ಇಲ್ಲಿರುವ ಅಧ್ಯಾಯಗಳು ಇಪ್ಪತ್ತನೇ ಶತಮಾನದ ಆರಂಭದಲ್ಲಿ ರಷ್ಯಾದಲ್ಲಿ ಕಾರ್ಮಿಕರ ನೇತೃತ್ವದಲ್ಲಿ ನಡೆದಿದ್ದ ಅಕ್ಟೋಬರ್ ಕ್ರಾಂತಿಯು ಹುಟ್ಟಿಸಿದ್ದ ಹೊಸ ಭರವಸೆಗಳು, ಎರಡನೇ ಮಹಾಯುದ್ಧದಲ್ಲಿ ಹೊರಹೊಮ್ಮಿದ್ದ ಫ್ಯಾಸಿಸ್ಟ್ ಹುಚ್ಚಾಟದ ಕರಾಳತೆಗಳು, ಸಾಮ್ರಾಜ್ಯಶಾಹಿ ವ್ಯವಸ್ಥೆಯ ಯುದ್ಧೋನ್ಮಾದಗಳು ಇತ್ಯಾದಿಗಳ ಬಗ್ಗೆಯೂ, ಇವುಗಳ ನಡುವೆ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹದ ಯಶಸ್ವೀ ಪ್ರಯೋಗಗಳ ಬಗ್ಗೆಯೂ ಈ ಪುಸ್ತಕದ ಹಲವು ಅಧ್ಯಾಯಗಳಲ್ಲಿ ಪ್ರಸ್ತಾಪಿಸಲಾಗಿದೆ.