• -40%

    ಅಪೂರ್ವ ಪೂರ್ವ

    0

    ಅಪೂರ್ವ ಪೂರ್ವ

    ಥೈಲ್ಯಾಂಡ, ಮಲೇಶಿಯ, ಸಿಂಗಪೂರ ಮತ್ತು ಇಂಡೋನೇಶಿಯ ಕುರಿತು ‘ಆಗ್ನೇಯದಂಗಳದಲ್ಲಿ’ ಎಂಬ ನನ್ನ ಪ್ರವಾಸ ಕಥನ ಕೆಲ ವರ್ಷಗಳ ಹಿಂದೆ ಬಂದಿತ್ತು. ಪೂರ್ವ ಏಶಿಯಾದ ಕಾಂಬೋಡಿಯ, ವಿಯಟ್ನಾಂ ಕಥನಗಳನ್ನೊಳಗೊಂಡ ‘ಅಪೂರ್ವ ಪೂರ್ವ’ ಈಗ ತಮ್ಮ ಕೈಯಲ್ಲಿದೆ. ಕ್ರಿ.ಶ.ದ ಆರಂಭದಿಂದಲೂ ಭಾರತದ ಧಾರ್ಮಿಕ, ಸಾಂಸ್ಕೃತಿಕ ವಸಾಹತೀಕರಣಕ್ಕೊಳಪಟ್ಟು, ನಮ್ಮ ದೇಶದ ದಟ್ಟ ಪ್ರಭಾವಕ್ಕೊಳಗಾದ ದೇಶಗಳಿವು. ನಂತರ ನಮ್ಮಂತೆಯೆ ಪಶ್ಚಿಮ ದೇಶಗಳ ದಬ್ಬಾಳಿಕೆಗೆ ಒಳಪಟ್ಟು ನಲುಗಿದ ದೇಶಗಳು. ಆದರೂ ತಮ್ಮ ಐತಿಹಾಸಿಕ, ಪಾರಂಪರಿಕ, ಸಾಂಸ್ಕೃತಿಕ ಹಿರಿಮೆಗಳಿಂದಾಗಿ ಅವು ಪ್ರವಾಸಿಗರ ಆಕರ್ಷಕ ತಾಣಗಳಾಗಿವೆ.

    Original price was: $1.20.Current price is: $0.72.
    Add to cart
  • -40%

    ಕೈಲಾಸ-ಮಾನಸ

    0

    ಕೈಲಾಸ-ಮಾನಸ ಸರೋವರಗಳ ಯಾತ್ರೆ ಅದೊಂದು ಯಾತ್ರೆಗಳ ಯಾತ್ರೆ. ಅಗತ್ಯ ಮಾನಸಿಕ ಮತ್ತು ದೈಹಿಕ ದಾರ್ಢ್ಯತೆ ಇದ್ದರೆ ಮಾತ್ರ ಈ ಯಾತ್ರೆ ಪೂರೈಸಬಹುದು. ಭಾರತೀಯರ ಅದರಲ್ಲೂ ಹಿಂದೂ ಧರ್ಮಾನುಯಾಯಿಗಳ ಪಾಲಿಗೆ ಶಿವ ಆರಾಧ್ಯ ದೈವ. ದೇವಾನುದೇವತಗಳಲ್ಲಿ ಅಗಗ್ರಣ್ಯ. ಶಿವನ ಆವಾಸ ಸ್ಥಾನ ಕೈಲಾಸ ಪರ್ವತವೆಂದೂ, ವಿಷ್ಣುವಿನ ವಾಸಸ್ಥಾನ ಮಾನಸ ಸರೋವರವೆಂದೂ ಎಲ್ಲ ಭಾವುಕ ಭಕ್ತರ ತಲೆ ತಲಾಂತರದ ನಂಬಿಕೆ. ಪುರಾಣ, ಪುಣ್ಯಕತೆಗಳ ಪ್ರಕಾರ ಹಿಮಾಲಯ ಮತ್ತು ಕೈಲಾಸ ಪರಿಸರದ ಲೋಕ ದೇವಲೋಕ. ಜನಮಾನಸದಲ್ಲಿ ಈ ನಂಬಿಕೆ ಬೇರೂರಿನಿಂತಿದೆ. ಕೈಲಾಸ ಪರ್ವತ ಅದೊಂದು ಅಳಿವಿಲ್ಲದ ನೈಸರ್ಗಿಕ ಸ್ಥಾವರ. ಮಾನಸ ಸರೋವರ, ಕಿನ್ನರ ಲೋಕದ ಬತ್ತದ ಆಗರ. ಅವುಗಳ ಯಾತ್ರೆ ಆಸ್ತಿಕರ ಜೀವಮಾನದ ಆಶೆ.

    ಕೈಲಾಸಮಾನಸದೊಂದಿಗೆ ಹಿಮಾಲಯ, ಟಿಬೆಟ್, ನೇಪಾಳ ಕುರಿತು ಹಲವಾರು ವಿಷಯಗಳನ್ನು ಪ್ರವಾಸದ ವೇಳೆ ಅರಿಯಲು ಸಾಧ್ಯವಾಯಿತು. ಆದ್ದರಿಂದ ಹಿಮಾಲಯದ ವಿಭಿನ್ನ ಪ್ರಾಕೃತಿಕ ವೈಚಿತ್ರ್ಯಗಳ ಬಗ್ಗೆ, ಪರಿಸರದ ಬಗ್ಗೆ ಕೆಲವು ಅಂಶಗಳು ಈ ಕಥನದಲ್ಲಿ ಸೇರಿಕೊಂಡಿವೆ.

    Original price was: $1.50.Current price is: $0.90.
    Add to cart