Esther Anantha Murthy

Esther Anantha Murthy

ಎಸ್ತರ್‌ ಅನಂತಮೂರ್ತಿ ಅವರು 22 ನವೆಂಬರ್‌ 1940 ಹಾಸನದಲ್ಲಿ ಜನಿಸಿದರು. ತಂದೆ ಆನಂದ ಕೃಷ್ಣಪ್ಪ ಮತ್ತು ತಾಯಿ ಫ್ರೀಡಾ.
1960ರಲ್ಲಿ ಕಾಲೇಜು ಓದುತ್ತಿರುವಾಗ ಯು.ಆರ್‌. ಅನಂತಮೂರ್ತಿಯವರನ್ನು ಮದುವೆಯಾದರು. ಅನಂತಮೂರ್ತಿಯವರು ಕಾಮನ್‌ವೆಲ್ತ್ ಸ್ಕಾಲರ್‌ಶಿಪ್‌ ಪಡೆದು ಸಂಶೋಧನ-ಅಧ್ಯಯನಕ್ಕೆಂದು ಇಂಗ್ಲೆಂಡ್‌ಗೆ ಹೋದಾಗ ಅವರ ಜೊತೆಗೆ ಹೋದರು. ಸಂಗೀತ ಮತ್ತು ನಾಟಕಗಳಲ್ಲಿ ಆಸಕ್ತಿ ಇರುವ ಎಸ್ತರ್, ಮೈಸೂರಿನ ಸಮತೆಂತೋ ನಾಟಕ ತಂಡದ ಸಕ್ರಿಯ ಸದಸ್ಯೆಯಾಗಿ ‘ಕಾಡುಪ್ರಾಣಿ’, ‘ಆವಾಹನೆ’, ‘ತಾಯಿ’, ‘ಘಾಸೀರಾಂ ಕೋತ್ವಾಲ್‌’ ಮುಂತಾದ ನಾಟಕಗಳಲ್ಲಿ ನಟಿಸಿರುತ್ತಾರೆ. ಎಸ್ತರ್‌ ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ ಕೆಲವು ಮಕ್ಕಳ ಪುಸ್ತಕಗಳು ಪ್ರಕಟವಾಗಿರುತ್ತದೆ. ಪ್ರಸ್ತುತ,ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

Books By Esther Anantha Murthy