
ಮರುಭೂಮಿಯ ಹೂ
$1.69 $1.52
Product details
Category | Biography |
---|---|
Translator | N. Jagadish Koppa |
Publisher | Manohara Granthamala |
Language | Kannada |
Book Format | Printbook |
Pages | 158 |
ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡಿರಿಳ ಆತ್ಮಕಥೆ “ಮರುಭೂಮಿಯ ಹೂ”. ವಾರಿಸ್ ಡಿರಿ ಜಗತ್ತಿನ ಜಾಹಿರಾತು ಲೋಕದಲ್ಲಿ ಒಂದು ಅಚ್ಚಳಿಯದ ಹೆಸರು. ಆತ್ಮಕಥೆಯ ವಸ್ತು, ವಿವರ ಹಾಗೂ ಜಗತ್ ಪ್ರಸಿದ್ಧ ರೂಪದರ್ಶಿಯಾಗಿದ್ದುಕೊಂಡು ವಾರಿಸ್ ಡಿರಿ ತೆರೆÀದಿಟ್ಟ ತನ್ನ ಬದುಕಿನ ಬಡತನ, ಅಪಮಾನ, ಅತ್ಯಾಚಾರದಂತಹ ಸಂಗತಿಗಳು ಹಾಗೂ ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ಧತಿ ಇವೆಲ್ಲವುಗಳಿಂದಾಗಿ ಈ ಕೃತಿಯು ಓದುಗರನ್ನು ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿದೆ. ಆಕೆ ಅನುಭವಗಳನ್ನು ದಾಖಲಿಸುವ ರೀತಿ ಅನನ್ಯವಾದುದು. ಅನಕ್ಷರಸ್ಥಳಾದರೂ ಇಂಗ್ಲೀಷ್ ಕಲಿತು ಎಷ್ಟೋ ಜನರ ಮುಚ್ಚಿದ ಕಣ್ಣನ್ನು ತೆರೆಯುವಂತೆ ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ವಾರಿಸ್ ಡಿರಿಸಳ ಈ ಆತ್ಮಕಥೆ ಇಂದು ಜಗತ್ತಿನ 85 ಭಾಷೆಗಳಲ್ಲಿ ಪ್ರಕಟಗೊಂಡು, ಅತ್ಯಂತ ಹೆಚ್ಚು ಮಾರಾಟವಾದ ಕೃತಿಗಳಲ್ಲಿ ಒಂದಾಗಿದೆ.
ಡಾ. ಎನ್. ಜಗದೀಶ್ ಕೊಪ್ಪ ಅವರು ಭಾಷಾಂತರಿಸಿರುವ ರೀತಿಯೂ ಸಹ ಅನನ್ಯವಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈ ಅನುವಾದವು ಮೂಲಕ್ಕೆ ನಿಷ್ಠವಾಗಿದೆ.
Book available in other formats
-
$1.69$1.02
Customers also liked...
-
Bhargavi Narayan
$3.02 -
Tejaswi Kattimani
$2.42$2.18 -
$1.33$0.80 -
pushpamala desai
$1.21$0.73 -
Vaidehi
$1.81$1.09 -
Shrinivas Vaidya
$1.21$0.73