Your Cart

Need help? Call +91 9535015489

📖 Print books shipping available only in India. ✈ Flat rate shipping

ಷೆಫೀಲ್ಡ್ ಕವಿತೆಗಳು

H. S. Venkateshamurthy
$0.65

Product details

Category

Poetry

Author

H. S. Venkateshamurthy

Publisher

VIVIDLIPI

Language

Kannada

Book Format

Ebook

Year Published

2016

ಷೆಫೀಲ್ಡ್ ಕವಿತೆಗಳು
ಎರಡು ವರ್ಷಗಳ ಹಿಂದೆ ನನ್ನ ಅಂತರಂಗ ಪ್ರವೇಶಿಸಿದ ಷೆಫೀಲ್ಡ್ ಈಗ ದ್ವಾದಶಪದಿ ಕವಿತೆಗಳ ರೂಪದಲ್ಲಿ ಆಕಾರಗೊಂಡು ಪ್ರಕಟಗೊಳ್ಳುತ್ತಿದೆ. ಗೆಳೆಯ ಬಿ ಆರ್ ಎಲ್ ಈ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಷೆಫೀಲ್ಡ್ ಕವಿತೆಗಳಲ್ಲದೆ ಅನೇಕ ಬಿಡಿ ಪದ್ಯಗಳೂ ಈ ಸಂಗ್ರಹದಲ್ಲಿ ಇವೆ. ಇವುಗಳಲ್ಲಿ ‘ಒಂದು ಸ್ವರದ ಹಿಂದೆ’ ಎಂಬ ಕವಿತೆ ಪಂಡಿತ್ ಪರಮೇಶ್ವರ ಹೆಗಡೆ ಅವರ ಮಧುವಂತಿಯನ್ನು ಕೇಳಿ ಮನಸ್ಸಿನ ಮೇಲೆ ಆದ ಪರಿಣಾಮಗಳನ್ನು ಚಿತ್ರಿಸುವಂಥದ್ದು. ಅದೊಂದು ವಿಶೇಷ ಅನುಭವ.
ಪ್ರಿಯ ಮಿತ್ರರಾದ ಟಿ. ಎಸ್. ಛಾಯಪತಿಯವರ ಸ್ನೇಹಮಯ ಒತ್ತಾಸೆಯಿಲ್ಲದೆ ಈ ಕವಿತೆಗಳ ಹಸ್ತಪ್ರತಿ ಸಿದ್ಧವಾಗುತ್ತಿರಲಿಲ್ಲ. ಕೃತಿಯನ್ನು ಸುಂದರವಾಗಿ ಹೊರತರುವಲ್ಲಿ ಅವರ ಪ್ರೀತಿ ಮತ್ತು ಸದಭಿರುಚಿ ವ್ಯಕ್ತಗೊಳ್ಳುತ್ತಾ ಇದೆ.ಅವರ ವಿಶ್ವಾಸಕ್ಕೆ ತುಂಬ ಆಭಾರಿಯಾಗಿದ್ದೇನೆ. ಮುಖಚಿತ್ರ ಮತ್ತು ಕೃತಿಯ ವಿನ್ಯಾಸ ನೋಡಿಕೊಂಡಿರುವ ಆತ್ಮೀಯ ಅಪಾರ, ಮುದ್ರಣ ಪ್ರತಿಯನ್ನು ಆಸ್ಥೆಯಿಂದ ಸಿದ್ಧಪಡಿಸಿರುವ ಪ್ರಿಯ ಮಿತ್ರ ಶ್ರೀಧರ ಮತ್ತು ಮುದ್ರಣದ ಜವಾಬುದಾರಿ ನಿರ್ವಹಿಸಿದ ಸ್ವಾನ್ ಕೃಷ್ಣಮೂರ್ತಿ ಅವರಿಗೆ ಋಣಿಯಾಗಿದ್ದೇನೆ.