• -40%

    ಮಾಯಿ ಕೆಂದಾಯಿ

    0

    ನೆನಪುಗಳು, ಹಳೆ ಸಿನಿಮಾದ ರೀಲಿನ ಡಬ್ಬಿ, ಗಾಲಿಗೆ ಸಿಕ್ಕು, ಸುರುಳಿ ಸುರುಳಿ ಬಿಚ್ಚುತ್ತಾ ಒಂದೊಂದೇ ದೃಶ್ಯಗಳನ್ನ ಕಣ್ಣೆದುರು ಬಿಡಿಸಿಟ್ಟು, ಮನಸಿನ ತುಂಬೆಲ್ಲ ದೃಶ್ಯಗಳ ಸಾಲು ಮೆರವಣಿಗೆ ಹೊರಡಿಸಿ, ನಮ್ಮ ಸುತ್ತಮುತ್ತಲಿನದನ್ನೆಲ್ಲ ಮರೆಯುವಂತೆ ಮಾಡಿಬಿಡುತ್ತವೆ. ಕನ್ನಡದ ಹಿರಿಯ ಕತೆಗಾರ್ತಿ, ಜಯಶ್ರೀ ದೇಶಪಾಂಡೆ ಅವ್ರ ‘ಮಾಯಿ’ ಓದೂವಾಗ್ಲೂ ಇದೆ ಅನುಭವ ನನಗೆ ! ಇವನ್ನೆಲ್ಲ ಓದೋವಾಗ ಜಯಶ್ರೀ ಅವರ ಜೊತೆ ಜೊತೆಗೆ ನೀವೂ ನಗ್ತೀರಿ,
    ಅಳ್ತೀರಿ, ಭಾವುಕ ಆಗ್ತೀರಿ, ಮದುವೆ ಗದ್ದಲದಲ್ಲಿ ಬೀಳ್ತೀರಿ, ಸ್ಕೂಲು, ಕಾಲೇಜು, ಪಡಸಾಲಿ, ಕೊಟ್ಟಿಗೆಗಳಲ್ಲೆಲ್ಲ ಓಡಾಡ್ತೀರಿ, ರಾಮಾಯಣ ಮಹಾಭಾರತಗಳ ಪಾತ್ರಗಳೊಂದಿಗೆ ಮುಖಾಮುಖಿಯಾಗ್ತೀರಿ, ಮತ್ತು ಜಯಶ್ರೀ ದೇಶಪಾಂಡೆ ಅವರಷ್ಟೇ ಮಾಯಿ ಹಾಗು ಕೆಂದಾಯಿಯನ್ನ ಪ್ರೀತಿಸ್ತೀರಿ ಸಹ!

    – ಜಯಲಕ್ಷ್ಮೀ ಪಾಟೀಲ್

    ಈ ಕೋಶದ ಕೇಂದ್ರಬಿಂದು ಅಂದರ ‘ಮಾಯಿ’. ಮಾಯಿ ಅಂದರ ತಾಯಿ, ಅಜ್ಜೀನೂ ಹೌದು, ‘ಮಾಯಾ’ನೂ ಹೌದು. ಮಾಯಾದ ಅರ್ಥ ಅಂತ:ಕರಣ. ಈ ಮಾಯಿಯ ಅಂತ:ಕರಣ ಕೃಷ್ಣಾ ನದಿಯ ಪ್ರವಾಹದ ಹಂಗ ವಿಶಾಲ. ಖಾಸ್ ಬಳಗಕ್ಕಷ್ಟೇ ಮಾಯಿಯ ಈ ಅಂತ:ಕರಣ ಸೀಮಿತ ಆಗಿದ್ದಿಲ್ಲ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಅಂತೂ ಸೈಯೇ ಸೈ ಇವರಲ್ಲದ ನಿಮಾ ಕಾಕೂ, ಕಾಂತಾಮಾಮೀ, ಮೊಹರಂ ಕುಣಿತದ ಹುಸೇನಿ ಇವರೆಲ್ಲ ಮಾಯಿಯ ವಾತ್ಸಲ್ಯದ ಪರಿಧಿಯೊಳಗ ಬಂದವರೇ. ಇಷ್ಟs ಯಾಕ ಅವರ ಪ್ರೀತಿಯ ಆಕಳು ‘ಕೆಂದಾಯಿ’ ಅಂತೂ ಮಾಯಿಗೆ ಸ್ವಂತ ಮಗಳಿದ್ದಂಗ. ಈ ಕೆಂದಾಯಿಯ ಕರು ಸತ್ತಾಗ ಅದರ ಸಂಕಟಾ ನೋಡಲಾರದ ಮಾಯಿ ಇಡೀ ರಾತ್ರಿ ಚಡಪಡಿಸ್ತಾರ. ‘ನಿನ್ನ ಸಂಕಟಾ ನಾ ಹ್ಯಾಂಗ ತೊಗೊಳ್ಳೇ ಗೌರೀ’ ಅಂತ ರಾತ್ರಿಯಿಡೀ ಹಲಬ್ತಾರ.

    – ಸುನಾಥ ದೇಶಪಾಂಡೆ

    Original price was: $1.44.Current price is: $0.86.
    Add to basket