Chennaveera Kanavi

Chennaveera Kanavi

ಚೆನ್ನವೀರ ಕಣವಿ ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು.ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು, ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು.
ಇವರ ವಿದ್ಯಾಭ್ಯಾಸವು ನಡೆದದ್ದು ಗೋಕಾಕ್ , ಬೆಳಗಾವಿ & ಧಾರವಾಡಗಳಲ್ಲಿ ಹಾಗೂ ಅಮೆರಿಕಾದ ಚಿಕಾಗೋ ವಿಶ್ವ ವಿದ್ಯಾಲಯದಲ್ಲಿ ದಿ ಆರಿಜನ್ ಅಂಡ್ ಡೆವಲಪ್‌ಮೆಂಟ್ ಆಫ್ ಕನ್ನಡ ಲಿಟರೇಚರ್‌ ಎಂ.ಎ ವಿಷಯದ ಬಗ್ಗೆ ( 1968-69 ) ಸಂಶೋಧನೆ ನಡೆಸಿ ಪಿ.ಎಚ್.ಡಿ ಪದವಿಗಳಿಸಿದರು . ಇದೇ ವಿಷಯದಲ್ಲಿ ಫುಲ್‌ಬೈಟ್ ವಿದ್ಯಾಂಸರೆನಿಸಿಕೊಂಡರು . ಅನಂತರ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ , ಪ್ರವಾಚಕರಾಗಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿ ಸಿದರು ಮತ್ತು ದೇಶ – ವಿದೇಶಗಳಲ್ಲಿ ಜಾನಪದ ಬಗ್ಗೆ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.

Books By Chennaveera Kanavi