‘ಸಾಹೇಬರು ಬರುತ್ತಾರೆ’ ನಾಟಕದ ಮೂಲ – ಹತ್ತೊಂಬತ್ತನೇ ಶತಮಾನದ ರಷಿಯನ್ ನಾಟಕಕಾರ ನಿಕೊಲಾಯ್ ಗೊಗೋಲನ ‘ದಿ ಗೌರ್ನಮೆಂಟ್ ಇನ್‌ಸ್ಪೆಕ್ಟರ್‌’ ಎಂಬ ಮಹತ್ಕೃತಿ. ರಷ್ಯನ್ ಸಾಹಿತ್ಯದಲ್ಲಿ ಆಧುನಿಕತೆ ವಾಸ್ತವತೆಗಳನ್ನು ತಂದ ಮೊದಲ ಮಹತ್ವದ ಲೇಖಕ ಎಂದೂ, ಮೊದಲ ಗಣ್ಯ ‘ರಾಷ್ಟ್ರೀಯ ಲೇಖಕ’ ಎಂದೂ ಈತ ಖ್ಯಾತನಾಗಿದ್ದಾನೆ. ಖ್ಯಾತ ಲೇಖಕ ಪುಷ್ಕಿನ್ ಈತನಿಗೆ ಕೊಂಚ ಹಿರಿಯ, ಪ್ರೋತ್ಸಾಹಕ. ‘ದಿ ಇನ್‌ಸ್ಪೆಕ್ಟರ್ ಜನರಲ್‌’ ನಾಟಕ ರಚನೆಗೆ ಆತನೇ ಪ್ರಚೋದನೆ ನೀಡಿದನಂತೆ. ರಷ್ಯಾದಲ್ಲಿ ಅದೇ ಬೆಳೆಯತೊಡಗಿದ್ದ ವಾಸ್ತವವಾದಿ ವಿಡಂಬಕ-ಪ್ರಹಸನ ಪರಂಪರೆಯನ್ನು ಉತ್ತುಂಗಕ್ಕೇರಿಸಿದ ಖ್ಯಾತಿ ಈ ನಾಟಕದ್ದು.ಪ್ರಹಸನ ಪ್ರಕಾರಕ್ಕೆ ಲಭ್ಯವಾಗುವ ಎಲ್ಲ ತಂತ್ರಗಳನ್ನೂ ಈ ನಾಟಕ ಬಳಸಿಕೊಳ್ಳುತ್ತದೆ – ಯಾವನೋ ಒಬ್ಬನನ್ನು ಇನ್ನೊಬ್ಬ ಎಂದು ಭಾವಿಸಿ ಗೊಂದಲಪಡುವ ವ್ಯಕ್ತಿವ್ಯತ್ಯಾಸ ಪ್ರಹಸನ; ತಾನಲ್ಲದ್ದನ್ನು ತಾನು ಎಂದು ತೋರಿಸುವ ಆರೋಪಿತ ನಡಾವಳಿಗಳ ಪ್ರಹಸನ; ಸಂದರ್ಭದ ಇಕ್ಕಟ್ಟಿನಲ್ಲಿ ಸಿಕ್ಕುಬಿದ್ದು ಹೊರಬರಲಾಗದೆ ಒದ್ದಾಡುವ ಸನ್ನಿವೇಶ ಪ್ರಹಸನ ಮತ್ತು ಸಾಮಾಜಿಕ ಅಂತಸ್ತಿನ ಮುಖವಾಡಗಳಲ್ಲಿ ಮನುಷ್ಯ ಮನುಷ್ಯನನ್ನು ಗುರುತಿಸಲಾಗದೆ ಹೋಗುವ ಬೌದ್ಧಿಕ ಪ್ರಹಸನ – ಇವಿಷ್ಟೂ ಈ ನಾಟಕದಲ್ಲಿ ಕೂಡಿಕೊಂಡಿವೆ. ಹಾಗಾಗಿಯೇ ಈ ನಾಟಕ ಹೊರಗಿಂದ ಬಂದು ಮಂಕುಬೂದಿ ಎರಚಿದ ಒಬ್ಬ ಲಫಂಗನ ಕಥೆಯಷ್ಟೇ ಆಗುವುದಿಲ್ಲ ಅಥವಾ ತಮ್ಮ ತಮ್ಮ ಕೂಪಗಳಲ್ಲಿಯೇ ಕೊಳೆತು ಭ್ರಷ್ಟರಾಗಿರುವ ಲಂಪಟರ ಕಥೆಯೂ ಆಗುವುದಿಲ್ಲ. ಬದಲು, ಇದು ಹಣ-ಅಂತಸ್ತು-ಅಧಿಕಾರಗಳ ಬೆನ್ನುಹತ್ತಿ ಸುಳ್ಳುಗಳ ಸರಮಾಲೆಯನ್ನೇ ತನ್ನ ಸುತ್ತ ಹೆಣೆದುಕೊಂಡಿರುವ ಮುಖವಾಡ ವ್ಯವಸ್ಥೆಗೆ ಮಿಂಚು ಹೊಡೆಸುವ ಕಥೆಯಾಗುತ್ತದೆ.

Additional information

Category

Language

Kannada

Book Format

Ebook

Author

,

Publisher

Reviews

There are no reviews yet.

Only logged in customers who have purchased this product may leave a review.