ಇನ್ನೂ ಒಂದು
$1.77 $1.50 Add to basket
Sale!

ಇನ್ನೂ ಒಂದು

by Vivek Shanbhag

Sold by Akshara Prakashana

Ebook

$1.77 $1.50

ಇಲ್ಲಿ ಎರಡು ಜಗತ್ತುಗಳು ಪರಸ್ಪರ ಮುಖಾಮುಖಿಯಾಗುತ್ತ, ಸಮಾನಾಂತರವಾಗಿ ಚಲಿಸುತ್ತ, ತಿಕ್ಕಾಟಕ್ಕೂ ಸಮನ್ವಯಕ್ಕೂ ಸ್ಪಂದಿಸುತ್ತ ಸಾಗುತ್ತವೆ. ಆಧುನಿಕ ಜಗತ್ತಿನ ಜಾಹೀರಾತು ಕ್ಷೇತ್ರದಲ್ಲಿ ಕೆಲಸಮಾಡುವ ಮನೋಹರ್ ಮತ್ತು ಸ್ವಾತಿ, ಕೀಟಶಾಸ್ತ್ರಜ್ಞ ಎಂ.ಆರ್.ಕಶ್ಯಪ್, ಸ್ವಾತಿಯ ಹಿಂದೆ ಬೀಳುವ ಶಂಕರ್, ಸ್ವಾತಿಯ ಅಮ್ಮ ನಿರುಪಮಾ ಮತ್ತು ಇವರ ನಗರ ಜೀವನದ ವಿವರಗಳು ಆಧುನಿಕ ನಾಗರಿಕ ಜಗತ್ತಿನ ಮುಖಗಳನ್ನು ನಮಗೆ ಕಾಣಿಸುವ ಪ್ರಮುಖ ನೆಲೆ. ಹಾಗೆಯೇ ಕಾಶೀಶನ ಬಾಲ್ಯದ ವಿವರಗಳು, ನಿಗೂಢವಾಗಿ ಕಾಣುವ ಚಂಪಾ, ಯಶವಂತ ಚಿಕ್ಕಪ್ಪ ಮತ್ತು ಅವಳ ಸಂಬಂಧ, ಗೋವಾದ ಕಾಡಿನಂಚಿನ ಊರು, ಅಲ್ಲಿ ಸಿಗುವ ಲೋಲಾ, ಕಾಶೀಶನ ಯಶವಂತ ಚಿಕ್ಕಪ್ಪ, ಅವನ ಹೆಂಡತಿ ಮತ್ತು ಮಗಳಿಗೆ ಸುರುವಾದ ಚಂಪಾ ಚಿಂತೆಯೊಂದಿಗೇ ಮೇಲೆದ್ದು ಬರುವ ಮದುವೆ ಸೀರೆಯ ಗಲಾಟೆಗಳು, ವಸಂತ ನಡೆಸುವ ಕಾಶೀಶನ ಶೋಧ, ದಿನೂ ಅಂಕಲ್ ತೆರೆದಿಡುವ ಪುಟಗಳು, ಚಂದ್ರಹಾಸನ ಆಸ್ತಿ ಸಮಸ್ಯೆ, ಇವೆಲ್ಲ ಇನ್ನೊಂದೆಡೆ ಅಷ್ಟು ನಾಗರಿಕ ಬಣ್ಣಗಾರಿಕೆಯಿಲ್ಲದ ಒಂದು ಸಹಜ ಜಗತ್ತಿನ ನೆಲೆಯನ್ನು ನಮಗೆ ಒದಗಿಸುತ್ತವೆ. ಎರಡೂ ಜಗತ್ತಿನ ವೈರುಧ್ಯ, ಮಿತಿ, ಸವಾಲುಗಳು ಮತ್ತು ಸಾಧ್ಯತೆಗಳ ಅನಂತ ಆಯಾಮಗಳದ್ದೇ ಒಂದು ಕತೆ. ಇನ್ನೂ ಒಂದು ಕಾದಂಬರಿಯ ಸ್ಥಾಯೀ ಗುರುತ್ವ ಇದು, ಆದರೆ ಕಾದಂಬರಿಯ ಮಹತ್ವ ಇದಿಷ್ಟೇ ಆಗಿಲ್ಲದಿರುವುದು ಅದರ ಹೆಚ್ಚುಗಾರಿಕೆಯಾಗಿದೆ!

 

  • Category: Novel
  • Author: Vivek Shanbhag
  • Publisher: Akshara Prakashana
  • Language: Kannada
  • Book Format: Ebook

ಇದನ್ನು ಹೀಗೆ ನೋಡುವಂತೆ ಮಾಡುವುದು ಒಂದು ಜಗತ್ತಿನಿಂದ ಇನ್ನೊಂದಕ್ಕೆ ಯಾವುದೇ ಹೆಜ್ಜೆಗುರುತುಗಳನ್ನು ಉಳಿಸದೇ ಪಲಾಯನ ಮಾಡಿರಬಹುದಾದ ಒಂದು ಪಾತ್ರ; ಅದು ಕಶ್ಯಪ್ ಇರಬಹುದೆ ಎಂಬ ಅನುಮಾನ. ಅದು ನಿಜವೆಂತಲೂ, ಇದ್ದಿರಲಾರದು ಎಂತಲೂ ಇಬ್ಬಗೆಯಲ್ಲಿ ಕಾಣಿಸುತ್ತ ಇರುವಾಗಲೂ ಕಾದಂಬರಿ ಎರಡೂ ಪಾತಳಿಯ ವಿವರಗಳನ್ನು ಕಟ್ಟಿಕೊಡುತ್ತ ಹೌದಾಗಿದ್ದರೂ ಅಲ್ಲವಾಗಿದ್ದರೂ ಓದುಗ ಕಂಡುಕೊಳ್ಳಬಹುದಾಗಿದ್ದ ಸತ್ಯದ ಬಳಿಗೇ ಅವನನ್ನು ಕೊಂಡೊಯ್ಯುವುದೇ ಕಾದಂಬರಿಯ ವೈಶಿಷ್ಟ್ಯವಾಗಿದೆ.

Reviews

There are no reviews yet.

Only logged in customers who have purchased this product may leave a review.