Your Cart

Need help? Call +91 9535015489

📖 Print books shipping available only in India. ✈ Flat rate shipping

ನಮ್ಮ ಮನೆಯ ಬೆಳಕು

Y N Gundurao
$1.49

Product details

Author

Y N Gundurao

Publisher

Total Kannada

Book Format

Ebook

Language

Kannada

ISBN

978-81-92269-0-3

Pages

150

Year Published

2015

Category

Autobiography

ಈ ಕಿರುಪುಸ್ತಕದಲ್ಲಿ ನನ್ನ ಮದುವೆಯ ಸಂದರ್ಭದಿಂದ ಪ್ರಾರಂಭವಾಗಿ, ಮದುವೆಯ ನಂತರ ನಮ್ಮ ಕುಟುಂಬದ ಸದಸ್ಯೆಯಾಗಿ ಬಂದು ನನ್ನ ತಂದೆ ತಾಯಿಗಳನ್ನು ತನ್ನ ತಂದೆತಾಯಿಗಳಿಗಿಂತ ಹೆಚ್ಚಾಗಿ ಪ್ರೀತಿಸಿ, ಪೋಷಿಸಿ ಜೀವನ ಸಂಧ್ಯೆಯಲ್ಲಿದ್ದ ನನ್ನ ತಂದೆ ತಾಯಿಗಳಿಗೆ ಹುಟ್ಟಿದ್ದು ಸಾರ್ಥಕವೆನಿಸುವಂತಹ ನೆಮ್ಮದಿ ಜೀವನವನ್ನು ಕೊಟ್ಟು,
“ಮರುಜನ್ಮವಿದ್ದರೆ ನಿನ್ನ ಆರೈಕೆಯ ಮುಚ್ಚಿದ ಬೊಗಸೆ ಕೈಗಳಲ್ಲಿ….
ಸುಖಿಸಬೇಕೆಂಬ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಲೇ ಮರೆಯಾದರು.’’
ಎಷ್ಟು ಜನ ತಂದೆ ತಾಯಿಗಳಿಗೆ ಈ ಅದೃಷ್ಟ ದೊರೆತೀತು?
ಯಾವ ಸ್ಕೂಲು, ಕಾಲೇಜುಗಳಲ್ಲಿಯೂ ಬೋಧಿಸದಂತಹ ಸಂಸ್ಕೃತಿ, ಸಂಸ್ಕಾರವನ್ನು ಅದು ಹೇಗೆ ಮೈಗೂಡಿಸಿಕೊಂಡು ನನ್ನವಳು ಬೆಳೆದಳೋ! ಬಹುಶಃ ಅವಳ ವಂಶಸ್ಥರಿಂದ ಹರಿದು ಬಂದಿರುವ ಸಂಸ್ಕಾರದ ಫಲ. ಮದುವೆಯಾಗಿ ಬಂದಂದಿನಿಂದಲೂ ತನ್ನ ಸಂಸಾರ, ತಂದೆ ತಾಯಿಗಳು (ಅಂದರೆ ನನ್ನ ತಂದೆ ತಾಯಿಗಳು) ಮಕ್ಕಳು, ಮೊಮ್ಮಕ್ಕಳಂತೆ ಇತರರ ಬಗ್ಗೆಯೂ ಇದೇ ಕಾಳಜಿ ತೋರುತ್ತಾ ಬಂದ ನನ್ನವಳಿಗೆ ನಮ್ಮ ಕುಟುಂಬದಿಂದ ದೊರೆತದ್ದಕ್ಕಿಂತ ತೆತ್ತುಕೊಂಡದ್ದೆ ಜಾಸ್ತಿ.
ಇದೊಂದು ಋಣ ಸಂದಾಯ ಮಾರ್ಗದ ಪ್ರತಿಫಲನದ ಫಲ ಈ ಪುಸ್ತಕವೇ ಹೊರತು ಪ್ರಸಿದ್ಧಿಗಾಗಿ ಬರೆದ ಕೃತಿಯಲ್ಲ.