Goruru Ramaswamy Iyengar

Goruru Ramaswamy Iyengar

ಗೊರೂರು ರಾಮಸ್ವಾಮಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ರಾಮಸ್ವಾಮಿ ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು.
ಹಳ್ಳಿಯ ಚಿತ್ರಗಳು, ನಮ್ಮ ಊರಿನ ರಸಿಕರು, ಬೈಲಹಳ್ಳಿ ಸರ್ವೆ, ಪುನರ್ಜನ್ಮ, ಮೆರವಣಿಗೆ, ಊರ್ವಶಿ, ಕಥೆಗಳು ಮತ್ತು ಇತರ ಚಿತ್ರಗಳು, ಶಿವರಾತ್ರಿ, ಬೆಸ್ತರ ಕರಿಯ, ಗೋಪುರದ ಬಾಗಿಲು ಇತ್ಯಾದಿ ಗದ್ಯ ಕೃತಿಗಳು. ಹಳ್ಳಿಯ ಹಾಡು, ಹಳ್ಳಿಯ ಬಾಳು, ಜನಪದ ಜೀವನ ಮತ್ತು ದರ್ಶನ ಇತ್ಯಾದಿ ಜಾನಪದ ಕೃತಿಗಳು. ಅಮೆರಿಕಾದಲ್ಲಿ ಗೊರೂರು-ಪ್ರವಾಸ ಗ್ರಂಥ, ಗಾಂಧೀಜಿ ಆತ್ಮಕಥೆ ಅನುವಾದ ಕಥೆ, ಕಾದಂಬರಿ, ಲಲಿತಪ್ರಬಂಧ, ಜೀವನಚರಿತ್ರೆಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದಾರೆ. 60ಕ್ಕೂ ಹೆಚ್ಚು ಕೃತಿ ರಚಿಸಿರುವ ಗೊರೂರು ಅವರ ಕೃತಿಗಳು ಜನಪ್ರಿಯವಾಗಿವೆ.

Books By Goruru Ramaswamy Iyengar