Your Cart

Need help? Call +91 9535015489

📖 Print books shipping available only in India. ✈ Flat rate shipping

ಗೋದಾನ

Srikant Kakkeri
$3.27

Product details

Translator

Srikant Kakkeri

Publisher

VIVIDLIPI

Book Format

Printbook

Pages

398

Year Published

2020

Category

Plays

Author

Srikant Kakkeri

ಮುನ್ಶಿ ಪ್ರೇಮಚಂದ ಅವರ ‘ಗೋದಾನ್’ ಜಾಗತಿಕ ನೆಲೆಯಲ್ಲಿ ಕಾದಂಬರಿ ಪ್ರಾಕಾರದಲ್ಲಿ ಗುರುತಿಸಿ, ಪ್ರಶಂಶಿಸಲ್ಪಟ್ಟ ಮಹತ್ವದ ಕಾದಂಬರಿಯಾಗಿದೆ. Social Realism ಪ್ರಾಕಾರದಲ್ಲಿ ಹಳ್ಳಿ ಪಟ್ಟಣಗಳ ಶ್ರೀಸಾಮಾನ್ಯರ ಯಥಾರ್ಥ ಚಿತ್ರಣವಾಗಿದೆ. ಕಾದಂಬರಿಯಲ್ಲಿ ಬರುವ ಬಡರೈತರು ಅವರ ಸಂಕಷ್ಟಗಳಿಗೆ ಕಾರಣವಾದ ಊಳಿಗಮಾನ್ಯ ಹಾಗೂ ಜಾತಿವ್ಯವಸ್ಥೆ, ತಾರತಮ್ಯದ ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಸ್ವಾಭಿಮಾನಿ ರೈತ ಹೋರಿ, ಅವನ ಮಡದಿ ಧನಿಯಾ, ತನ್ನ ವಿಘಟನೆಗೊಂಡ ಕೂಡುಕುಟುಂಬ, ವ್ಯವಸಾಯವನ್ನೇ ನೆಚ್ಚಿಕೊಂಡು ಸಾಲಶೂಲಗಳಲ್ಲಿ ಜರ್ಜರಿತವಾಗುವ ಹಳ್ಳಿಯ ಬದುಕಿಗೆ ಪರ್ಯಾಯವಾಗಿ ಪಟ್ಟಣದ ಬದುಕು, ಉಳ್ಳವರ ಹಿಪ್ಪೊಕ್ರಸಿಗಳನ್ನು ಸಾಧಾರಣವಾಗಿ, ತೌಲನಿಕವಾಗಿ ಮುಖಾಮುಖಿಯಾಗಿಸುವ ಪ್ರೇಮಚಂದ ಕಥನಕ್ರಮ ವಿನೂತನವಾಗಿದೆ.

ಶ್ರೀಕಾಂತ ಕಕ್ಕೇರಿ, ಪ್ರೇಮಚಂದರವರ ಕಾದಂಬರಿಯ ಯಥಾವತ್ತಾದ ಚಿತ್ರಣವನ್ನು ಹೈದರಾಬಾದ ಕರ್ನಾಟಕದ (ಸದ್ಯ ಕಲ್ಯಾಣ ಕರ್ನಾಟಕವಾಗಿ ಹೊಸ ನಾಮಾಂಕಿತವಾಗಿರುವ ಕರ್ನಾಟಕದ) ಗ್ರಾಮೀಣ ಮತ್ತು ಪಟ್ಟಣದ ಬದುಕಿಗೆ ನಾಟಕದ ಮೂಲಕ ಸಶಕ್ತವಾಗಿ ರೂಪಾಂತರಗೊಳಿಸಿದ್ದಾರೆ. ಮೂಲ ಕಾದಂಬರಿಯಲ್ಲಿ ಬರುವ ಪಾತ್ರಗಳೆಲ್ಲ ಕಲ್ಯಾಣ ಕರ್ನಾಟಕ ಭಾಗದ ವೇಶ ಭಾಷೆಯಲ್ಲಿ ವ್ಯವಹರಿಸುವದನ್ನು ಬಿಟ್ಟರೆ, ಪ್ರೇಮಚಂದರ `ಗೋದಾನ’, ಕನ್ನಡದ ಖಡಕ್ ಹೈದರಾಬಾದಿ ಕನ್ನಡ ಭಾಷೆಯಲ್ಲಿ ಜೀವ ತಳೆದಿವೆ.

Book available in other formats