ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.

  • -10%

    ನೂರು ಮರ ನೂರು ಸ್ವರ

    0
    Original price was: $4.80.Current price is: $4.32.
    Add to basket
  • -11%

    ಭಾಷೆ ಮತ್ತು ಸಂಸ್ಕೃತಿ

    0

    ಭಾಷೆ ಮತ್ತು ಸಂಸ್ಕೃತಿ :

    ಇದು ಕುರ್ತಕೋಟಿಯವರ ಅಂಕಣ ಲೇಖನ ಕೃತಿ . ಇದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಬಿಡಿಬಿಡಿಯಾಗಿದ್ದ ಈ ಲೇಖನಗಳನ್ನು ಒಂದು ಸ್ವರೂಪದಲ್ಲಿ ಜೋಡಿಸಿ ಇಲ್ಲಿ ನೀಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯ ‘ಸಾಪ್ತಾಹಿಕ ವಿಜಯಕ್ಕೆ ಬರೆದ, ‘ಒಳನೋಟಗಳು’. ಎಂಬ ಹೆಸರಿನಲ್ಲಿ ಬರುತ್ತಿದ್ದ ಅಂಕಣಗಳೊಂದಿಗೆ ಇನ್ನೂ ಕೆಲವು ಲೇಖನಗಳನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ.

    Original price was: $1.50.Current price is: $1.34.
    Add to basket
  • -10%

    ಆಡಾಡತ ಆಯುಷ್ಯ

    0

    ಆಡಾಡತ ಆಯುಷ್ಯ

    -ಗಿರೀಶ ಕಾರ್ನಾಡ

    ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ

    ಪ್ರಾಕ್ಕು

    ನನ್ನ ತಾಯಿಯ ಹೆಸರು ಕೃಷ್ಣಾಬಾಯಿ. ಕೃಷ್ಣಾಬಾಯಿ ಮಂಕೀಕರ. ಕುಟುಂಬದ ಹಿರಿಯರೆಲ್ಲ ಆಕೆಯನ್ನು ‘ಕುಟ್ಟಾಬಾಯಿ’ ಎಂದೇ ಸಂಬೋಧಿಸುತ್ತಿದ್ದರು. ಆಮೇಲೆ ತನಗಿಂತ ಕಿರಿಯರಿಗೆ, ಮುಂದಿನ ತಲೆಮಾರಿಗೆ, ‘ಕುಟ್ಟಕ್ಕ’ ಆದಳು. ೧೯೮೪ರಲ್ಲಿ , ಅಂದರೆ ಆಕೆಗೆ ಎಂಭತ್ತೆರಡು ತುಂಬಿದಾಗ, ನನ್ನ ಅತ್ತಿಗೆ ಸುನಂದಾ ಆಕೆಯ ಬೆನ್ನು ಹತ್ತಿ ಆಕೆಯಿಂದ ಆತ್ಮಕತೆ ಬರೆಯಿಸಿಕೊಂಡಳು. ನನ್ನ ತಂದೆಯ ಒಂದು ಹಳೆಯ ಡಾಯರಿಯಲ್ಲಿ, ಅವನು ಅಲ್ಲಲ್ಲಿ ಲೆಕ್ಕ ಗೀಚಿ ಬಿಟ್ಟಿರುವ ಪುಟಗಳ ಖಾಲಿ ಜಾಗದಲ್ಲಿ, ಕೊಂಕಣಿಯಲ್ಲಿ ಬರೆದ ಸುಮಾರು ಮೂವತ್ತು ಪುಟಗಳ ಕೃತಿ ಅದು. ಆಕೆ ಅದನ್ನು ಬರೆಯುವಷ್ಟರಲ್ಲಿ ನಾನು, ನನ್ನ ಸಹೋದರ-ಸಹೋದರಿಯರು ಬಾಲ್ಯದುದ್ದಕ್ಕೂ ನಮ್ಮನ್ನು ಪೀಡಿಸಿದ ಭೀತಿಗಳಿಗೆ, ಆತಂಕಗಳಿಗೆ ಹಾಗೂ ಹೀಗೂ ಪರಿಹಾರ ಹುಡುಕಿದ್ದೆವು. ಆಕೆಯ ಆತ್ಮಚರಿತ್ರೆ ಈ ದುಗುಡಗಳ ಬಗ್ಗೆ ಸರಳವಾಗಿ, ಪ್ರಾಮಾಣಿಕವಾಗಿ ಮಾತನಾಡಿ ಅವುಗಳನ್ನು ಬಯಲಿಗೆಳೆದು ಪರೀಕ್ಷಿಸಲಿಕ್ಕೆ ಎಡೆ ಮಾಡಿಕೊಟ್ಟಿತು.

    Original price was: $5.10.Current price is: $4.60.
    Add to basket
  • -10%

    ಯಯಾತಿ – ನಾಟಕ

    0

    ಯಯಾತಿ – ನಾಟಕ

    ಇದು ಗಿರೀಶ ಕಾರ್ನಾಡ ರಚನೆಯ ನಾಟಕವಾಗಿದೆ.

    Original price was: $1.56.Current price is: $1.40.
    Add to basket
  • -10%

    ಅಗ್ನಿ ಮತ್ತು ಮಳೆ

    0

    ಇದು ಗಿರೀಶ್ ಕಾರ್ನಾಡವರು  ಬರೆದ  ನಾಟಕವಾಗಿದೆ.ಶ್ರೀಯುತ ಗಿರೀಶ ಕಾರ್ನಾಡರು ೧೯೯೩ ರಲ್ಲಿ ಅಮೇರಿಕಾದ ಮಿನಿಯಾಪೋಲಿಸ್ ನಗರದ ಗಥ್ರೀ ಥಿಏಟರ್ ನಾಟ್ಯ ಸಂಸ್ಥೆಯವರಿಗಾಗಿ ಬರೆದ ನಾಟಕ.

    Original price was: $1.32.Current price is: $1.19.
    Add to basket
  • -10%

    ಕಥನ ಕಾರಣ

    0

    ಕಥನ ಕಾರಣ  –
    (
    ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ವಿಶ್ಲೇಷಣೆ)

    ಪುಸ್ತಕದಲ್ಲಿ  ೭೦  ಬೇರೆ ಬೇರೆ ಲೇಖಕರ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ . ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳುಯಾವುದೇ ಸಾಹಿತ್ಯಿಕ ಓದು ಸಮಕಾಲೀನ ಸಮಾಜಸಂಸ್ಕೃತಿರಾಜಕಾರಣವನ್ನು ಸಂಪೂರ್ಣವಾಗಿ ಹೊರಗಿಡುವಂತಿಲ್ಲ  ಎಂಬ ಎಚ್ಚರವನ್ನು    ಕೃತಿ ತಿಳಿಸುತ್ತದೆ.

    Original price was: $4.20.Current price is: $3.78.
    Add to basket
  • -10%

    ಮಸುಕು ಬೆಟ್ಟದ ದಾರಿ

    0

    ಮಸುಕು ಬೆಟ್ಟದ ದಾರಿ :

    ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗ ನಿರಂಜನ ಇಲ್ಲಿನ ನಾಯಕ. ಮೆದು ಮನಸ್ಸು, ಸರಳ ಸೌಜನ್ಯದ ಪೊಲೀಸ್ ಕಾನ್ಸ್‌ಟೇಬಲ್ ರಾಜೀವ ಈತನ ತಂದೆ. ತಂದೆಯಾಗಿ ಮಗನನ್ನು ಜೀವನದಲ್ಲಿ ನಿಲ್ಲಿಸಲು ಆತ ಪಡುವ ಪಡಿಪಾಟಲು ಮೊದಲ ಭಾಗದಲ್ಲಿದೆ. ನಿರಂಜನನ ಎಲ್ಲ ನೆನಪುಗಳೂ ಶಾಶ್ವತ, ಭಾವನೆಗಳ ಸಮೇತ.  ಇತರರಲ್ಲಿ ಇರುವಂತೆ ಶಾಶ್ವತ ನೆನಪು ಹಾಗೂ ತಾತ್ಕಾಲಿಕ ನೆನಪು ಎಂಬ ಭಾಗಗಳಿಲ್ಲ, ಕ್ರಮೇಣ ಮರೆತು ಹೋಗುವುದೂ ಇಲ್ಲ. ನಿಯಂತ್ರಣ ಕೂಡ ಇಲ್ಲದ ನೆನಪುಗಳ ಪ್ರವಾಹದಲ್ಲಿ ಸಿಕ್ಕಿಕೊಳ್ಳುವ ನಿರಂಜನ ಶಾಲೆಯಲ್ಲಿ ತುಂಬ ಹಿಂದೆ ಬೀಳುತ್ತಾನೆ. ಬೆಂಗಳೂರು ನಿಮ್ಹಾನ್ಸ್ ಡಾಕ್ಟರರು ಅವನ ಕಾಯಿಲೆಯನ್ನು ಸರಿಯಾಗಿ ನಿದಾನ ಮಾಡುತ್ತಾರಾದರೂ, ಪರಿಹಾರ ಅವರಿಗೂ ತಿಳಿಯದು. ನಿರಂಜನನ ತಾಯಿ ಸತ್ತದ್ದು, ರಾಜೀವ ಮರುಮದುವೆ ಆಗದಿರುವುದು, ಅವರ ನೆಂಟರುಗಳ ವಿವರ ಅವನ ಕೌಟುಂಬಿಕ ಹಿನ್ನೆಲೆಯನ್ನು ನೀಡುತ್ತದೆ.

    Original price was: $3.60.Current price is: $3.24.
    Add to basket
  • -10%

    ನಾಗಮಂಡಲ – ನಾಟಕ

    0

    ನಾಗಮಂಡಲ – ನಾಟಕ

    Original price was: $0.96.Current price is: $0.86.
    Add to basket
  • -10%

    ತಲೆದಂಡ

    0

    ತಲೆದಂಡ :

    ತಲೆದಂಡ ನಾಟಕದ ನಿಜವಾದ ವಸ್ತು ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ ಹಾಗೂ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿ. ನಿಜವಾದ ಕ್ರಾಂತಿ ಕೊನೆಯಿಲ್ಲದ ಒಂದು ಪ್ರತಿಕ್ರಿಯೆಯಾಗಿರುವುದರಿಂದ ಹಾಗೂ ಅದರ ಪರಿಣಾಮಗಳು ದೂರಗಾಮಿಯಾಗಿರುವುದರಿಂದ ಸೋಲು ಅದರ ಒಂದು ಅವಸ್ಥೆಯನ್ನು ಮಾತ್ರ ಸೂಚಿಸುತ್ತದೆ. ತಾನು ಹುಟ್ಟು ಹಾಕಿದ ಕ್ರಾಂತಿ ಒಂದಿಲ್ಲೊಂದು ದಿನ ಯಶಸ್ವಿಯಾಗುತ್ತದೆ ಎಂದು ಬಸವಣ್ಣ ನಂಬಿದ್ದಾನೆ. ಒಂದು ದಿವಸ ವರ್ಣಾಶ್ರಮ ಧರ್ಮ ಜಾತಿ ವ್ಯವಸ್ಥೆ ಇವೆಲ್ಲ ಅಳಿದು ಹೋಗುತ್ತವೆ. ಮಾತು ವೀರಶೈವ ಶರಣರ ಕ್ರಾಂತಿಗೂ ಅನ್ವಯಿಸುವಂತದು. ನಾಟಕ ಕ್ರಾಂತಿಯ ಸ್ವರೂಪ ಹಾಗೂ ಅದರ ಸೋಲು ಗೆಲುವುಗಳಿಗೆ ಕಾರಣವಾದ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳ ಶೋಧನವಾಗಿರುವುದರಿಂದ ಅದು ಸಾವ್ರತ್ರಿಕತೆಯನ್ನು ಪ್ರಸ್ತುತಪಡಿಸುತ್ತದೆ.

    Original price was: $1.56.Current price is: $1.40.
    Add to basket
  • -10%

    ಬಾರೋ ಸಾಧನಕೇರಿಗೆ ಮತ್ತು ನಿಷ್ಕ್ರಿಯ ಘಾತಕಿ

    0

    ಬಾರೋ ಸಾಧನಕೇರಿಗೆ

    ಬಾರೋ ಸಾಧನಕೇರಿಗೆಮತ್ತುನಿಷ್ಕ್ರಿಯ ಘಾತಕಿಎಂಬ ಬಾನುಲಿ ನಾಟಕಗಳನ್ನು ವಿಶೇಷವಾಗಿ ಆಕಾಶವಾಣಿಗೆಂದು ಬರೆದು ತೆಗೆದದ್ದು. ‘ನಿಷ್ಕ್ರಿಯ ಘಾತಕಿ೨೦೧೦ರಲ್ಲಿ ಧಾರವಾಡ ಆಕಾಶವಾಣಿಯಿಂದ ಪ್ರಸಾರಗೊಂಡು ರಾಜ್ಯಮಟ್ಟದ ಆಕಾಶವಾಣಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ, ಕೇಂದ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು.
    ಸಧ್ಯದ ವಾತಾವರಣದಲ್ಲಿ ಎಲ್ಲರ ಮುಖ . ಟಿ. ಕ್ಷೇತ್ರದತ್ತ ಹಾಗೂ ಪಶ್ಚಿಮದ ದೇಶಗಳತ್ತ ಮುಖ ಮಾಡಿರುವಾಗ ದೇಶೀಯ ಆಕರ್ಷಣೆ ತನ್ನ ಕಳೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹೇಗೆ ಮತ್ತೆ ಮಾತೃಭೂಮಿ ತನ್ನ ನಿರಂತರವಾದ ಸೂಜಿಗಲ್ಲಿನ ಆಕರ್ಷಣೆಯಿಂದ ಪರದೇಶಿಗಳಾದವರನ್ನು ತನ್ನ ಹತ್ತಿರ ಎಳೆದುಕೊಳ್ಳುತ್ತದೆ ಎಂಬ ವಸ್ತುವನ್ನಿಟ್ಟುಕೊಂಡು ಬರೆದ ನಾಟಕಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ, ಬೇಂದ್ರೆಯವರ ಕವನದ ಸಾಲುಗಳ ಶೀರ್ಷಿಕೆಯಾಗಿಸಿಕೊಂಡು ಹೆಣೆದ ಪ್ರಾರಂಭದ ವಾಕ್ಯವನ್ನು ನಾಟಕ ಅರ್ಥಪೂರ್ಣವಾಗಿದೆ.
    ಹಾಗೆಯೇನಿಷ್ಕ್ರಿಯ ಘಾತಕಿಎಂಬ ನಾಟಕ ಜನಸಾಮಾನ್ಯರ ಅಲಿಪ್ತತೆ ಹೇಗೆ ಜೀವನದ ಸ್ವಾಸ್ಥ್ಯವನ್ನು ಹಾಳು ಮಾಡುವದಕ್ಕೆ ಕಾರಣವಾಗುತ್ತದೆ ಎಂಬುದನ್ನು ಮನನೀಯವಾಗಿ ನಿರೂಪಿಸುತ್ತದೆ.

    Original price was: $0.72.Current price is: $0.65.
    Add to basket
  • -10%

    ಹೊಡಿ ಚಕ್ಕಡಿ

    0

    ಹೊಡಿ ಚಕ್ಕಡಿ

    ಹಿಂದುಳಿದ ವರ್ಗದ ವಿದ್ಯಾರ್ಥಿಗಳ ನರಕ ಸದೃಶ ಹಾಸ್ಟೆಲ್ಲಿನ ಕಥೆಯನ್ನು ಸಮಕಾಲೀನ ರಾಜಕೀಯ, ಜಾತಿಯ ವಿಷ, ಬುದ್ಧಿಜೀವಿ ಸೋಗಲಾಡಿತನ, ಡಾಂಭಿಕ ಆಧ್ಯಾತ್ಮಿಕತೆ ಮತ್ತು ಮಾನವಂತ ಸಮಾಜಕ್ಕೆ ಇರಬೇಕಾದ ಕನಿಷ್ಠ ನೈತಿಕತೆಗಳ ಗೈರುಹಾಜರಿಯನ್ನುಹಸಿವೆಯೆ ನಿಲ್ಲು ನಿಲ್ಲುಕಥೆ ಕಟುವ್ಯಂಗ್ಯ, ಹರಿತ ಭಾಷೆಯ ಟೀಕೆ ಟಿಪ್ಪಣಿ, ನೈತಿಕ ವ್ಯಾಖ್ಯಾನಗಳ ಮೂಲಕ ಕಟ್ಟಿಕೊಡಲು ಪ್ರಯತ್ನಿಸುತ್ತದೆ. ಅತಿ ಬರವಣಿಗೆಯಂತೆ ಕಾನಬಹುದಾದ ಶೈಲಿಯೇ ಬಸು ಬೇವಿನಗಿಡದ ಅವರ ಕಥೆಯ ಯಶಸ್ಸಿಗೆ ಕಾರಣವಾಗಿದೆ.

    Original price was: $1.20.Current price is: $1.08.
    Add to basket
  • -10%

    ಬಲಿ

    0

    ಬಲಿ
    (ಹಿಟ್ಟಿನ ಹುಂಜ)

    Original price was: $0.84.Current price is: $0.76.
    Add to basket
  • -10%

    ಅಂಜುಮಲ್ಲಿಗೆ

    0

    ಅಂಜುಮಲ್ಲಿಗೆಯ ವಸ್ತು ಸಮಕಾಲೀನವಾದದ್ದು. ಕಾರ್ನಾಡ ಅವರು ಇಂಗ್ಲೆಂಡಿನಲ್ಲಿದ್ದು ನಡೆದ ಒಂದು ಸತ್ಯ ಸಂಗತಿ ನಾಟಕದ ವಸ್ತು ಎಂದು ಕಾರ್ನಾಡ ಅವರೇ ಸೂಚಿಸಿದ್ದಾರೆ. ಆದರೂ ಇತಿಹಾಸ ಮತ್ತು ಪುರಾಣಗಳಲ್ಲಿ ಅದರ ಬೀಜಗಳಿರುವುದನ್ನು ಅವರು ಉದ್ದೇಶಪೂರ್ವಕವಾಗಿ ನಮ್ಮ ಲಕ್ಷ್ಯಕ್ಕೆ ತಂದಿದ್ದಾರೆ. ಯಾಮಿನಿ ಹಾಗೂ ಅವಳ ತಮ್ಮ ಸತೀಶ ಇವರ ಸಮಸ್ಯಾತ್ಮಕ ಸಂಬಂಧ ನಾಟಕದ ವಸ್ತು. ಈಜಿಪ್ತಿನ ಅರಸು ಮನೆತನದಲ್ಲಿ ಸಹೋದರ ಸಹೋದರಿಯ ವಿವಾಹ ನಿಶಿದ್ಧವಾಗಿರಲಿಲ್ಲ. ಕ್ಲಿಯೋಪಾತ್ರ ತನ್ನ ಸಹೋದರನನ್ನೇ ಮದುವೆಯಾಗಿದ್ದಳು ಎಂದು ಹೇಳುವ ಮೂಲಕ ಯಾಮಿನಿ ಸತೀಶರ ಸಂಬಂಧದ ಮೇಲೆ ಕಾರ್ನಾಡ ಅವರು ಬೆಳಕು ಚೆಲ್ಲಿದ್ದಾರೆ.

    Original price was: $1.08.Current price is: $0.97.
    Add to basket
  • -10%

    ಹೆಗ್ಗುರುತು

    0

    ಹೆಗ್ಗುರುತು  –

    ಹಿರಿಯ ಕತೆಗಾರ ಕೆ ಸತ್ಯನಾರಾಯಣ ಅವರ ಕಥಾಸಂಕಲನ ಇದು.  ಚಿಕ್ಕತಾಯಿ, ಡಾಕ್ಟರನ ಹುಚ್ಚುಮಗು ಸೇರಿದಂತೆ ೨೦೧೦ರ ಈಚೆಗೆ ಬರೆದ ಅವರ ಹತ್ತು ಕತೆಗಳನ್ನು ನಾವಿಲ್ಲಿ ಓದಬಹುದು. ಪುಸ್ತಕದ ಕಡೆಯಲ್ಲಿ ಕತೆ ಕತೆಯಾಗುವ ರೀತಿ ಎಂಬ ಅನುಬಂಧವೂ ಇದೆ.ಇದರಲ್ಲಿನ ಕಥೆಗಳು ಸಮಕಾಲೀನ ಸಾಮೂಹಿಕ ವಾಸ್ತವಗಳ ಶೋಧನೆಯನ್ನು ಬದುಕಿನ ವೈರುಧ್ಯಗಳು ಹಾಗೂ ಜಠಿಲತೆಗಳನ್ನು ಗ್ರಹಿಸಿಕೊಂಡ ಸಮೃದ್ಧವಾದ ಕಥೆಗಳಿವೆ. ಅವು ಇವತ್ತಿನ ನಮ್ಮ ಬದುಕಿನ ಅನೇಕ ಮಗ್ಗಲುಗಳ ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತವೆ. ಸಮಷ್ಠಿತ ಸಹಬಾಳ್ವೆಗಾಗಿ ತುಡಿಯುವ ಕಥೆಗಳಿವು.

    Original price was: $1.44.Current price is: $1.30.
    Add to basket
  • -10%

    ತುಘಲಕ್

    0

    ತುಘಲಕ್ –

    ದೃಶ್ಯ : ಒಂದು
    (ಕ್ರಿ.ಶ. ೧೩೨೭)
    (ದಿಲ್ಲಿಯ ಒಂದು ನ್ಯಾಯಾಲಯ. ನ್ಯಾಯಾಲಯದ ಹೊರಗೆ ಜನರು ನೆರೆದಿದ್ದಾರೆ. ಹೆಚ್ಚಾಗಿ ಎಲ್ಲರೂ ಮುಸಲ್ಮಾನರು.)
    ಮುದುಕ ಏನಾಗುವದಿದೆಯೋ ಏನೋ ಈ ನಾಡಿಗೆ !
    ತರುಣ ಏಕೆ ಅಜ್ಜಾ , ನಿನಗೆ ಯಾವುದರ ಚಿಂತೆ ಹತ್ತಿದೆ ಈಗ ?
    ಮುದುಕ ಏನು ಚಿಂತೆಯೋ ಏನು ಮಣ್ಣೋ, ಜಮಾಲ. ಇಷ್ಟು ವರ್ಷ ಬಾಳಿ, ಇಷ್ಟೆಲ್ಲ ಅರಸರನ್ನು ನೋಡಿ ಆಯಿತು. ಈಗ ಕಣ್ಣು ಮುಚ್ಚುವ ದಿನಗಳಲ್ಲಿ ಹೀಗೆ ಕಳ್ಳನ ಹಾಗೆ ಕಾಜಿಯ ಎದುರಿಗೆ ಕೈಕಟ್ಟಿ ನಿಲ್ಲುವ ಅರಸನನ್ನು ನೋಡಬಹುದು ಎಂದು ಕನಸಿನಲ್ಲೂ ಎಣಿಸಿರಲಿಲ್ಲ ……………………………..

    Original price was: $1.56.Current price is: $1.40.
    Add to basket
  • -10%

    ಸತ್ತು ಹುಟ್ಟಿದ್ದು

    0

    ಸತ್ತು ಹುಟ್ಟಿದ್ದು
    (ವೈದ್ಯಕೀಯ ರೋಮಾಂಚಕಾರಿ ಕಾದಂಬರಿ)

    ಔಷಧೀಯ ವಿಭಾಗವು ಮಹಾನ್ ರೀತಿಯಲ್ಲಿ ಬೆಳೆದಿದೆ ಮತ್ತು ಇಂದು, ಅನೇಕಾನೇಕ ಔಷಧ. ಗುಳಿಗೆಗಳು ಭಾರತೀಯ ಕಂಪೆನಿಗಳ ಮೂಲದಿಂದ ಒಯ್ಯಲ್ಪಡುತ್ತ, ಜಗತ್ತಿನ ಉದ್ದಗಲ ವಿಶಿಷ್ಟ ಭಾರತೀಯ ಔಷಧಗಳು ಮುಟ್ಟುತ್ತಿವೆ. ಔಷಧ ಕಂಪೆನಿಗಳು, ಹೊಸ ಜೀವಾಣುಗಳು ಅಥವಾ ಹೊಸ ಸದಾ ತೋರುವ ಹೊಸ ಗುಳಿಗೆಗಳ ಸಂಶೋಧನೆ ಮಾಡುತ್ತಾ ತುಂಬಾ ಹಣವನ್ನು ಖರ್ಚುಮಾಡಿವೆ. ಕೆಲ ಹೊಸ ಜೀವಾಣುಗಳು, ವಿಶಾಲ ವೈದ್ಯಕೀಯ ಪರೀಕ್ಷೆಗಳಿಂದ ಒಪ್ಪಿಗೊಂಡು ಪ್ರಕಾಶಕ್ಕೆ ಬರಲು ಕಾಯುತ್ತಿವೆ. ಆದರೆ ಅತಿನೂತನ ಔಷಧ ಗುಳಿಗೆಯ ಇನ್ನೂ ಮಾರ್ಕೆಟ್ಟಿಗೆ ಬರಬೇಕಷ್ಟೆ. ಹಾಗಿದ್ದರೂ, ವೈದ್ಯಕೀಯ ಪ್ರಯೋಗಗಳಿಗೆ ಭಾರತವು ಒಂದು ಮೆಚ್ಚಿನ ಗುರಿತಾಣವಾಗಿದೆ, ಹಾಗೂ ಎಲ್ಲ ಪ್ರಯೋಗಗಳಲ್ಲಿ ಸುಮಾರು ೨೦೧೦ ಭಾರತದಲ್ಲಿ ಮಾಡಲ್ಪಡುತ್ತವೆ. ನನ್ನ ಕಾದಂಬರಿಯಲ್ಲಿ ಹೇಳಲ್ಪಟ್ಟ ದುರದೃಷ್ಟದಿಂದ ಸಾಮಾನ್ಯ ಜನರನ್ನು ರಕ್ಷಿಸಲಿಕ್ಕಾಗಿ, ಈ ಪ್ರಯೋಗ ಪ್ರಕ್ರಿಯೆಯನ್ನು ಹೆಚ್ಚು ಸರಿಯಾಗಿ ನಿಯಮನಗೊಳಿಸಲು ಸರಕಾರವು ಪ್ರಯತ್ನಿಸಿದೆ.

    ಇದು ಶ್ರೀಮತಿ ರೋಹಿಣಿ ನಿಲೇಕಣಿ ಅವರ ಪೆಂಗ್ವಿನ್ ಪ್ರಕಾಶಕರಿಂದ ಇಂಗ್ಲೀಷನಲ್ಲಿ “ಸ್ಟಿಲ್ ಬಾರ್ನ್” ಎಂಬ ಹೆಸರಿನಲ್ಲಿ ಪ್ರಕಟವಾಗಿದ್ದು ಇದನ್ನು ಆರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

    Original price was: $2.40.Current price is: $2.16.
    Add to basket
  • -10%

    ಪಾಚಿ ಕಟ್ಟಿದ ಪಾಗಾರ

    0

    ಪಾಚಿ ಕಟ್ಟಿದ ಪಾಗಾರ :
    (ಕಾದಂಬರಿ)

              ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಗಾರ್ತಿ ಮಿತ್ರಾ ವೆಂಕಟರಾಜ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿ ನೀತಿಗಳ ಇತರ ಸಾಧಾರಣ ಕುಟುಂಬಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಸವಿವರವಾಗಿ ಚಿತ್ರಿಸಲಾಗಿದೆ. ಮಿತ್ರಾ ವೆಂಕಟರಾಜ ಅವರು ಎರಡು ಭಾಗಗಳಲ್ಲಿ ಕಾದಂಬರಿಯ ಒಟ್ಟು ಜೀವನದ ಪರಂಪರೆ ಅಳಿಸಿಹೋಗದಹಾಗೆ ಚಿತ್ರಿಸಿ ಮುಂದಿನ ತಲೆಮಾರಿಗೆ ದಾಖಲೆ ಉಳಿಸಿದ್ದಾರೆ.

    Original price was: $3.60.Current price is: $3.24.
    Add to basket
  • -10%

    ಟಿಪೂ ಸುಲ್ತಾನ ಕಂಡ ಕನಸು

    0

    ಟಿಪೂ ಸುಲ್ತಾನ ಕಂಡ ಕನಸು :

    1997 ರಲ್ಲಿ ಭಾರತೀಯ ಸ್ವಾತಂತ್ರ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಇಂಗ್ಲೆಂಡಿನ ಬಿ.ಬಿಸಿ. ರೇಡಿಯೋದವರು ನನಗೆ ಸ್ವಾತಂತ್ರ್ಯ ದಿನಂದು ಬಿತ್ತರಿಸಲಿಕ್ಕಾಗಿ ಒಂದು ನಾಟಕ ಬರೆದುಕೊಡಲು ಕೇಳಿಕೊಂಡರು. ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತದ್ದಾಗಿರಬೇಕು ಎಂಬ ಮಾತು ಸೂಚ್ಯವಾಗಿ ಬಂದಾಗ ನನಗೆ ಕೂಡಲೆ ಹೊಳೆದದ್ದು ಕರ್ನಾಟಕದ ಕೊನೆಯ ಸ್ವತಂತ್ರ ಶಾಸಕನಾದ ಟಿಪೂ ಸುಲ್ತಾನನ ದುರಂತ! ತನ್ನ ಇಡಿಯ ಬಾಳನ್ನು ಬಡಿದಾಟದಲ್ಲೇ ನೀಗಿಸಿದ ಈ ವ್ಯಕ್ತಿ ಗುಟ್ಟಾಗಿ ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಎಂಬ ಮಾತನ್ನು ಏ.ಕೆ.ರಾಮಾನುಜನ್‍ರಿಂದ ಕೇಳಿದಂದಿನಿಂದ ನನಗೆ ಟಿಪೂವಿನಲ್ಲಿ ವಿಶೇಷ ಆಸಕ್ತಿ ಉಂಟಾಗಿತ್ತು. ಅದೇ ನಾಟಕ  ರಚನೆಗೆ ಪ್ರೇರಣೆಯಾಯಿತು.

    Original price was: $1.20.Current price is: $1.08.
    Add to basket
  • -10%

    ಹಯವದನ

    0

    ಹಯವದನ

    ಶ್ರೀ ಗಿರೀಶ ಕಾರ್ನಾಡರ ‘ಹಯವದನ’ ನಾಟಕವು ಎಪ್ಪತ್ತರ ದಶಕದಲ್ಲಿ ಅವರು ಹೋಮಿಭಾಭಾ ಫೆಲೋಶಿಪ್ ಪಡೆದು ಧಾರವಾಡದಲ್ಲಿದ್ದಾಗ ಬರೆದದ್ದು. ಈ ನಾಟಕಕ್ಕೆ ರಾಷ್ಟ್ರಮಟ್ಟದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯೂ ದೊರಕಿದೆ. ಶ್ರೀ ಸತ್ಯದೇವ ದುಬೆ, ಬಿ.ವಿ. ಕಾರಂತರಂಥ ನಿರ್ದೕಶಕರಿಂದ ಅನೇಕ ಪ್ರದರ್ಶನಗಳನ್ನು ಕಂಡಿದೆ. ಶ್ರೀ ದುಬೆಯವರ ಹಿಂದೀ ಪ್ರದರ್ಶನದಲ್ಲಿ ಶ್ರೀ ಅಮೋಲ ಪಾಲೇಕರ, ದಿ. ಅಮರೀಶಪುರಿ ಶ್ರೀಮತಿ ಸುನೀತಾ ಪ್ರಧಾನ ಮುಂತಾದವರು ಪಾತ್ರವಹಿಸಿ, ಈ ನಾಟಕದ ಪ್ರದರ್ಶನ ಅತ್ಯಂತ ಯಶಸ್ವಿಯಾಗಲು ಮತ್ತು ಬಹುಕಾಲ ಜನರ ಮನಸ್ಸಿನಲ್ಲಿ ಬೇರೂರಲು ಕಾರಣವಾಯಿತು.

    Original price was: $1.08.Current price is: $0.97.
    Add to basket
  • -10%

    ನಾ ಬದುಕಲಿಕ್ಕೆ ಒಲ್ಲೆಪಾ

    0

    ನಾ ಬದುಕಲಿಕ್ಕೆ ಒಲ್ಲೆಪಾ  –

    ಇದು ದ್ವಿಪಾತ್ರ ನಾಟಕಗಳ ಸಂಕಲನ. ದ್ವಿಪಾತ್ರ ನಾಟಕಗಳಿಗೆ ಸಂಭಾಷಣೆಯೇ ಜೀವಾಳ . ಸಂಭಾಷಣೆ ಮೂಲಕವೇ ಕುತೂಹಲವನ್ನು ಹುಟ್ಟಿಸುವ ತಂತ್ರಗಾರಿಕೆಯೇ ನಾಟಕದ ಮೂಲ ವಸ್ತು. ಯಾವುದೇ ಒಂದು ಸಮಸ್ಯೆಯನ್ನು ಎದುರಿಗಿಟ್ಟುಕೊಂಡು ಅದರ ಪರ ಮತ್ತು ವಿರೋಧದ ವಾಗ್ವಾದದ ಮೂಲಕವೇ ನಾಟಕವನ್ನು ರಚಿಸುವ ಜಾಣಕಲಾತ್ಮಕಯೇ ನಾಟಕಕಾರಣನ ಹಿರಿಮೆ. ಈ ನಿಟ್ಟಿನಲ್ಲಿ ಲೋಹಿತ ನಾಯ್ಕರ್ ಯಶಸ್ವಿಯಾಗಿದ್ದಾರೆ.
    ಈ ನಾಟಕಗಳು ಹವ್ಯಾಸಿ ರಂಗಭೂಮಿಗೆ ಸೂಕ್ತವಾಗಿವೆ.

    Original price was: $0.96.Current price is: $0.86.
    Add to basket
  • -10%

    ಹಿಡಿಯದ ಹಾದಿ

    0

    ಹಿಡಿಯದ ಹಾದಿ
    (ಲಲಿತ ಪ್ರಬಂಧಗಳು)

    ಗಿರಡ್ಡಿ ಗೋವಿಂದರಾಜ ಅವರು ತಮ್ಮೆಲ್ಲ ಪೂರ್ವಗ್ರಹಗಳು ವೈಯಕ್ತಿಕ ಬೇಕು ಬೇಡಗಳು,  ಸ್ವಂತದ ವಿಚಾರಗಳು ಎಲ್ಲವನ್ನೂ ನಿರ್ಮಲ ಹಾಸ್ಯದಲ್ಲಿ ಯಾರನ್ನೂ ತೇಜೋವಧೆ ಮಾಡದಂತ ತುಂಟತನದಲ್ಲಿ ಆಪ್ತಸಂವಾದದ ಸಹಜ ಬೆಚ್ಚನೆಯ ಧಾಟಿಯಲ್ಲಿ ಈ ಪ್ರಂಬಂಧಗಳನ್ನು ರಚಿಸಿದ್ದಾರೆ. ಇವು ಕನ್ನಡ ಪ್ರಬಂಧಕ್ಕೆ ನಿಜವಾದ ಅರ್ಥದಲ್ಲಿ ಆಧುನಿಕತೆಯ ನೆಲೆಯನ್ನು ದೊರಕಿಸಿವೆ. ಇವುಗಳಲ್ಲಿ ಜೀವನ ದೃಷ್ಟಿ, ಹುರುಪು,ಉಲ್ಲಾಸ, ಹಾಗು ಜೀವಪ್ರೀತಿ ಈ ಪ್ರಬಂಧಗಳ ಮುಖ್ಯ ಶಕ್ತಿ.

    Original price was: $1.20.Current price is: $1.08.
    Add to basket
  • -10%

    ಮದುವೆಯ ಆಲ್ಬಮ್

    0

    ಮದುವೆಯ ಆಲ್ಬಮ್
    – ನಾಟಕ –

           ಮದುವೆಯ ಅಲ್ಬಮ್ ಸಮಕಾಲೀನ ಜೀವನದ ಬಗ್ಗೆ ಗಿರೀಶ ಕಾರ್ನಾಡ ಅವರು ಬರೆದ ನಾಟಕ. ಇದರಲ್ಲಿರುವುದು ಸಮಕಾಲೀನ ಸಂವೆದನೆಯೇ ಹೊರತು ವಿಷಯವಲ್ಲ ಎಂದು ಗಿರೀಶ ಕಾರ್ನಾಡರ ಅಭಿಪ್ರಾಯ.

        ‘ಮದುವೆಯ ಆಲ್ಬಮ್’ ನಾಟಕದ ಮೊದಲನೆಯ ಪ್ರಯೋಗವನ್ನು Prime Time Theatre Company ಅವರು ಇಂಗ್ಲಿಷ್ ನಲ್ಲಿ Wedding Album ಎಂಬ ಹೆಸರಿನಲ್ಲಿ ಮುಂಬಯಿಯ National Centre for the Performing Arts ಅವರ ಟಾಟಾ ನಾಟ್ಯಗೃಹದಲ್ಲಿ ಶನಿವಾರ ೧೦ಮೇ ೨೦೦೮ರಂದು ಸಾದರಪಡಿಸಿದರು.

    Original price was: $1.20.Current price is: $1.08.
    Add to basket
  • -10%

    ಬೆಂದ ಕಾಳು ಆನ್ ಟೋಸ್ಟ್

    0

    ಬೆಂದ ಕಾಳು ಆನ್ ಟೋಸ್ಟ್

    ಒಂದು ಆಖ್ಯಾಯಿಕೆಯ ಪ್ರಕಾರ ಅರಸ ವೀರ ಬಲ್ಲಾಳ ಬೇಟೆಗೆಂದು ಹೊರಟವನು ಕಾಡಿನಲ್ಲಿ ದಾರಿ ತಪ್ಪಿ, ರಾತ್ರಿಯಿಡೀ ಸುತ್ತಾಡಿ ಹಸಿದು ಬಳಲಿ ಬಸವಳಿದಾಗ, ಒಬ್ಬ ಮುದುಕಿ ಅವನಿಗೆ ಬೆಂದ ಕಾಳುಗಳನ್ನು ನೀಡಿ ಅವನ ಪ್ರಾಣ ಉಳಿಸಿದಳು. ಉಪಕಾರವನ್ನು ಸ್ಮರಿಸಿ ಅರಸ ಸ್ಥಾನದಲ್ಲಿಬೆಂದಕಾಳೂರುಎಂಬ ಊರನ್ನು ಸ್ಥಾಪಿಸಿದ. ಅದೇ ಮುಂದೆಬೆಂಗಳೂರುಆಯಿತು.

    Original price was: $1.44.Current price is: $1.30.
    Add to basket
  • -10%

    ಗಿರಡ್ಡಿಯವರ ಸಣ್ಣಕತೆಗಳು

    0

    ಗಿರಡ್ಡಿಯವರ ಸಣ್ಣಕತೆಗಳು :

              ಗಿರಡ್ಡಿಯವರು ಮೊದಲ ಓದಿಗೆ ಮನಸ್ಸಿಗೆ ತೆಕ್ಕೆ ಬೀಳುವಂಥಕಥೆಗಳನ್ನು ಕೊಟ್ಟಿದ್ದಾರೆ. ಇವರ ಕಥೆಗಳಲ್ಲಿ ಥಟ್ಟನೆ ಓದುಗರ ಮನಸ್ಸನ್ನು ಆಕರ್ಷಿಸುವ ಗುಣಗಳೆಂದರೆ ಸದ್ದಿಲ್ಲದೆ ಭಾಷೆ ಕೊಡುವ ಅನುಭವಇಲ್ಲಿ ಕಥೆಗಾರರ ನಿರ್ಲಿಪ್ತತೆಯಿಂದ ಹಲವು ಶಕ್ತಿಗಳು ಹೆಣೆದುಕೊಂಡು ತುಂಬಾ ಪರಿಣಾಮಕಾರಿಯಾದ ಮುಕ್ತಾಯವನ್ನು ಮುಟ್ಟಿ ಒಂದು ಸಂಕೀರ್ಣ, ಪರಿಪೂರ್ಣ ಅನುಭವವನ್ನು ಸಾಧಿಸುತ್ತದೆ.

    Original price was: $3.00.Current price is: $2.70.
    Add to basket
  • -10%

    ಸಾಹಿತ್ಯಲೋಕದ ಸುತ್ತ-ಮುತ್ತ

    0

    ತುಂಬಾ ಗಂಭೀರ ಧಾಟಿಯ ನಿಷ್ಠುರ ವಿಮರ್ಶಕರೆಂದೇ ಪ್ರಸಿದ್ಧರಾಗಿರುವ ಗಿರಡ್ಡಿ ಗೋವಿಂದರಾಜರ ವ್ಯಕ್ತಿತ್ವ ಮತ್ತು ಬರವಣಿಗೆಯ ಮತ್ತೊಂದು ಮುಖ್ಯ ಆಯಾಮವನ್ನು ತೋರುವ ಕೃತಿಸಾಹಿತ್ಯ ಲೋಕದ ಸುತ್ತಮುತ್ತ ”. ಪಠ್ಯ ಕೇಂದ್ರಿತ ವಿಮರ್ಶಕ ಈಗ ಪಠ್ಯದ ಸುತ್ತಮುತ್ತಲೂ ನೋಡುತ್ತಿದ್ದಾನೆ

    Original price was: $1.80.Current price is: $1.62.
    Add to basket
  • -10%

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

    0

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ :

    ಲೋಹಿತ್ ನಾಯ್ಕರ್ ಅವರು ವೃತ್ತಿಯಿಂದ ನ್ಯಾಯವಾದಿಗಳು. ಅವರಿಗೆ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ. ಅವರ ಹಿಂದಿನ ಎರಡು ಕಥಾ ಸಂಕಲನಗಳಲ್ಲಿ ಕಾಣಿಸಿಕೊಂಡಿದ್ದ ಆಸಕ್ತಿ ಸಂಕಲನದಲ್ಲೂ ಮುಂದುವರೆದಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂದರ್ಭ ಒಂದೆಡೆ ಕಾಯಿದೆ ದೃಷ್ಟಿಯಿಂದ ಸಮಸ್ಯೆಗಳಾಗಿದ್ದರೆ, ಇನ್ನೊಂದೆಡೆ ನೈತಿಕ ದೃಷ್ಟಿಯಿಂದ ಸಮಸ್ಯೆಗಳಾಗಿವೆ. ಸಂದಿಗ್ಧತೆಯನ್ನು ಲೋಹಿತ್ ಅವರ ಸಣ್ಣಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ.
    ಹಾಗೆಂದು ಇವು ಮಾನವ ಹಕ್ಕುಗಳು ಮತ್ತು ಜೀವನ ಸಂದರ್ಭಗಳ ಸಮಸ್ಯಾತ್ಮಕತೆಯನ್ನು ಉದಾಹರಿಸುವ ಕೇಸ್ ಹಿಸ್ಟರಿಗಳಲ್ಲ. ಸಮಸ್ಯೆಗಳ ಹಿಂದಿನ ತೊಡಕಾದ ಮಾನವೀಯ ಸಂಬಂಧಗಳ ಸಹನುಭುತಿಪರವಾದ ತಿಳುವಳಿಕೆಯೊಂದಿಗೆ ಹದವಾದ ಸೃಜನಶೀಲತೆಯನ್ನು ಮೇಳೈಸಿಕೊಂಡ ವಿಶಿಷ್ಟ ಬರಹಗಳಾಗಿವೆ. ಕಾಯಿದೆಯ ತಿಳುವಳಿಕೆಯೊಂದೇ ಇವುಗಳ ಹೆಚ್ಚಳವಲ್ಲ.ಅದಕ್ಕೆ ಲೋಹಿತ್ ಅವರು ತೋರಿರುವ ಸಹಜ ಸೃಜನಶೀಲತೆ ಮತ್ತು ಬದುಕಿನ ಅರ್ಥಪೂರ್ಣತೆಯ ಬಗೆಗಿನ ಕಳಕಳಿ ಮಹತ್ವದವಾಗಿವೆ.

    ವೈವಿಧ್ಯಪೂರ್ಣವಾದ ಸಂದರ್ಭ, ಪರಿಸರ, ಜೀವನನಿರೀಕ್ಷಣೆ, ಪ್ರಯೋಗಶೀಲತೆಗಳು ಕತೆಗಳ ಹರವನ್ನು ಹೆಚ್ಚಿಸಿವೆ. ಸೃಜನಶೀಲತೆಯ ಕೈ ಮೇಲಾಗಿ, ಸಮಸ್ಯೆಗಳು ಧ್ವನಿಪೂರ್ಣ ಬರಹಗಳಾದಾಗ ಅವರ ಕತೆಗಳು ಹೆಚ್ಚು ಯಶಸ್ವಿಯಾಗಿವೆ. ಹಾಗಾಗಿ ಇವು ಸಾಹಿತ್ಯಕವಾಗಿಯೂ ಕುತೂಹಲಕರ ಪ್ರಯೋಗಗಳಾಗಿವೆ .

    Original price was: $0.84.Current price is: $0.76.
    Add to basket
  • -10%

    ಹೊಳೆಮಕ್ಕಳು

    0

    ಇದು ಬಿದರಹಳ್ಳಿ ನರಸಿಂಹ ಮೂರ್ತಿಯವರ ಕಾದಂಬರಿ.

    Original price was: $2.40.Current price is: $2.16.
    Add to basket
  • -10%

    ತಂತ್ರಯೋನಿ

    0

    ತಂತ್ರಯೋನಿ :

    ‘ತಂತ್ರಯೋನಿ’  ಗ್ರಂಥ  ತಂತ್ರದ  ಶಾಸ್ತ್ರವನ್ನು  ಕುರಿತು  ವಿವರವಾಗಿ  ಹೇಳುತ್ತದೆ.  ತಂತ್ರ  ಒಂದು  ರಹಸ್ಯವಿದ್ಯೆ.  ಈ  ವಿದ್ಯೆಯನ್ನು  ಗುರುವಿನಿಂದ  ಪಡೆಯಲು  ಶಿಷ್ಯ  ಅಧಿಕಾರಿಯಾಗಿರಬೇಕು.  ‘ಅಶಿಷ್ಯಾಯ  ನ  ದೇಯಂ’  ಎನ್ನುವದು  ಇಂಥ  ವಿದ್ಯೆಗಳಿಗೆ  ಒಂದು  ನಿಷೇಧವಾಕ್ಯ. ದೀಕ್ಷೆ,  ಧ್ಯಾನ,  ಜಪ,  ಮಂತ್ರ  ಮೊದಲಾದವುಗಳು  ಕೂಡ  ತಂತ್ರವಿದ್ಯೆಯ  ಅಂಗಗಳಾಗಿರುವುದರಿಂದ  ಅವುಗಳನ್ನು  ಕುರಿತು  ಸಾಕಷ್ಟು  ವಿವರಗಳನ್ನು  ಈ  ಗ್ರಂಥದಲ್ಲಿ  ನೀಡಲಾಗಿದೆ.  

    Original price was: $4.50.Current price is: $4.06.
    Add to basket
  • -10%

    ಮುಖಾಂತರ

    0

    ಮುಖಾಂತರ

    ‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು  ಹಾಸು ಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗು ಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.
    ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗ ಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿದೆ.

    Original price was: $6.60.Current price is: $5.94.
    Add to basket
  • -10%

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು

    0

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು:

     “ಹೂವು, ಒಡಕಲು ಬಿಂಬ” ಗಿರೀಶ ಕಾರ್ನಾಡ ಅವರು ಗ್ರಂಥಮಾಲೆಗಾಗಿ ರಚಿಸಿದ ನಾಟಕಗಳ ಸಂಕಲನ. ಇದರಲ್ಲಿ ಹೂವು (ಭಾಷಣ ರೂಪಕ), ಒಡಕಲು ಬಿಂಬ (ನಾಟಕ), ಮಾನಿಷಾದ (ನಾಟಕ) ಮತ್ತು ಮಹೇಶ ಎಲಕುಂಚವಾರ ಅವರ ಎರಡು ಅನುವಾದಿತ ನಾಟಕಗಳು “ವಾಸಾಂಸಿ ಜೀರ್ಣಾನಿ” ಮತ್ತು “ಧರ್ಮ ಪುತ್ರ” ಸೇರಿವೆ.

    Original price was: $0.84.Current price is: $0.76.
    Add to basket