• -40%

    ಯಕ್ಷಗಾನ ಸ್ಥಿತ್ಯಂತರ

    0

    ಯಕ್ಷಗಾನ ಸ್ಥಿತ್ಯಂತರ
    (ಸಂಶೋಧನ ಲೇಖನಗಳು)

    ಯಕ್ಷಗಾನವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರಲು ಸಾಂಸ್ಕೃತಿಕವಾಗಿ ಹತ್ತು ಹಲವು ಕಾರಣಗಳಿವೆ. ಈ ಸ್ಥಿತ್ಯಂತರಗಳನ್ನು ಶೈಕ್ಷಣಿಕ ಶಿಸ್ತು ಹಾಗೂ ವಿಮರ್ಶಾತ್ಮಕ ಒಳನೋಟಗಳಿಂದ ಇಲ್ಲಿನ ಲೇಖನಗಳು ದಾಖಲಿಸಿವೆ. ಯಕ್ಷಗಾನದ ಕುರಿತಂತೆ ಬಂದಿರುವ ಬರವಣಿಗೆಗಳಿಗೆ  ವಿನೂತನ ಆಯಾಮವನ್ನು ನೀಡಬಲ್ಲ ಆಲೋಚನೆಗಳು ಪ್ರಸ್ತುತ ಗ್ರಂಥದ ಲೇಖನಗಳಲ್ಲಿ ಹರಳುಗೊಂಡಿವೆ. 

    Original price was: $2.40.Current price is: $1.44.
    Add to basket
  • -20%

    ಸುಪ್ರಸಿದ್ಧ ಭಾಷಣಗಳು

    0

    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ

    ಸುಪ್ರಸಿದ್ಧ ಭಾಷಣಗಳು

    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಮಾಡಿದ ೨೯ ಭಾಷಣಗಳ ಸಂಕಲನವಿದು. ಈ ಸಂಗ್ರಹದಲ್ಲಿ ಬಾಬಾಸಾಹೇಬರು ಆರಂಭದಲ್ಲಿ ಮಾಡಿದ ಹಲಕೆಲ ಭಾಷಣಗಳ ಜೊತೆಗೆ ಅವರು ಸಾರಾನಾಥದಲ್ಲಿ ಮಾಡಿದ ಐತಿಹಾಸಿಕ ಕೊನೆಯ ಭಾಷಣವೂ ಅಡಕವಾಗಿದೆ. ಅವರ ಮಾತುಗಳಲ್ಲಿ ಅವರಿಗೆ ದಲಿತರ ಬಗ್ಗೆ ಇದ್ದ ಕಳಕಳಿ, ಪ್ರೀತಿ ಹಾಗೂ ಅಸ್ವಸ್ಥತೆ(restlessness) ಗೊತ್ತಾಗುತ್ತದೆ. ಬೌದ್ಧ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದ ಬಾಬಾಸಾಹೇಬರು ತಮ್ಮ ಭಾಷಣಗಳಲ್ಲಿ ಅದರ ತಿರುಳನ್ನು ಹೇಳಿದ್ದಾರೆ.

    Original price was: $1.44.Current price is: $1.15.
    Add to basket
  • -20%

    ಚಂದ್ರಶೇಖರ ಕಂಬಾರರ ಕಾವ್ಯಭಾಷೆ

    0

    ಚಂದ್ರಶೇಖರ ಕಂಬಾರರ ಕಾವ್ಯಭಾಷೆ

    ಸಾಹಿತ್ಯದಲ್ಲಿ ಭಾಷೆಗೆ ವಿಶಿಷ್ಟವಾದ ಸ್ಥಾನವಿದೆ. ಭಾಷೆಯನ್ನು ಸಾಹಿತ್ಯದಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಅದು ಅಭಿನ್ನ. ಏಕೆಂದರೆ ಸಾಹಿತ್ಯ ಸಂಭವಿಸುವುದು ಭಾಷೆಯ ಮೂಲಕವೇ. ಸಹೃದಯರು ಗ್ರಹಿಸುವ ವಸ್ತು, ಭಾಷೆಯ ಮೂಲಕವೇ ವಿಶಿಷ್ಟವಾದ ಅರ್ಥವನ್ನು ಪಡೆದುಕೊಂಡು ಸೃಷ್ಟಿಯಾಗುತ್ತದೆ. ಭಾಷೆಯ ಮೂಲಕವೇ ಕಾವ್ಯ ವಸ್ತುವಿನ ಸೂಕ್ಷ್ಮವಿನ್ಯಾಸಗಳು, ಪದರುಗಳು, ಭಾವಗಳು, ಸೂಕ್ಷ್ಮಕಂಪನಗಳು, ವೈವಿಧ್ಯ ಪೂರ್ಣವಾಗಿ ಪ್ರಕಟವಾಗುತ್ತವೆ. ಕಾವ್ಯಭಾಷೆ ಎನ್ನುವುದು ವ್ಯಾವಹಾರಿಕ ಭಾಷೆಗಿಂತ ಭಿನ್ನವಾದುದು. ಕಾವ್ಯಭಾಷೆಗಿರುವ ಸೂಕ್ಷ್ಮಸ್ತರಗಳು ವ್ಯಾವಹಾರಿಕ ಭಾಷೆಯಲ್ಲಿ ಕಾಣಿಸುವುದಿಲ್ಲ. ಕಾವ್ಯಭಾಷೆ ಖಾಸಗಿಯಾಗುತ್ತ ಅದು ಕವಿಯ ಒಳಜಗತ್ತಿಗೆ ಸಹೃದಯರನ್ನು ಒಯ್ದುಬಿಡುತ್ತದೆ. ಕನ್ನಡ ಕಾವ್ಯಲೋಕದಲ್ಲಿ ಭಾಷೆಯನ್ನು ಸಮರ್ಥವಾಗಿ ಬಳಸಿದ ಕವಿಗಳಲ್ಲಿ ಕಂಬಾರರು ಪ್ರಮುಖರು.
    ಕಂಬಾರರು, ಬೇಂದ್ರೆ, ಬೆಟಗೇರಿ ಅವರ ಪ್ರಭಾವವನ್ನು ಪಡೆದುಕೊಳ್ಳುತ್ತಲೇ ಕ್ರಮೇಣ ಆ ಪ್ರಭಾವದಿಂದ ಮುಕ್ತರಾಗಿ ಭಿನ್ನಮಾರ್ಗ ಹಿಡಿದರು; ಬೆಳೆದರು. ಭಾಷೆ, ಛಂದಸ್ಸು, ವಸ್ತು, ಪ್ರತಿಮೆ ಎಲ್ಲವೂ ಕಂಬಾರರ ಕಾವ್ಯದಲ್ಲಿ ಭಿನ್ನವಾಯಿತು.

    Original price was: $1.44.Current price is: $1.15.
    Add to basket
  • -40%

    ನೋಡಿರಿ ಧರ್ಮಜ ಫಲುಗುಣಾದಿಗಳು

    0

    ಯಕ್ಷಗಾನರಂಗದಲ್ಲಿ ಶಂಭು ಹೆಗಡೆ ಅಪರೂಪದ ವ್ಯಕ್ತಿ. ಮೇಳದ ಬಗೆಗೆ, ತಮ್ಮ ಮೇಳದ ಕಲಾವಿದರ ಬಗೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನ, ಸುದ್ದಿ, ಫೋಟೋ ಇತ್ಯಾದಿಗಳನ್ನು ಸಂಗ್ರಹಿಸಿಡುವ ಪ್ರವೃತ್ತಿಯುಳ್ಳವರು. ಅದೇ ಪ್ರವೃತ್ತಿಯು ಶಿವಾನಂದ ಹೆಗಡೆಯವರಲ್ಲೂ ಮುಂದುವರೆದಿದೆ. ಈ ಸಂಗ್ರಹದ ರಾಶಿಯಿಂದ ಆಯ್ದ ಲೇಖನಗಳನ್ನೆಲ್ಲಾ ಪ್ರಕಟಿಸುವುದೆಂದರೆ ಸಾವಿರಾರು ಪುಟಗಳೇ ಆದಾವು. ಹಾಗಾಗಿ ಅವುಗಳಿಂದ ಆಯ್ದ ಕೆಲವು ಲೇಖನಗಳನ್ನು ಮಾತ್ರ ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

     
    ಯಕ್ಷಗಾನ ಚರಿತ್ರ್ರೆಯ ದೃಷ್ಟಿಯಿಂದ ಈ ತೆರನಾದ ಪುಸ್ತಕಕ್ಕೆ ಮಹತ್ವವಿದೆ. ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳು ಅಧ್ಯಯನಾಸಕ್ತರಿಗೆ ಪ್ರಯೋಜನಕಾರಿಗಳಾಗಿದ್ದರೂ ಅವುಗಳನ್ನು ಅರಸುವುದು ಶ್ರಮದಾಯಕ. ಆದರೆ ಪುಸ್ತಕ ರೂಪದಲ್ಲಿ ಬಂದರೆ ಸುಲಭವಾಗಿ ಲಭಿಸುತ್ತದೆ. ಅಧ್ಯಯನ ಮಾಡುವವರ ಶ್ರಮ, ಹಣ ಎರಡರ ಉಳಿತಾಯವೂ ಆಗುತ್ತದೆ. ಹಾಗಾಗಿ ಅಲ್ಲಲ್ಲಿ ಚದುರಿಕೊಂಡಿದ್ದ ಲೇಖನಗಳನ್ನು ಒಂದೆಡೆಗೆ ತರುವ ಪ್ರಯತ್ನ ಈ ಪುಸ್ತಕ.
     
    ಶಿವರಾಮ ಕಾರಂತರು, ಲಂಕೇಶ್, ತದ್ದಲಸೆ ಶರ್ಮಾ, ಲೈಫ್ 360 ಪತ್ರಿಕೆಯ ಬಿ.ಗಣಪತಿ ಹೀಗೆ ಹಿರಿಯ-ಕಿರಿಯ ಲೇಖಕರ ಬರವಣಿಗೆಯ ಗುಚ್ಛವೇ “ನೋಡಿರಿ ಧರ್ಮಜ ಫಲುಗುಣಾದಿಗಳು”
    Original price was: $1.44.Current price is: $0.86.
    Add to basket
  • -20%

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    0

    ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ

    ವೃತ್ತಿರಂಗಭೂಮಿಯ ತಲಸ್ಪರ್ಶಿಯಾದ ಅಧ್ಯಯನಗಳು ಕನ್ನಡದಲ್ಲಿ ವಿರಳ. ಹಾಗಿರುವಲ್ಲಿ ವೃತ್ತಿರಂಗಭೂಮಿಯು ಬೆಳೆದುಬಂದ ಬಗೆಗೆ ಅಧಿಕೃತ ಮಾಹಿತಿಗಳನ್ನು  ಇರಿಸಿಕೊಂಡು ಮಾಡಿದ ಈ ಅಧ್ಯಯನ ಮುಖ್ಯವಾಗುತ್ತದೆ. ಸ್ವತಹ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಶ್ರೀ ಪ್ರಕಾಶ ಗರುಡರು ರಂಗಭೂಮಿಯ ಏಳುಬೀಳುಗಳನ್ನು ಹತ್ತಿರದಿಂದ ಬಲ್ಲವರು. ಅವುಗಳನ್ನು ಮುಖ್ಯ ಆಕರವಾಗಿಸಿ ಐತಿಹಾಸಿಕವಾಗಿ ವೃತ್ತಿ ರಂಗಭೂಮಿಯ ಬೆಳವಣಿಗೆಯನ್ನು ಅವುಗಳ ವಿವಿಧ ಅಯಾಮಗಳನ್ನು ಗುರುತಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ. ಹಾಗಾಗಿ ಈ ಬರೆಹ ವೃತ್ತಿರಂಗಭೂಮಿಯ ಸಂದರ್ಭದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

    Original price was: $3.12.Current price is: $2.50.
    Add to basket
  • -10%

    ಪ್ರೇಯಸಿಗೆ ಪತ್ರಗಳು

    0

    ಪ್ರೇಯಸಿಗೆ ಪತ್ರಗಳು

    ಈ ಪುಸ್ತಕವು ಕೃಷ್ಣಾ ನಂದ ಕಾಮತರ ಪತ್ರ ಸಂಕಲನವನ್ನು ಒಳಗೊಂಡಿದೆ.

    Original price was: $0.96.Current price is: $0.86.
    Add to basket
  • -10%

    ಯುದ್ದ ಯೋಧ

    0

    ಯುದ್ದ ಯೋಧ
    ಈ ಪುಸ್ತಕವು ಭಾರತೀಯ ಸೇನೆಯನ್ನು ಪರಿಚಯಿಸುತ್ತದೆ.

    Original price was: $1.80.Current price is: $1.62.
    Add to basket