ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚು ಸಮಯ ಕಳೆದಿದ್ದಾಗ್ಯೂ ಸಹ ಇಂದಿಗೂ ಕನ್ಫ್ಯೂಷಿಯಸ್ ಅವರ ವಿಚಾರಗಳು ಆಳವಾಗಿ ಮತ್ತು ವ್ಯಾಪಕವಾಗಿ ಚೀನಾ ದೇಶ ಮತ್ತು ಸಮಾಜದಲ್ಲಿ ಮನೆಮಾಡಿವೆ. ಚೀನಾ ದೇಶದ ಮಾನಸಿಕತೆಯನ್ನು ಅರಿಯಲು ಕನ್ಫ್ಯೂಷಿಯಸ್ ಅವರ ಗ್ರಂಥಗಳನ್ನು ಅಧ್ಯಯನ ಮಾಡುವುದು ಅತಿ ಆವಶ್ಯಕವಾಗಿದೆ. ಮಹಾನ್ ದಾರ್ಶನಿಕ ಕನ್ಫ್ಯೂಷಿಯಸ್ನ ಈ ಸೂಕ್ತಿಗಳು, ಚೀನಾಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಜನರಿಗೆ ಮಾರ್ಗದರ್ಶನವಾಗಿದೆ. ಇಂದಿನ ಈ ಭರಾಟೆಯ ಜಗತ್ತಿನಲ್ಲಿ ಈ ಸೂಕ್ತಿಗಳು ಮನುಷ್ಯನ ಒಳಿತಿಗೆ, ಆ ಮೂಲಕ ಇಡೀ ಜಗತ್ತಿನ ಶಾಂತಿಗೆ ಮಹತ್ವದ ಕೊಡುಗೆಯಾಗಿವೆ.