K V Subbanna

K V Subbanna

ಕೆ.ವಿ.ಸುಬ್ಬಣ್ಣ ಫೆಬ್ರುವರಿ ೨೦, ೧೯೩೨ ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ. ಕೆ.ವಿ.ಸುಬ್ಬಣ್ಣನವರ(ಕುಂಟಗೋಡು ವಿಭೂತಿ ಸುಬ್ಬಣ್ಣ) ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ೧೯೪೯ ರಲ್ಲಿ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)ರಂಗ ಸಂಸ್ಥೆಯನ್ನು ನಿರ್ಮಿಸಿ, ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಕೃತಿಗಳು :ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು
ನಾಟಕಗಳು: ಗಾರ್ಗಿಯ ಕಥೆಗಳು, ರಾಜಕೀಯದ ಮಧ್ಯೆ ಬಿಡುವು, ಅಭಿಜ್ಞಾನ ಶಾಕುಂತಲ, ಸೂಳೆ ಸನ್ಯಾಸಿ
ಸುಬ್ಬಣ್ಣ ನಾಟಕಕಾರ ಮಾತ್ರವಲ್ಲದೆ ಅನುವಾದಕ,ಉತ್ತಮ ವಿಮರ್ಶಕ ಹಾಗೂ ಪ್ರಕಾಶಕ ಕೂಡಾ ಆಗಿದ್ದರು.ಚಲನಚಿತ್ರಕ್ಕೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಅವರು ಸ್ಥಾಪಿಸಿದ ‘ಅಕ್ಷರ ಪ್ರಕಾಶನ’ವೆಂಬ ಸಂಸ್ಥೆಯೂ ಅತಿ ಮುಖ್ಯ ,ಸಾಹಿತ್ಯಕ್ಷೇತ್ರಕ್ಕೆ ‘ಅಕ್ಷರ ಪ್ರಕಾಶನ’ ಸಲ್ಲಿಸಿದ ಸೇವೆ ಅಪಾರವಾದುದು. ಅಕ್ಷರ ಪ್ರಕಾಶನದ ಮೂಲಕ ೫೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

Books By K V Subbanna