Your Cart

Need help? Call +91 9535015489

📖 Print books shipping available only in India. ✈ Flat rate shipping

ಆಸ್ಥೆ

Vinod K L
$1.16

Product details

Category

Novel

Author

Vinod K L

Publisher

Vamshi Publications

Language

Kannada

Book Format

Ebook

ಶ್ರೀ. ವಿನೋದ್ ಕೆ.ಎಲ್. ರವರು ಸಹ ತಮ್ಮ ಕಾದಂಬರಿ ‘ಆಸ್ಥೆ’ಯಲ್ಲಿ ಸಾಮಾಜಿಕ ವಿಷಯವನ್ನಿಟ್ಟುಕೊಂಡು ರಚಿಸಿದ್ದಾರೆ. ಇದೊಂದು ಸ್ತ್ರೀ ಪ್ರಧಾನವಾದ ಕಾದಂಬರಿ. ಇದನ್ನು ಒಬ್ಬ ಪುರುಷ ರಚಿಸಿದರೂ ಸಹ, ಸ್ತ್ರೀಯ ಮನೋಲೋಕವನ್ನು ಈ ಕಾದಂಬರಿ ಸಮರ್ಥವಾಗಿ ಚಿತ್ರಿಸುತ್ತದೆ. ಈ ಕಾದಂಬರಿಯ ಪ್ರಮುಖ ಪಾತ್ರ ‘ಪ್ರೇಮಾ’. ಪ್ರೇಮಳಿಗೆ ಮದುವೆಯಾಗಿದೆ, ಅವಳ ಗಂಡ ಸೂರ್ಯ. ಅವಳದು ಅನ್ಯೋನ್ಯ ಸಂಸಾರ. ಮಕ್ಕಳೇ ಆಗದ ಅವಳ ಬದುಕಿನಲ್ಲಿ ಬಿರುಗಾಳಿಯಂತೆ ಬಂದ ಚಂದ್ರು-ಸೂರ್ಯನ ಗೆಳೆಯನಾಗಿರುತ್ತಾನೆ. ಗಂಡ ತನ್ನ ಲೋಕದಲ್ಲಿ ತಾನು ಮುಳುಗಿದ್ದರೂ, ಹೆಂಡತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರಲಿಲ್ಲ. ಇದರಿಂದ ಬೇಸರಗೊಂಡು, ಬದುಕಿನ ಏಕತಾನತೆಯಿಂದ ದೂರವಾಗಲು ಚಂದ್ರುವಿನ ಸಾಮೀಪ್ಯ ಬಯಸುತ್ತಾಳೆ. ಅವರಿಬ್ಬರ ಸ್ನೇಹ ಗಾಢವಾಗುತ್ತಾ, ಚಂದ್ರುವಿನ ಪ್ರೀತಿಯನ್ನು ಬಯಸತೊಡಗಿದಳು. ಆಗ ಚಂದ್ರು ತನ್ನ ಬ್ಯಾಗಿನಲ್ಲಿದ್ದ ಒಂದು ಡೈರಿಯನ್ನು ತೆಗೆದು ಅವಳ ಕೈಗಿಟ್ಟು, ಹೇಳುತ್ತಾನೆ “ಈ ಡೈರಿಯಲ್ಲಿರುವುದನ್ನು ಓದಿದ ನಂತರ ಇದರಲ್ಲಿರುವ ನಂಬರಿಗೆ ಫೋನ್ ಮಾಡು” ಎಂದು ಹೇಳಿ, ಸೂರ್ಯನೊಂದಿಗೆ ಹೋಗುತ್ತಾನೆ.
ಡೈರಿಯಲ್ಲಿ ಬರುವ ಹೆಣ್ಣು ಪಾತ್ರ, ಅವಳಿಗೆ ಎರಡು ಮಕ್ಕಳಿದ್ದರು. ಬದುಕಿನಲ್ಲಿ ಅನೇಕ ಏರುಪೇರುಗಳನ್ನು ಎದುರಿಸಿದ ಅವಳು ಆ ಡೈರಿಯನ್ನು ಮಕ್ಕಳನ್ನು ಆಶ್ರಮದಲ್ಲಿ ಬಿಟ್ಟು ಹೊರಟು ಹೋಗುತ್ತಾಳೆ. ಗಲಭೆಯಲ್ಲಿ ಸಿಕ್ಕಿಹಾಕಿಕೊಂಡು ಬೆಂಕಿ ಹತ್ತಿದ ಬಸ್ಸಿನಲ್ಲಿ ಅವಳೂ ಭಸ್ಮವಾಗುತ್ತಾಳೆ. ಅವಳು ಬಿಟ್ಟು ಹೋದ ಎರಡೂ ಮಕ್ಕಳನ್ನು ಚಂದ್ರು ಸಾಕುತ್ತಿರುತ್ತಾನೆ. ಇದನ್ನು ಓದಿದ ಪ್ರೇಮಾ ಕಣ್ಣೀರು ಹಾಕುತ್ತಾಳೆ. ಮುಂದೆ ಸೂರ್ಯನಿಗೆ ಪ್ರೇಮಾಳ ಮಹತ್ವವೂ ತಿಳಿಯುತ್ತದೆ. ಪ್ರೇಮ ತನ್ನನ್ನು ಪ್ರೀತಿಸುವ ಗಂಡನನ್ನು ಅರ್ಥಮಾಡಿಕೊಳ್ಳುತ್ತಾಳೆ. ಅವಳಿಗೂ ಮಗುವಾಗುತ್ತದೆ. ಅವಳು ಕೊನೆಗೆ ಜಗದ ತಾಯಿಯಾಗುವ ಮನಸ್ಸು ಮಾಡುತ್ತಾಳೆ.
ಇದು ಕಾದಂಬರಿಯ ಸಾರಾಂಶ.