• -40%

    ಮನೋನಂದನ

    0

    ಮನೋನಂದನ
    ಮನೋದೈಹಿಕ ಬೇನೆಗಳು ವಿಚಿತ್ರ ರೂಪಗಳನ್ನು ಪ್ರದರ್ಶಿಸುತ್ತವೆ. ಸರಿಯಾಗಿ ಅರ್ಥಮಾಡಿಕೊಳ್ಳಲು ಸುಮಾರು ತ್ರಾಸು ಆಗುತ್ತದೆ. “ಇಂತಿಂತಹ ರೋಗಿ ಈ ತೆರನಾಗಿ ತನ್ನ ಕಷ್ಟ ಹೇಳಿಕೊಂಡ. ಹೀಗಿರಬಹುದು ಎಂದು ನಾನು ತರ್ಕಮಾಡಿ , ನಿರ್ಣಯಿಸಿ ಚಿಕಿತ್ಸೆ ನಡೆಸಿದ. ಏನೂ ಪ್ರಯೋಜನವಾಗಲಿಲ್ಲ. ಕಡೆಗೆ, ಅನಿರೀಕ್ಷಿತವಾಗಿ ತಿಳಿದುಬಂದ ಸಂಗತಿಯಿಂದ ಗುಣವಾಯಿತು.
    ಮನಸ್ಸಿನ ದೃಢತೆಯನ್ನೂ ಸಮಾಧಾನವನ್ನೂ ಸಾಧಿಸಲು ಇರುವ ಎಲ್ಲ ಮಾರ್ಗಗಳನ್ನೂ ಅಲ್ಪಸ್ವಲ್ಪವಾದರೂ ಸರಳವಾಗಿ ತಿಳಿಸೋಣ” ಎನ್ನಿಸಿತು. ಅದನ್ನು ಬರೆದು ಹೋದಾಗ, ‘ಹುಡುಗಿಗಿಂತ ಹೆರಳೇ ಭಾರ’ ಎಂದ ಹಾಗೆ, ಈ ಭಾಗವೇ ಕತೆಗಳ ಭಾಗಕ್ಕಿಂತ ಭಾರವಾಯಿತು. ಕಲಿಯಬೇಕಾದರೆ ಇನ್ನೊಬ್ಬರಿಗೆ ಕಲಿಸಬೇಕು’ ಎಂಬ ಹಿರಿಯರ ನುಡಿಯ ಸತ್ಯವು ಮನದಟ್ಟಾಯಿತು. ನನಗಾದಂತೆಯೇ ಓದುಗರಾರಿಗಾದರೂ ಸಂದೇಹ ಬಂದರೆ, ಅವರೂ ನಾನು ಓದಿದ ಆಧಾರ ಗ್ರಂಥಗಳನ್ನು ಓದಿ ತಿಳಿದುಕೊಳ್ಳಲಿ ಎನ್ನಿಸಿತು.

    Original price was: $1.98.Current price is: $1.19.
    Add to basket
  • -40%

    ಕೊರವಂಜಿಯ ಪಡುವಣ ಯಾತ್ರೆ

    0

    ಅರುವತ್ತರ ದಶಕದ ಆದಿಭಾಗದಲ್ಲಿ ರಾಶಿಯವರು ಒಂದು ವೈದ್ಯಕೀಯ ತಂಡದೊಂದಿಗೆ ರಷ್ಯಾ ಹಾಗೂ ಯೂರೋಪ್ ದೇಶಗಳ ಪ್ರವಾಸವನ್ನು ಕೈಗೊಂಡರು. ಪ್ರವಾಸದ ಉದ್ದೇಶ ಆ ದೇಶಗಳ ವೈದ್ಯಕೀಯ ವಿಧಿವಿಧಾನಗಳ ಅಧ್ಯಯನವಾದರೂ ರಾಶಿಯವರ ತುಂಟ ಮನಸ್ಸು ಅಲ್ಲಿನ ಜನಜೀವನದ ವೈಚಿತ್ರ್ಯಗಳನ್ನು ನೋಡಿ ತನ್ಮೂಲಕ ನಗೆಯನ್ನು  ಹೊಮ್ಮಿಸುವ ಅವಕಾಶವನ್ನು  ಕಂಡುಕೊಂಡಿತು. ಆ ಪ್ರಕ್ರಿಯೆಯ ಫಲಶ್ರುತಿಯೇ  ‘ಕೊರವಂಜಿಯ ಪಡುವಣ ಯಾತ್ರೆ’.

    Original price was: $1.02.Current price is: $0.61.
    Add to basket
  • -40%

    ಮೃಗಶಿರ

    0

    ಮೃಗಶಿರ
    ‘ಮೃಗಶಿರ’ ಒಂದು ಸಣ್ಣಕಥೆಗಳ ಸಂಕಲನ, ಇದರಲ್ಲಿ ಕಂಡುಬರುವ ಬೋರವ್ವ, ಮಲ್ಲಿ, ಶಾರಿ, ಉಮಾಪತಿರಾಯ ಇವರೆಲ್ಲಾ ನಮ್ಮ ಸಮಾಜದಲ್ಲಿ ಎಲ್ಲೆಲ್ಲಿಯೂ ಕಾಣಸಿಗುವ ವ್ಯಕ್ತಿಗಳು. ಇವರೆಲ್ಲರ ನಡುವಳಿಕೆ, ಮೇಲು ನೋಟಕ್ಕೆ ‘ನಾಗರಿಕ’ ನಡುವಳಿಕೆಯಾದರೂ, ಹಿನ್ನೆಲೆಯಲ್ಲಿ ಕಾಡಿನ ಪ್ರಾಣಿಗಳ ಪಶುಸಹಜ ನಡುವಳಿಕೆಗಳನ್ನು ಮನುಷ್ಯ ಮಾನಸಿಕವಾಗಿ ಅನುಸರಿಸುತ್ತಿದ್ದಾನೋ ಎಂಬ ಸಂಶಯ     ಬರುವಂತೆ ಅವುಗಳ ನಡುವಣ ಸಾಮ್ಯತೆಯನ್ನು ರಾ.ಶಿ.ಯವರು ಈ ಪುಸ್ತಕದಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಈ ಪುಸ್ತಕದಲ್ಲಿನ ಹತ್ತು ಹನ್ನೆರಡು ಕಥೆಗಳು ಓದುಗರ  ಆಸಕ್ತಿಯನ್ನು ಉಳಿಸಿಕೊಳ್ಳುತ್ತಲೇ, ಪ್ರಾಣಿಲೋಕದ ನಡುವಳಿಕೆ ಇಂದಿಗೂ ಮಾನವನ ಸುಪ್ತ ಮನಸ್ಸಿನಲ್ಲಿ ಎಷ್ಟು ಭದ್ರವಾಗಿ ನೆಲೆಯೂರಿಗೆ ಎಂಬ ಸಂಗತಿಯನ್ನು ಬಹು ಸ್ಪಷ್ಟವಾಗಿ ತೋರಿಸಿಕೊಡುತ್ತೇವೆ. ಕಥೆಗಳ ಕೊನೆಯಲ್ಲಿ ರಾ.ಶಿ ಯವರು ಬರೆದಿರುವ ಸುದೀರ್ಘ ಪ್ರಸ್ತಾವನೆ, ಮನುಕುಲಕೆ ವಿಕಾಸ ಹಾಗೂ ಮನಸ್ಸಿನ ವಿವಿಧ ವ್ಯಾಪಾರಗಳ ಬಗ್ಗೆ ಹೇಳುವುದಾರೆ,  ‘ವಿಚಾರ ಪ್ರಚೋದನೆಳು ಮಹತ್ಕಾರ್ಯಕ್ಕೆ ಇಷ್ಟೊಂದು ಪರಿಣಾಮಕಾರಿಯಾಗಿ ಲಲಿತ ಸಾಹಿತ್ಯದ ಬಳಕೆಯಾಗುವುದು ಎಂದಾದರೊಮ್ಮೆ’ ಈ ಕಾರಣದಿಂದ ಈ ಕೃತಿ ಅಮೂಲ್ಯವಾದದ್ದು. 

    Original price was: $1.08.Current price is: $0.65.
    Add to basket
  • -40%

    ಮನನ

    0

    ಮನನ
    ಮನನದಲ್ಲಿನ ಪ್ರಬಂಧಗಳು ಹೊಸತನದಿಂದ ಕೂಡಿವೆ. ನಮ್ಮ ಸಮಾಜದ ಸಂಸ್ಕೃತಿಯಲ್ಲಿ ಅನೂಚಾನವಾಗಿ ಬಂದ ಹಲವು ನುಡಿಗಟ್ಟುಗಳು, ಸಂಪ್ರದಾಯಗಳನ್ನು ಮುಕ್ತ ಮನಸ್ಸು ಹಾಗೂ ತಾರ್ಕಿಕ ದೃಷ್ಟಿಯಿಂದ ಅವಲೋಕಿಸಿ, ಅವುಗಳ ಹಿನ್ನೆಯಲ್ಲಿರಬಹುದಾದ ಸತ್ಯಾಂಶಗಳನ್ನು ಹೆಕ್ಕಿ ತೆರೆಯುವುದು ಈ ಪ್ರಬಂಧಮಾಲೆಯ ಉದ್ದೇಶ. ಕಾಲ ಭೈರವ ಎಂಬ ಪುಟ್ಟ ಪ್ರಬಂಧದಲ್ಲಿ ಅವರು ಕಾಲದ ವೈಜ್ಞಾನಿಕ ಸ್ವರೂಪವನ್ನು ಸಾಮಾನ್ಯ ಜನರಿಗೆ ತಿಳಿಯುವ ಭಾಷೆಯಲ್ಲಿ ವಿವರಿಸಿದ್ದಾರೆ. ಶಕುನಗಳಲ್ಲಿನ ನಂಬಿಕೆಯಾಗಲೀ, ನಗುವಿನಂತಹ ಸಹಜ ಪ್ರಕ್ರಿಯೆಯಾಗಲೀ ರಾಶಿಯವರ ಚಿಂತನೆಯ ಮೂಸೆಯಲ್ಲಿ ಕರಗಿ ಹೊರಬರುವಾಗ ಅಪ್ಪಟ ಅಪರಂಜಿಯ ಹೊಳಹನ್ನು ಪಡೆಯುವ ಚಮತ್ಕಾರವನ್ನು ಇಲ್ಲಿ ಕಾಣಬಹುದು. ಅನೇಕ ಕೌತುಕಮಯ ವೈಜ್ಞಾನಿಕ ಚಿಂತನೆಗಳನ್ನು ನಮ್ಮ ಸನಾತನ ಧರ್ಮದ ಒರೆಗಲ್ಲಿನಲ್ಲಿ ತೀಡಿ ಮನನಯೋಗ್ಯವಾದ ಸಾಮ್ಯಗಳನ್ನು ರಾಶಿಯವರು ಈ ಪುಸ್ತಕದಲ್ಲಿ ಓದುಗರಿಗೆ ಉಣಬಡಿಸಿದ್ದಾರೆ.

    Original price was: $1.08.Current price is: $0.65.
    Add to basket
  • -40%

    ಮಂಕರು ಬೆಪ್ಪರು

    0

    ಮಂಕರು ಬೆಪ್ಪರು
    “ಮಂಕರು ಬೆಪ್ಪರು” ಎಂಬ ಈ ನಗೆ ಸಂಕಲನ ರಾ.ಶಿ.ಯವರ “ತುಟಿ ಮೀರಿದುದು” ಹಾಗೂ “ನಗು ಸರಸಿ ಅಪ್ಸರೆಯರು” ಇವುಗಳಿಂದ ಆಯ್ದ ಲೇಖನಗಳ ಸಂಗ್ರಹ.
    ಈ ಬರಹಗಳು ರಾ.ಶಿ.ಯವರ ಹಾಸ್ಯಪ್ರಜ್ಞೆಯ ಒಂದು ಮುಖ.

    Original price was: $1.14.Current price is: $0.68.
    Add to basket