ನಾಗೇಶ ಹೆಗಡೆ ಅವರ ಆಯ್ದ ಬರಹಗಳು
ನಾಗೇಶ ಹೆಗಡೆ
ನಾಗೇಶ ಹೆಗಡೆ ಅವರು ೧೪ ಫೆಬ್ರವರಿ ೧೯೪೮ರಂದು ಉ.ಕ. ಜಿಲ್ಲೆ ಶಿರಸಿ ಬಳಿಯ ಬಕ್ಕೆಮನೆಯಲ್ಲಿ ಜನಿಸಿದರು. ಖರಗಪುರ ಐಐಟಿ ಮತ್ತು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯಗಳಲ್ಲಿ ಭೂಗರ್ಭಶಾಸ್ತ್ರ ಮತ್ತು ಪರಿಸರವಿಜ್ಞಾನ ಕುರಿತು ಅಧ್ಯಯನ ನಡೆಸಿದ ಅವರು ಕೆಲಕಾಲ ನೈನಿತಾಲ್‌ನ ಕುಮಾವೋ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದರು; ಬಳಿಕ ದೀರ್ಘಕಾಲ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ ನಿವೃತ್ತರಾದರು. ಪರಿಸರವಿಜ್ಞಾನ ಕುರಿತ ಇವರ ಹಲವಾರು ಪುಸ್ತಕಗಳಲ್ಲಿ ‘ಇರುವುದೊಂದೇ ಭೂಮಿ’, ‘ನಮ್ಮೊಳಗಿನ ಬ್ರಹ್ಮಾಂಡ’, ‘ಮುಷ್ಠಿಯಲ್ಲಿ ಮಿಲೆನಿಯಂ’ ಪ್ರಮುಖವಾದವು. ಕುಸುಮಾ ಸೊರಬ ಅವರನ್ನು ಕುರಿತ ‘ಶತಮಾನದ ಕುಸುಮ’ ಮತ್ತು ನಾಲ್ಕು ಸಂಪುಟಗಳ ‘ಕರ್ನಾಟಕ ಪರಿಸರ ಪರಿಸ್ಥಿತಿ’ ಕೃತಿಗಳನ್ನೂ ಇವರು ಸಂಪಾದಿಸಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ ಮೊದಲಾದ ಮನ್ನಣೆಗಳು ಇವರಿಗೆ ದೊರಕಿವೆ. ಪ್ರಸ್ತುತ ಬೆಂಗಳೂರು ಸಮೀಪದ ಹಳ್ಳಿಯೊಂದರಲ್ಲಿ ಬದುಕುತ್ತಿರುವ ನಾಗೇಶ ಹೆಗಡೆ ಲೇಖನ-ಅಧ್ಯಾಪನಗಳಲ್ಲಿ ತೊಡಗಿಕೊಂಡಿದ್ದಾರೆ.
ನಾಗೇಶ ಹೆಗಡೆ ಮುಖ್ಯ ಕೃತಿಗಳು
ಪರಿಸರ/ವಿಜ್ಞಾನ ಕುರಿತ ಬರಹಗಳು:
ಇರುವುದೊಂದೇ ಭೂಮಿ
ನಮ್ಮೊಳಗಿನ ಬ್ರಹ್ಮಾಂಡ
ಪ್ರತಿದಿನ ಪರಿಸರ ದಿನ
ಮನುಕುಲದ ರಕ್ಷಣೆಗೆ ಮಹತ್ವದ ದಿನಗಳು
ಗಗನಸಖಿಯರ ಸೆರಗ ಹಿಡಿದು
ಬರ್ಗರ್ ಭಾರತ
ಭೋಗ ಪ್ರಳಯ
ನಮ್ಮೊಳಗಿನ ದುಂದುಮಾರ
ಭೂಮಿಯೆಂಬ ಗಗನನೌಕೆ
ಗ್ರೇತಾ ಥನ್‌ಬರ್ಗ್
ಲಲಿತ ಪ್ರಬಂಧಗಳು/ಪ್ರವಾಸಕಥನ:
ಗಗನಸಖಿಯರ ಸೆರಗು ಹಿಡಿದು
ಹಳ್ಳೀಮುಕ್ಕ ಎಲ್ಲೆಲ್ಲ್ ಹೊಕ್ಕ
ಸಂಪಾದಿತ ಕೃತಿಗಳು/ಅನುವಾದಗಳು:
ಶತಮಾನದ ಕುಸುಮ
ಪರಿಸರ ಮಾಲಿನ್ಯ
ವನಸಂಜೀವನ
Reviews
There are no reviews yet.