Your Cart

Need help? Call +91 9535015489

📖 Print books shipping available only in India. ✈ Flat rate shipping

ಸಾಹಿತ್ಯಲೋಕದ ಸುತ್ತ-ಮುತ್ತ

Giraddi Govindaraj
$1.63

Product details

Category

Essays

Author

Giraddi Govindaraj

Publisher

Manohara Granthamala

Language

Kannada

ISBN

978-93-81822-08-1

Book Format

Printbook

ತನ್ನ ಗಮನಕ್ಕೆ ಬಂದ ಸ್ವಾರಸ್ಯಕರ ಸಂಗತಿಗಳನ್ನು ಪೂರ್ವ ಗ್ರಹಗಳಿಲ್ಲದೆ ಆಸ್ವಾದಿಸುತ್ತಾ ಅವುಗಳನ್ನು ಇತರ ಸಾಹಿತ್ಯಾಸಕ್ತರಿಗೂ ದಾಟಿಸುತ್ತಿದ್ದಾನೆ. ಪುಸ್ತಕವನ್ನುಪ್ರಸಂಗಗಳುಎಂದು ಕರೆದಿರುವುದು ಉಚಿತವಾಗಿಯೇ ಇದೆ. ಸಾಹಿತ್ಯ, ರಂಗಭೂಮಿಗಳನ್ನು ಹತ್ತಿರದಲ್ಲಿ ಬಲ್ಲ ಗಿರಡ್ಡಿಯವರು ಪ್ರಸಂಗಗಳ ಹಲವು ಮಾದರಿಗಳನ್ನು ಇಲ್ಲಿ ಲವಲವಿಕೆ ಇಂದ ನಿರೂಪಿಸಿದ್ದಾರೆ. ಪ್ರಸಂಗಗಳಲ್ಲಿ ಕೆಲವು ಸಾಂದರ್ಭಿಕ ಹಾಸ್ಯ, ಸಂದಿಗ್ಧತೆ ಮತ್ತು ಅವುಗಳ ಅನಿರೀಕ್ಷಿತತೆಗಳಿಂದ ಮುದಗೊಳಿಸಿದರೆ, ಮತ್ತೆ ಕೆಲವು ಪರಿಚಿತ ಲೇಖಕರ ಅಪರಿಚಿತ ಮುಖಗಳನ್ನು ಕಾಣಿಸಿ ಬೆಚ್ಚಿಬೀಳಿಸುವಂತಿದೆ. ಮತ್ತೆ ಕೆಲವು ಸಾಹಿತ್ಯ ಚರಿತ್ರೆಯ ಭಾಗಗಳಾಗಿಯೂ ಮುಖ್ಯವೆನಿಸುತ್ತದೆ. ಸಾಹಿತ್ಯ ಲೋಕದ ಸುತ್ತಮುತ್ತ ಹಬ್ಬಿರುವ ಗಾಸಿಪ್ಪುಗಳಿಗೆ ಮತ್ತಷ್ಟು ಬಣ್ಣ ತುಂಬುವ ಕೆಲಸವನ್ನಿ ಇಲ್ಲಿ ಗಿರಡ್ಡಿ ಮಾಡ ಹೊರಟಿಲ್ಲ. ಸಾಹಿತ್ಯ ಸಂಶೋಧಕರಂತೆ ಕೆಲವು ವದಂತಿಗಳ ಜಾಡು ಹಿಡಿದು ಇತರ ವ್ಯಕ್ತಿಗಳಿಂದ ಸಾಕ್ಷ್ಯಗಳನ್ನು ಕಲೆಹಾಕಿ, ಕೆಲವೊಮ್ಮೆ ಲಿಖಿತ ದಾಖಲೆಗಳನ್ನು ಸಂಗ್ರಹಿಸಿ, ಅವುಗಳನ್ನು ಅನಗತ್ಯ ಗೋಜಲುಗಳಿಂದ ಮುಕ್ತಗೊಳಿಸಲು ಶ್ರಮಿಸಿದ್ದಾರೆ.