಪ ಹೊರಗ….

    ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೇ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು.

    ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ.

    Original price was: $1.20.Current price is: $0.96.
    Add to basket