Your Cart

Need help? Call +91 9535015489

📖 Print books shipping available only in India. ✈ Flat rate shipping

ಬೇಟೆಯ ನೆನಪುಗಳು

Kedambady Jathappa Rai
$1.09

Product details

Category

Stories

Author

Kedambady Jathappa Rai

Publisher

Sahitya Prakashana

Language

Kannada

Book Format

Ebook

Year Published

2017

ಬೇಟೆಯ ನೆನಪುಗಳು
ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರ; ಅದರಲ್ಲಿ ಕತೆಗಾರಿಕೆಯ ಅಂಶ ಅಡಕವಾಗಿರುವುದರಿಂದ ಆ ಪ್ರಬಂಧಪ್ರಕಾರ ಹೆಚ್ಚಿನ ಮೆಚ್ಚುಗೆ ಪಡೆದಿದೆ. `ಬೇಟೆಯ ನೆನಪುಗಳು’ ಎಂಬೀ ತೆರನ ಬರವಣಿಗೆ ಅದೇ ಹಾದಿಯಲ್ಲಿ ಸಾಗಿದರೂ, ಅದಕ್ಕಿಂತಲೂ ಆಕರ್ಷಕವಾಗಿ ಮೂಡಿಬಂದ ಒಂದು ಮಹತ್ತರ ಸಾಹಿತ್ಯ ಪ್ರಕಾರವೆನ್ನಬೇಕು. ಇದರಲ್ಲಿನ ವರ್ಣನೆ ಕಾದಂಬರಿಗಳ ವರ್ಣನೆಯ ಮಟ್ಟವನ್ನು ಮುಟ್ಟಬಲ್ಲುದು; ಅನೇಕ ಕುತೂಹಲಕಾರೀ ಘಟನೆಗಳು ಅಲ್ಲಲ್ಲಿ ಮೂಡಿ ಬಂದಿರುವುದರಿಂದ ಪತ್ತೇದಾರಿ ಕತೆಗಳ ಆಸಕ್ತಿ ಕೆರಳಿಸುವ ಅಂಶಗಳೂ ಇಲ್ಲಿ ವಿಪುಲವಾಗಿ ತುಂಬಿರುತ್ತವೆ. ಹಾಗಾಗಿ ಈ ಬರವಣಿಗೆ ಪ್ರಕಾರ ಪ್ರವಾಸಕಥನಕ್ಕಿಂತ ಹೆಚ್ಚು ರೋಚಕವೂ, ಆಕರ್ಷಕವೂ ಆಗಿರುವುದು. ಅನುಭವದ ತೀವ್ರತೆ, ವರ್ಣನೆಯ ವೈಖರಿ, ಭಾಷೆಯ ಹಿಡಿತ ಇವು ಮುಪ್ಪುರಿಗೊಂಡು ಶ್ರೀ ರೈಗಳ ಈ ನೆನಪಿನ ಕೃತಿ ಬಹುಕಾಲ ನಿಲ್ಲಬಲ್ಲ ಒಂದು ಉತ್ತಮ ಕೃತಿಯಾಗಿದೆಯೆಂದು ಧಾರಾಳವಾಗಿ ಹೇಳಬಹುದು.