ಶ್ರೀ ಗಿರಿಮನೆ ಶ್ಯಾಮರಾವ್ ಅವರ ಚಿಂತನೆ, ಅನುಭವ, ಜೀವನ ಪ್ರೀತಿಯಿಂದ ಮೂಡಿಬಂದ ‘ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು’ ಒಂದು ವಿಶಿಷ್ಟ ಕೃತಿ. ಸಣ್ಣ ಸಣ್ಣ ಅಧ್ಯಾಯಗಳಲ್ಲಿ ಅವರು ಮನುಷ್ಯರ ಮಾತು, ವರ್ತನೆ, ನಂಬಿಕೆ, ಧೋರಣೆ, ಅವರ ಪ್ರತಿಕ್ರಿಯೆಗಳು, ಭಾವನೆಗಳು, ಅವರ ತಪ್ಪು-ಒಪ್ಪು, ಸಾಮರ್ಥ್ಯ, ದೌರ್ಬಲ್ಯಗಳ ಅನಾವರಣ ಮಾಡಿದ್ದಾರೆ. ಮನುಷ್ಯರ ಗುಣ ಸ್ವಭಾವಗಳ ನೂರಾರು ವಿಷಯಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಕನ್ನಡಿ ಕೊಟ್ಟು ‘ನಿಮ್ಮ ಮುಖ ನೋಡಿಕೊಳ್ಳಿ, ನಿಮ್ಮ ಮಾತು-ವರ್ತನೆಯ ದರ್ಶನ ಮಾಡಿಕೊಳ್ಳಿ’ ಎಂದಿದ್ದಾರೆ. ‘ನಿಮ್ಮ ಡೊಂಕನ್ನು ನೀವೇ ತಿದ್ದಿಕೊಳ್ಳಿ’ ಎಂದು ಆಪ್ತ ಸ್ನೇಹಿತರಂತೆ ಬರೆದಿದ್ದಾರೆ. ಸ್ವಲ್ಪವೂ ಕಷ್ಟ-ಆಯಾಸ ಕೊಡದ ಬರವಣಿಗೆ. ನಮ್ಮನ್ನು ಚಿಂತನೆಗೆ ಹಚ್ಚುವ ವಿಚಾರಗಳು, ವ್ಯಕ್ತಿತ್ವವನ್ನು ಸುಧಾರಿಸುವ ವಿಧಾನಗಳು. ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ, ಪಾಲಕ, ಪೋಷಕ, ನಾಗರಿಕ ಓದಬೇಕಾದ ಪುಸ್ತಕ. ಶ್ರೀ ಶ್ಯಾಮರಾವ್ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಾನೆ. ಪುಸ್ತಕವನ್ನು ಓದಿದ ನೀವೂ ಅಭಿನಂದಿಸದೆ ಇರಲಾರಿರಿ.
ಡಾ||ಸಿ.ಆರ್. ಚಂದ್ರಶೇಖರ್
ಮನೋವೈದ್ಯರು
ನಿಮ್ಹಾನ್ಸ್, ಬೆಂಗಳೂರು