• -40%

    ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು

    0

    ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು
    ಪ್ರೊ. ಪಿ. ಶ್ರೀಕೃಷ್ಣ ಭಟ್
    ಪ್ರೊ.ಪಿ.ಕೃಷ್ಣ ಭಟ್ಟರ ‘ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು’ ಕನ್ನಡ ವಿದ್ವತ್ ಪರಂಪರೆಯನ್ನು ನೆನಪಿಸುವ ಕೃತಿ. ಇದರಲ್ಲಿ ವ್ಯಾಕರಣದ ಜಟಿಲ ಸಮಸ್ಯೆಗಳನ್ನು ಸರಳವಾಗಿ ವಿವರಿಸಲಾಗಿದೆ. ಸಂಸ್ಕೃತದ ಪ್ರಭಾವವನ್ನು ಕನ್ನಡದ ಸ್ವಂತಿಕೆಯನ್ನು ಸ್ಪಷ್ಟವಾಗಿ ಗುರುತಿಸಿ ವಿವರಿಸುವ ಕೃತಿಗಳು ಕನ್ನಡದಲ್ಲಿ ವಿರಳ. ವ್ಯಾಕರಣ ಶಾಸ್ತ್ರಗಳು ಕಾಲಾತೀತಾದ ವಿಚಾರಗಳೆಂಬಂತೆ ಅಧ್ಯಯನ  ಕ್ಷೇತ್ರದಿಂದ ಮರೆಯಾಗುತ್ತಿವೆ.  ಭಾಷಾ ಕಲಿಕೆಗಾಗಲಿ, ಸಾಹಿತ್ಯ ಓದಿಗಾಗಲಿ ವ್ಯಾಕರಣದ ಹಂಗಿಲ್ಲದಿರಬಹುದು. ಆದರೆ ಹಳಗನ್ನಡ ಕಾವ್ಯಗಳನ್ನು ಓದಿ ಭಾಷೆಯ ವೈಶಿಷ್ಟ್ಯವನ್ನು ಅರ್ಥೈಸಿಕೊಳ್ಳಬೇಕಾದರೆ ವ್ಯಾಕರಣ ವಿಶೇಷವನ್ನು ತಿಳಿದಿರಬೇಕಾದುದು ಅವಶ್ಯ. ಭಾಷೆಯ ಹಾಗೂ ಸಾಹಿತ್ಯದ ಇತಿಹಾಸದಲ್ಲಿ ವ್ಯಾಕರಣಕ್ಕೆ ಈ ನೆಲೆಯಿಂದ ಪ್ರಾಶಸ್ತ್ಯವಿದೆ. ಕನ್ನಡ ವ್ಯಾಕರಣ ಪರಂಪರೆಯನ್ನು ಸ್ಪಷ್ಟವಾಗಿ ತಿಳಿಸುವ ಆಕರಗ್ರಂಥವಾಗಿ ಇದು ಗಮನ ಸೆಳೆಯುತ್ತದೆ. ಆಳವಾದ ಅಧ್ಯಯನ, ಖಚಿತವಾದ ತಿಳುವಳಿಕೆ, ಅಗಾಧವಾದ ಪಾಂಡಿತ್ಯದಿಂದ ಸ್ಫುರಿಸಿದ ಪರಂಪರಾಗತ ವ್ಯಾಕರಣ ವಿಚಾರಗಳನ್ನು ಸಮಕಾಲೀನ ಭಾಷಾಭಿತ್ತಿಯಲ್ಲಿ ಅಭಿವ್ಯಕ್ತಗೊಳಿಸಿದ ಸರಳ ನಿರೂಪಣೆಯ ಈ ಗ್ರಂಥ ಕನ್ನಡ ಅಧ್ಯಯನ ಕ್ಷೇತ್ರಕ್ಕೊಂದು ಅನನ್ಯ ಕೊಡುಗೆಯಾಗಿದೆ.

    Original price was: $3.60.Current price is: $2.16.
    Add to basket