• -40%

    ಅಂತರ್ಮುಖ

    0

    ಅಂತರ್ಮುಖ
    ಜಗತ್ತು ಅನೇಕ ವಿಸ್ಮಯಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ವಾಸ್ತವದಲ್ಲಿ ಗೋಚರವಾಗುವ ಸಂಗತಿಗಳೆಲ್ಲವೂ ವಿಸ್ಮಯಕರವೇ ಆಗಿವೆ. ಆದರೆ ಅವುಗಳನ್ನು ನೋಡುವ ಕಣ್ಣು ಮಾತ್ರ ಬೇಕು. ವೀಣಾ ಬನ್ನಂಜೆ ಅವರು ಅಂತಹ ಅನೇಕ ಸೋಜಿಗದ ಸಂಗತಿಗಳನ್ನು ಕಾಣುವ ದೃಷ್ಟಿಯುಳ್ಳವರು. ಇಲ್ಲಿನ ಲೇಖನಗಳಲ್ಲಿ ವಾಸ್ತವದ ಅನೇಕ ಘಟನೆಗಳನ್ನು ಅನುಭಾವದ ವತಿಯಿಂದ ಅಗೋಚರವಾದ ಅಮೂರ್ತದೆಡೆಗೆ ವಿಸ್ತರಿಸಿಕೊಳ್ಳುವ ದಾವಂತವನ್ನು ಕಾಣಬಹುದು. ವೀಣಾ ಅವರ ಬರವಣಿಗೆ ಹಾಗೂ ಚಿಂತನೆಯ ವೈಶಿಷ್ಟ್ಯವನ್ನು ಇಲ್ಲಿನ ಲೇಖನಗಳು ಸ್ಫುಟವಾಗಿ ದಾಖಲಿಸುವ ಕಾವ್ಯಾತ್ಮಕ ರಚನೆಗಳಾಗಿ ಗಮನ ಸೆಳೆಯುತ್ತವೆ.

    Original price was: $0.96.Current price is: $0.58.
    Add to basket
  • -40%

    ತಂದೆಯ ಕಣ್ಣಲ್ಲಿ  ಪಂ. ಭೀಮಸೇನ ಜೋಶಿ

    0

    ತಂದೆಯ ಕಣ್ಣಲ್ಲಿ  ಪಂ. ಭೀಮಸೇನ ಜೋಶಿ
    ಈ ಮನೋಹರ ಗ್ರಂಥಮಾಲೆ ೧೯೫೮ – ೬೦ ರಲ್ಲಿ ಗ್ರಂಥಮಾಲೆಯು ನಡೆದು ಬಂದ ದಾರಿ ಸಂಪುಟಗಳನ್ನು ಪ್ರಕಟಿಸಿತ್ತು. ಈ ವ್ಯಕ್ತಿಚಿತ್ರ ೩ ನೇ ಸಂಪುಟದಲ್ಲಿ ಪ್ರಕಟವಾಗಿತ್ತು.ಸುಮಾರು ೫೦ ವರ್ಷಗಳ ನಂತರ ಪಂ.ಭೀಮಸೇನ ಜೋಷಿಯವರು ಮುಗಿಲೆತ್ತರಕ್ಕೆ ಬೆಳೆದು “ಭಾರತ  ರತ್ನ” ಪ್ರಶಸ್ತಿಯನ್ನು ಅಲಂಕರಿಸಿದ ಮೇಲೆ ಅವರ ಬಗ್ಗೆ ಸಾಕಷ್ಟು ಲೇಖನಗಳು ಪ್ರಕಟವಾಗತೊಡಗಿದವು.  ಪಂ.ಭೀಮಸೇನ ಜೋಷಿಯವರು ೨೪ ಜನೇವರಿ ೨೦೧೧ ರಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹೀಗಾಗಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.

    Original price was: $0.48.Current price is: $0.29.
    Add to basket
  • -20%

    ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…

    0

    ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಸಮಯದಲ್ಲಿ . ಬೇಡನ ಬಣ ಗುರಿ ಜೀವನ್ಮರಣದ ಹೋರಾಟದಲ್ಲಿ ಸಿಲುಕಿದರೂ, ಆತ್ಮವಿಶ್ವಾಸದಿಂದ, ಹಲವು ಅಮೃತ ಹಸ್ತಗಳ ಪ್ರೀತಿಯ ಶುಶ್ರೂಷೆ, ಹರಕೆ-ಹಾರೈಕೆಗಳಿಂದ ಮತ್ತೆ ಬಾನಿಗೆ ಹಾರುವ ಹಕ್ಕಿಯ ಕಥೆಯಂತೆ ಈ ಪುಸ್ತಕದ ಲೇಖಕಿಯ ಜೀವನಗಾಥೆ. ಕ್ಯಾನ್ಸರ್ ಎಂಬ ವ್ಯಾಘ್ರನನ್ನು ತನ್ನ ಛಲದಿಂದ ಎದುರಿಸಿ ಹಿಮ್ಮೆಟ್ಟಿದ ಪುಣ್ಯಕೋಟಿಯ ಕಥೆಯೂ ಹೌದು.

    Original price was: $1.20.Current price is: $0.96.
    Add to basket
  • -40%

    ಗದುಗಿನ ನಾರಾಯಣರಾವ ಹುಯಿಲಗೋಳ

    0

    ಗದುಗಿನ ಹುಯಿಲಗೋಳ ನಾರಾಯಣರಾವ
    ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ನಾಡಗೀತೆ ಖ್ಯಾತಿಯ ಶ್ರೀ ಹುಯಿಲಗೋಳ ನಾರಾಯಣರಾವ ಕರ್ನಾಟಕದ ಏಕೀಕರಣ ಚಳುವಳೀಯಲ್ಲಿ ಮನದುಂಭಿ ಪಾಲುಗೊಂಡು ಕನ್ನಡ ಭಾಷೆಯ ಅಭಿವೃದ್ದಿ ಹಾಗೂ ಕನ್ನಡಿಗರಲ್ಲಿ ಸ್ವಂತಿಕೆಯ ಬಗೆಗೆ ಅಭಿಮಾನ ಮೂಡಿಸುವ ಅಭಿಯಾನದಲ್ಲಿ ಬಹುವಿಧಿಯಾಗಿ ಶ್ರಮಿಸಿದರು. ನಾಟಕಗಳನ್ನು ಬರೆದು ಆಡಿಸಿದರು. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ನಾಟಕಗಳ ರಚನೆಯಲ್ಲಿ ಮೊದಲಿಗರಾಗಿ ನಾಟಕಗಳ ಮೂಲಕ ಜನಜಾಗೃತಿ ಮಾಡಿದರು. ಶಿಕ್ಷಣ ಪ್ರಸಾರಕ್ಕೆ ಬುನಾದಿ ಹಾಕಿಕೊಡುವಲ್ಲಿ ಪ್ರೇರಕಶಕ್ತಿಯಾದರು . ಗಾಂಧೀಜಿಯವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಂತರ್ಗತಿಸಿಕೊಂಡು ಕರ್ನಾಟಕದ ಏಕೀಕರಣ ಆಂದೋಲನದಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಕಾಯಾ-ವಾಚ-ಮನಸಾ ಮಾಡಿ ವಂದ್ಯರಾಗಿದ್ದಾರೆ.

    Original price was: $0.30.Current price is: $0.18.
    Add to basket
  • -40%

    ಜನನಾಯಕ -ಡಿ. ಕೆ. ನಾಯ್ಕರ್

    0

    ಜನನಾಯಕ –ಡಿ. ಕೆ. ನಾಯ್ಕರ್

    ರಾಜ್ಯ ರಾಜಕಾರಣದಲ್ಲಿ ಅಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದ ಶ್ರೀ ನಾಯ್ಕರ್ ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ. ಇಂಥ ಅಪರೂಪದ ರಾಜಕಾರಣಿ ಕುರಿತು ಪುಸ್ತಕ ಬರೆಯುವ ಅವಕಾಶ ಸಿಕ್ಕಿದ್ದು ನನಗೆ ಸಹಜವಾಗಿಯೇ ಸಂತೋಷ ಉಂಟು ಮಾಡಿದೆ.
    ಶ್ರೀ ಡಿ. ಕೆ. ನಾಯ್ಕರ್ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತು ಹಲವು ಹುದ್ದೆ, ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಆದರೆ ಅವರಿಗೆ ಮುಖ್ಯಮಂತ್ರಿಯ ಗದ್ದುಗೆ ದೂರವೇ ಉಳಿದದ್ದು ಈಗ ಇತಿಹಾಸ. ಒಂದು ಬಡ, ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದು ರಾಜಕಾರಣದಲ್ಲಿ ನೆಲೆ ಕಂಡುಕೊಂಡು ರಾಜ್ಯದ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಶ್ರೀ ಡಿ. ಕೆ. ನಾಯ್ಕರ್ ಈಗಲೂ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ.

    Original price was: $3.00.Current price is: $1.80.
    Add to basket
  • -40%

    ಅದ್ದ್ಯಾ

    0

    ಅದ್ದ್ಯಾ
    ಅದ್ದ್ಯಾ ಎಂಬ ನಾಮನಿರ್ದೇಶನಗಳಿಲ್ಲದ ವ್ಯಕ್ತಿಯು ತನ್ನದಲ್ಲದ ಬೇರೆಯವರ ಮನೆಯಲ್ಲಿ ಬದುಕಿ ಆ ಮನೆಯ ಸುಃಖ ದುಃಖಗಳಲ್ಲಿ ತಾನೂ ಭಾಗಿಯಾಗಿ ತಾನು ಜೀವನದಲ್ಲಿ ಕಲಿತ ಪಾಠಗಳನ್ನು ಆ ಮನೆಯ ಮಕ್ಕಳಿಗೆ ಕಲಿಸಿ ಅವರ ಜೀವನವನ್ನು ರೂಪಿಸಿದ ಚಿತ್ರ. ತಾನು ಸಮರ್ಪಿಸಿಕೊಂಡ ಮನೆಗೆ ತನ್ನನ್ನು ಸೀಮಿತಗೊಳಿಸಿಕೊಂಡು ಮನೆಯ ಸಂಸ್ಕೃತಿಗೆ ತಾನೂ ಭಾಗೀದಾರಳಾಗಿ ಅದಕ್ಕೆ ತನ್ನ ಕೊಡುಗೆಯನ್ನು ಇತ್ತವಳು ಈ ಅದ್ದ್ಯಾ. ಅದ್ದ್ಯಾ ತನ್ನ ಮೇರೆಯಲ್ಲಿನ ಸಮಾಜದ ಭಾಷೆ ನೀತಿ ನಿಲುವುಗಳನ್ನು ನಿರ್ದೇಶಿಸುವ ಜೀವ. ಆದ್ದರಿಂದ ಇದು ಒಮ್ಮೆ ನಾವು ಕಳಕೊಂಡ ತಿರುಗಿ ಮರಳಿ ಬಾರದ ಸಂಸ್ಕೃತಿಯ ಚಿತ್ರವೆಂದರೂ ಸರಿ.

    Original price was: $1.20.Current price is: $0.72.
    Add to basket
  • -40%

    ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು

    0

    ಸಮೃದ್ಧ ಅನುಭವ ಸುತ್ತಲಿನ ಜಗತ್ತಿನಲ್ಲಿ ಲವಲವಿಕೆಯ ಆಸಕ್ತಿಯಿರುವ ಮನುಷ್ಯ ನಿರೂಪಿಸಿದ ಪುಸ್ತಕಗಳಲ್ಲಿ ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ ಒಂದು. ಈ ಪುಸ್ತಕದ ಬರಹದಲ್ಲಿ ನಯ ನಾಜೂಕು, ಕಲೆ ಇಲ್ಲ. ನೇರವಾಗಿ ನಿರೂಪಣೆ. ಅನುಭವದಿಂದ ಎದ್ದು ಬಂದ ಚಿಂತನೆ. ಕಾರಂತರ ಅಪೂರ್ವ ಪ್ರಾಮಾಣಿಕತೆಯ ಶ್ರದ್ಧಾವಂತ ಜೀವನದ ಪರಿಚಯವಾಗುತ್ತದೆ.

    ಅಪೂರ್ವಜೀವನದ ನೆನಪುಗಳನ್ನು ನಮಗೆ ಒದಗಿಸುವ ಪುಸ್ತಕ. ‘ಸಮಾಜದ ಋುಣ ಹೇಗೆ ತೀರಿಸಿಯೇನು?’ ಎಂದು ಬಹುಶಃ ಕೋ.ಲ.ಕಾರಂತರು ಹೇಳಿಕೊಂಡರೆ ಅದು ಅವರ ಹಿರಿತನವನ್ನು ತೋರಿಸುತ್ತದೆ.

    ವೈದೇಹಿಯವರ ಸುಂದರ ನಿರೂಪಣೆ ಇದಾಗಿದೆ.

    Original price was: $1.80.Current price is: $1.08.
    Add to basket
  • -39%

    ಗೋರಾ

    0

    ಗೋರಾ
    (ಜೀವನ ಚರಿತ್ರೆ)
    ಅತಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗೋರಾ (ಗೋಪರಾಜು ರಾಮಚಂದ್ರರಾವ) ಜಗತ್ತಿನ ಪ್ರಪ್ರಥಮ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದರು. ನಾಸ್ತಿಕವಾದದ ಪ್ರಚಾರಕ್ಕಾಗಿ ಪ್ರಪಂಚದಾದ್ಯಂತ ಸಂಚರಿಸಿ ಪ್ರಥಮ ಅಂತರಾಷ್ಟ್ರೀಯ  ನಾಸ್ತಿಕ ಸಮ್ಮೇಳನವನ್ನು ಏರ್ಪಡಿಸಿದರು. ನಾಸ್ತಿಕತೆ ಎಂದರೆ ಕೇವಲ ನಿರೀಶ್ವರ ವಾದಿಗಳೆಂದು  ತಿರಸ್ಕ್ರತ ದೃಷ್ಟಿಯಿಂದ  ಕಾಣುವಂತಹ ವಾತಾವರಣ ಇರುವ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬದುಕು ಹಸನಗೊಳ್ಳಲು ದಾರಿದೀಪ ಎಂದು ತಮ್ಮ ಬದುಕಿನ ಕೊನೆಯ ಘಳಿಗೆಯವರೆಗೂ ‘ಇತ್ಯಾತ್ಮಕ ನಾಸ್ತಿಕವಾದ’ದ ಪರ ಹೋರಾಡಿದ ಅಪರೂಪದ ವ್ಯಕ್ತಿಯ ಜೀವನ ಚರಿತ್ರೆ ಇದು.

    Original price was: $0.36.Current price is: $0.22.
    Add to basket