Yashvanth Chittal

Yashvanth Chittal

ಯಶವಂತ ಚಿತ್ತಾಲರು ೧೯೨೮, ಆಗಸ್ಟ್ ೩ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯಲ್ಲಿ ವಿಠೋಬಾ ಮತ್ತು ರುಕ್ಮಿಣಿ ದಂಪತಿಗಳ ಪುತ್ರನಾಗಿ ಜನಿಸಿದರು. ಹನೇಹಳ್ಳಿ, ಧಾರವಾಡ, ಮುಂಬಯಿಗಳಲ್ಲಿ ಶಿಕ್ಷಣವನ್ನು ಪೂರೈಸಿ ಅಮೇರಿಕಾದ ನ್ಯೂ ಜೆರ್ಸಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವ್ಯಾಸಂಗವನ್ನು ಮಾಡಿದರು. ರಾಸಾಯನಿಕ ತಂತ್ರಜ್ಞಾನದ ಪಾಲಿಮರ್ ಟೆಕ್ನಾಲಜಿಯಲ್ಲಿ ವಿಶೇಷ ಪರಿಣತಿ ಪಡೆದರು. ಮುಂಬಯಿಯ ಬೇಕ್‌ಲೈಟ್ ಹೈಲಂ ಲಿ. ಕಂಪೆನಿಯಲ್ಲಿ ಜಿ.ಎಂ. ಮತ್ತು ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿದ್ದು ೧೯೮೫ರಲ್ಲಿ ನಿವೃತ್ತವಾದರು. ಇವರ ‘ಕತೆಯಾದಳು ಹುಡುಗಿ’; ಕೃತಿಗೆ ೧೯೮೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಭಾರತೀಯ ಭಾಶಾ ಪ್ರಶಸ್ತಿ, ಮಹಾರಾಷ್ಟ್ರ ಸರ್ಕಾರದಿಂದ ಮಹಾರಾಷ್ಟ್ರ ಗೌರವ ಪುರಸ್ಕಾರ, ಮಾಸ್ತಿ ಪ್ರಶಸ್ತಿ, ಡಾ.ಶಿವರಾಮ ಕಾರಂತ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಿತ್ತಾಲರು ೨೨ ಮಾರ್ಚ್ ೨೦೧೪ ರಂದು ನಿಧನ ಹೊಂದಿದರು.

Books By Yashvanth Chittal