• -40%

    ರಾಜಧರ್ಮ ರಾಜನೀತಿ: ೨

    0

    ರಾಜಧರ್ಮ-ರಾಜನೀತಿ:೨

    ಈ ಪುಸ್ತಕದ ಶೀರ್ಷಿಕೆ ಓದಿ `ರಾಜಮಹಾರಾಜರ ಕಾಲದ ಹಳೆಯ ನೀತಿಯ ಶಾಸ್ತ್ರಪುಸ್ತಕ’ ಎಂದು ಯಾರೂ ಮೂಗುಮುರಿಯಬೇಕಿಲ್ಲ. ಆಳುವವರು ಆರಿಸಿ ಬಂದರೂ, ಪಾರಂಪರ್ಯವಾಗಿ ಹಕ್ಕಿನಿಂದ ಅಧಿಕಾರಕ್ಕೆ ಬಂದರೂ, “ಆಳಿಕೆ” ಎಂಬುದಿರುತ್ತದಲ್ಲ? ಅದಕ್ಕೆ ನೀತಿ, ನಿಯಮ, ಸಂಯಮ, ವಿಧಾನ, ಅಲ್ಲಿ ನ್ಯಾಯ, ಧರ್ಮ ಪರಿಪಾಲನೆ, ವ್ಯವಸ್ಥೆಯ ರಕ್ಷಣೆ, ಪ್ರಜಾಹಿತ ಎಂಬ ಕವಚಗಳೋ, ಕಡಿವಾಣಗಳೋ ಬೇಕಲ್ಲ? ಸಂವಿಧಾನ ಇರುತ್ತದೆ, ಮೀರುವವರು ಆಡಳಿತಾರೂಢರೇ ಆದರೇನು ಗತಿ? ಐಪಿಸಿ ಎಂಬ ಅಪರಾಧ ಸಂಹಿತೆ ಇರುತ್ತದೆ. ಆದರೆ ಕ್ರಿಮಿನಲ್ ಗಳೇ ಆರಿಸಿಬರುತ್ತಾರಲ್ಲ? ಯಾವ ಸಂಹಿತೆ ಇವರಿಗೇನು ಮಾಡಿದೆ? ಈ ನಿಟ್ಟಿನಲ್ಲಿ ಸರಿ-ತಪ್ಪು-ವಿವೇಕಗಳನ್ನು ಜಾಲಾಡಿ ಬರೆಯುವುದಕ್ಕೆ  ನನ್ನ ಅಂಕಣಕ್ಕೆ ಈ ಶೀರ್ಷಿಕೆಯನ್ನಾರಿಸಿಕೊಂಡೆ.  ಆ ಅಂಕಣಗಳನ್ನು ಈ ಪುಸ್ತಕ ಒಳಗೊಂಡಿದೆ.

     

    Original price was: $4.20.Current price is: $2.52.
    Add to basket
  • -40%

    ಮಹಾಪ್ರಸ್ಥಾನ

    0

    ಮಹಾಪ್ರಸ್ಥಾನ

    ಒಬ್ಬಳೇ ಹಿಂದೆ ಹಿಂದೆ ಅನುಸರಿಸುತ್ತಾ, ಪಾಂಡವರು ಮುಂದೆ ಮುಂದೆ ಸರಿಯುತ್ತಾ, ಇವಳ ಹೃದಯಾಳದ ನೋವಿನ ಪಾತಾಳಗರಡಿಯ ದರ್ಶನದಲ್ಲಿ ನನಗೆ ಅನೇಕ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತಿ, ಆಯಾಮಗಳನ್ನು ವಿವರಿಸುವ ಅವಕಾಶವೂ ಲಭ್ಯವಾಯ್ತು. ಏನು ಈ “ಸಶರೀರಸ್ವರ್ಗಪ್ರಾಪ್ತಿ” ಎಂದರೆ? ಧರ್ಮಜ ಹಾಗೆ ಆಶಿಸಿದ್ದು ಯುಕ್ತವೇ? ತಮ್ಮಂದಿರಿಗೆ, ಪತ್ನಿಗೆ ಬಲಾತ್ಕಾರ ‘ಆರೋಹಣವೇ?’ “ಎಲ್ಲಿಗೆ” ಎಂದರೆ, ತಿಳಿಯದವರಿಗೆ “ಸ್ವರ್ಗಾರೋಹಣದ ಬಲಾತ್ಕಾರವೇಕೆ? ಅದು ಅವರಿಗೆ ಸಾಧ್ಯವೂ ಆಗಲಿಲ್ಲವೆಂದಾದರೆ, ಧರ್ಮಜನಿಗೆ ಮುಂಚೆ ಏಕೆ ತಿಳಿಯಲಿಲ್ಲ? ಮೂಲ ಮಹಾಭಾರತದಲ್ಲಿ ಈ ಯಾವುದೂ ಸ್ಪಷ್ಟ ಉತ್ತರ ಪಡೆದಿಲ್ಲ. ನಮಗೆ, ಇಂದಿನವರಿಗೆ ಪ್ರಶ್ನೆ ತೀರುವುದಿಲ್ಲ! ಹೇಗೆ ಬಗೆಹರಿಸುವುದು? ಈ ದಿಸೆಯಲ್ಲೇ ಇಲ್ಲಿ ಕಥೆ, ಅದರ ಸೂತ್ರ ನಡೆಯುತ್ತದೆ.

    Original price was: $1.80.Current price is: $1.08.
    Add to basket
  • -40%

    ದೇವಕಿಯ ಚಿಂತನೆಗಳು

    0

    ದೇವಕಿಯ ಚಿಂತನೆಗಳು

    ವಸುದೇವ, ದೇವಕಿ, ಯಶೋದೆ, ನಂದ, ಕಂಸ, ಮಾಲತಿ, ಮಾಧವಿ, ವಾಸಂತಿ, ಭದ್ರ, ವಜ್ರ, ಬಾಹು ಇಲ್ಲಿ ಪಾತ್ರಧಾರಿಗಳು. ಎಲ್ಲರೂ ಕುಣಿಯುವುದು ಕೃಷ್ಣನ ಸುತ್ತವೇ. ಅವನೇ ಸೂತ್ರಧಾರ, ಪ್ರಧಾನ ಪಾತ್ರಧಾರಿ ಸಹ.

    Original price was: $4.20.Current price is: $2.52.
    Add to basket
  • -40%

    ಡಬ್ಲ್ಯು. ಬಿ. ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ

    0

    ಡಬ್ಲ್ಯು. ಬಿ . ಯೇಟ್ಸ್ ನ ಕಾವ್ಯದ ಮೇಲೆ  ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ

    ಯೇಟ್ಸನಿಗೆ ಭಾರತೀಯ ಪ್ರಭಾವಮೂಲಗಳು ಕೇವಲ ಕಾವ್ಯಸಾಮಗ್ರಿಯ ಮಟ್ಟದಲ್ಲಿ ಉಳಿದರೆ, ಎಲಿಯಟ್ಟನಿಗೆ ಅವು ತತ್ತ್ವನಿಷ್ಕರ್ಷೆಯ, ಜೀವನದರ್ಶನದ ಸ್ಫೂರ್ತಿಯೂ ಆಗಿದೆಯೆಂದು ಕಂಡಮೇಲೆ ವೇದೋಪನಿಷತ್ತುಗಳ ಬೆಲೆ, ಪಾಶ್ಚಾತ್ಯ ಸಂಸ್ಕೃತಿಯ ಮೋಹದ ಸುಳಿಯಲ್ಲಿ ಸಿಕ್ಕ ಅಂದಿನ ನನಗೆ ಅಪಾರವಾಗಿ ಕಂಡು, ನನ್ನನ್ನೇ ನಾನು ಅರಿಯುವ ಪ್ರಯತ್ನದಲ್ಲಿ ಈ ಕವಿದ್ವಯರ ಪಾತ್ರವನ್ನು ಚಿರಸ್ಮರಣೀಯವನ್ನಾಗಿಸಿದೆ. ನಷ್ಟಪ್ರಾಯನಾಗಿದ್ದ ನನ್ನನ್ನು ಇಂದಿನ ಸ್ಥಿತಿಗೆ ತಲುಪಿಸಿರುವ ಈ ಕವಿಗಳನ್ನು ಎಂದೆಂದೂ ಮರೆಯಲಾರೆ; ಇವರ ವಿಷಯಕ ನಿಬಂಧವನ್ನು ಬರೆದ ನನಗೆ ದೊರೆತ ಈ ಫಲ, ಡಾಕ್ಟೊರೇಟ್‍ಗಿಂತ ಅಮೌಲ್ಯವಾದ ಫಲ, ಇದೇ! ಈ ಮಾತನ್ನು ಧನ್ಯತೆಯಿಂದ ಬರೆಯುವ ಭಾಗ್ಯ ನನ್ನದು. ನಾಲ್ಕುಜನಕ್ಕೆ ಈ ಅಲ್ಪಕೃತಿಯಿಂದ ಪ್ರಯೋಜನವಾದರೆ, ಮುಂದೆ ಎಲಿಯಟ್ಟನ ವಿಷಯಕ್ಕೂ, ಇತರ ಆಂಗ್ಲ ಕವಿಗಳ ಬಗೆಗೂ ಈ ಮಾದರಿಯ ಗ್ರಂಥಗಳನ್ನು ಬರೆಯುವ ವಿಚಾರವಿದೆ. ಗೆಳೆಯ ಪ್ರೊ. ಶಿವಾನಂದ ಗಾಳಿಯವರು ಈ ಬಗೆಗೆ ಹಗಲೆಲ್ಲ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಈ ಪುಸ್ತಿಕೆಗೆ ಸಿಗುವ ಪುರಸ್ಕಾರ, ಪ್ರೋತ್ಸಾಹ ಅದನ್ನು ನಿರ್ಧರಿಸಲಿದೆ.

    Original price was: $0.60.Current price is: $0.36.
    Add to basket
  • -40%

    ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?

    0

    ಗಾಂಧಿಯನ್ನು ನಿಜವಾಗಿ ಕೊಂದವರು  ಯಾರು?

    ನಾನು ರಾಜಕಾರಣಿಯೂ ಅಲ್ಲ. ರಾಜಕಾರಣ ವಿಶ್ಲೇಷಣೆಯು ನನ್ನ ಪ್ರಧಾನ ಕ್ಷೇತ್ರವೂ ಅಲ್ಲ. ಸಾಹಿತ್ಯದ ಅಧ್ಯಯನ, ಅದರ ಪ್ರಯೋಜನವನ್ನು ಸಾರ್ವಜನಿಕರಿಗೆ ರಾಷ್ಟ್ರೀಯ ಹಿತದೃಷ್ಟಿಯಿಂದ ಬಡಿಸುವ ಕಾಯಕ, ನಿರಂತರ ಚಿಂತನ-ಋಷಿಮುನಿಗಳ ಪ್ರಾಚೀನ ಪರಂಪರೆಯಲ್ಲಿ ಬಂದ ಲೋಕ ಸಂಗ್ರಹ ವಿಚಾರಗಳ, ಭಾವನೆಗಳ, ಅಧ್ಯಾತ್ಮಶಕ್ತಿಯ ಜಾಗೃತಿಗಳ ಕಾಯಕವನ್ನು ನನಗೆ ಸಾಧ್ಯವಾದ ಮಟ್ಟಿಗೆ ಮಾಡಿಕೊಂಡು ಲೋಕಕ್ಕೆ ಸ್ಪಂದಿಸುವ ಒಬ್ಬ ನಿವೃತ್ತ ಪ್ರಾಧ್ಯಾಪಕ. ಇದೆಲ್ಲ ನಿಮಗೆ ಗೊತ್ತೇ ಇದ್ದೂ ನಾನಿಲ್ಲಿ ನೆನಪಿಸುವ ಅಗತ್ಯ ಏಕೆ ಇದೆ? ಎಂದು ಹೇಳಲೇ ಬೇಕಾಗಿದೆ.
    ಅನೇಕ ಮುಗ್ಧ ಭಾರತೀಯರಂತೆ ನಾನೂ ಮ|| ಗಾಂಧಿಯವರನ್ನು ಮೆಚ್ಚಿಕೊಂಡ ಕಾಲ ಇತ್ತು. ‘ಗಾಂಧಿ, ನೆಹ್ರೂ’ ಎಂದೊಡನೆ `ಜೈ ಎನ್ನುವ ಬಾಲ್ಯ ಇತ್ತು. ೧೯೫೦ರ ಸುಮಾರಿಗೆ ನೆಹ್ರೂ ಭ್ರಮೆ ಬಿಡಲಾರಂಭಿಸಿತ್ತು. ಈ `ನೆಹ್ರೂ’ ಮೂಲ ಯಾವುದು? `ಇವರು ನಿಜ ರಾಷ್ಟ್ರ ಭಕ್ತರೇ? ಸ್ವತಂತ್ರ ಚಿಂತಕರೇ? ತ್ಯಾಗಶೀಲರೇ? ಶೀಲವುಳ್ಳ, ವಿಶ್ವಸನೀಯ ನಾಯಕರೇ?’ ಎಂದು ಪ್ರಶ್ನೆ ಕೇಳಿಕೊಳ್ಳುತ್ತಾ ಹೋದಂತೆ, ಓದು ವ್ಯಾಪ್ತಿ, ಚಿಂತನ, ಚರ್ಚೆ, ಸಮಾಲೋಚನೆಗಳು ನಡೆಯುತ್ತಾ ಬಂದಂತೆ, `ಇವರು ಗಾಂಧಿ ಪ್ರಭಾವದ ದುರ್ಬಳಕೆಯ ಮಹಾಸ್ವಾರ್ಥಿ, ಎಷ್ಟೂ ಭಾರತೀಯತೆಯ ಪರಿಚಯವಿಲ್ಲದ ಢೋಂಗೀ ರಾಜಕಾರಣಿ’ ಎಂಬುದಕ್ಕೆ ಅವರದೇ ನಡೆವಳಿಕೆಗಳು, ರಾಷ್ಟ್ರಾವನತಿ, ತಪ್ಪು ಹೆಜ್ಜೆಗಳು ಪ್ರಮಾಣೀಕರಿಸುತ್ತಾ  ಬಂದವು. ಘಾತಕತನ, ಸಾಕ್ಷಿಗಳ ಕುಕ್ಕುವ ಬೆಳಕಿನಲ್ಲಿ ದೇವರೆಂದು ಭಾವಿಸಿದ್ದವನಿಗೆ ದೆವ್ವದ ಸಾಕ್ಷಾತ್ಕಾರವಾಯ್ತು. ಆಗುತ್ತಲೇ ಇದೆ. ಈ ಬೆಳಕಿನಲ್ಲೇ `ಸುಭಾಷರ ಕಣ್ಮರೆ’ ಪುಸ್ತಕವನ್ನು ನಾನು ಬರೆದದ್ದು. ರಾಮಾಯಣ, ಮಹಾಭಾರತ, ಭಾಗವತಗಳ ಆಸುರೀ ಶಕ್ತಿಗಳು, ಅವುಗಳ ಶಕ್ತಿ, ಹಿಡಿತ, ಅವುಗಳ ಬೇರು, ವಿಷಫಲಗಳು ಈಗಣ ಭಾರತದಲ್ಲೂ ಕಾಣಲಾರಂಭಿಸಿ, ನಾನು ಕ್ಷೇತ್ರಾಂತರದಲ್ಲೂ ದುಷ್ಟ ಪಾತ್ರಗಳ ಪರಿಚಯಕ್ಕೆ ಕೈ ಹಾಕುವ ಕೆಲಸಕ್ಕೆ ಬಂದುದು ಆಕಸ್ಮಿಕವಾಗಿ ಕಂಡರೂ ದೈವಪ್ರೇರಣೆಯೂ ಕಾಣಲಾರಂಭಿಸಿದೆ.

    Original price was: $1.80.Current price is: $1.08.
    Add to basket
  • -40%

    ಶ್ರೀರಾಮ ಜನ್ಮಭೂಮಿ ತೀರ್ಪು

    0

    ಶ್ರೀರಾಮ ಜನ್ಮಭೂಮಿ ತೀರ್ಪು
    ಹಿಂದು, ಇಂದು, ಮುಂದು, ಸುತ್ತ

    ಈ ಪುಟ್ಟ ಗ್ರಂಥದ ಮೂರು ಮುಖ್ಯ ಲೇಖನಗಳನ್ನು ನಾನು ಸಮೀಪ ಕಾಲದಲ್ಲಿ ಕರ್ನಾಟಕದ ಬೇರೆ ಬೇರೆ ಪತ್ರಿಕೆಗಳಿಗಾಗಿ ಬರೆದದ್ದು. 2ನೆಯದು ಒಂದು ಮಾತ್ರ ಈ ಪುಸ್ತಕದಲ್ಲಿ ಸೇರ್ಪಡೆಗಾಗಿಯೇ ಬರೆದದ್ದು. ಎಲ್ಲಾ ಪರಸ್ಪರ ಸಂಬಂಧಿಸಿದ್ದು. ಕೋಲಾಹಲಕರವಾದ ಇಂದಿನ ಅವ್ಯವಸ್ಥೆಯ ಸ್ಥಿತಿಯಲ್ಲಿ ಒಂದು ವಾಸ್ತವವಾದ, ಸರ್ವೇಕ್ಷಣ ಚಿತ್ರವನ್ನು ನೀಡುತ್ತದೆಂದು ನಂಬಿದ್ದೇನೆ. ನಮ್ಮ ಜನ ಮುಗ್ಧರು ಮಾತ್ರವಲ್ಲ, ಮೂಢರೂ, ಮತಿಭ್ರಷ್ಟಾವಸ್ಥೆಯಲ್ಲಿರುವ ವಿಭ್ರಮಶೀಲರು! ಗುಲಾಮಗಿರಿಯ ಗುಂಗಿನಿಂದ ಇನ್ನೂ ಹೊರಬರಲಾಗದ ಈ ಅಸಹಾಯಕ ದುಃಸ್ಥಿತಿಯ ಲಾಭ ಪಡೆಯುತ್ತಿರುವವರು ನೆಹ್ರೂ ಪರಂಪರೆಯ ಇತಿಹಾಸ ಪ್ರಜ್ಞಾಶೂನ್ಯ, ಭ್ರಾಂತ ರಾಜಕಾರಣಿಗಳು, ಅಸತ್ಯದ ವಿಲಾಸದಲ್ಲಿ ಅಸಂಬದ್ಧ ಕನಸು ಕಾಣುತ್ತಿರುವ ಉನ್ಮತ್ತರು, ದುರಾಸೆಯ, ದುರಾಲೋಚನೆಯ ಅಲ್ಪಸಂಖ್ಯಾತ ಮುಖಂಡ ರಾಜಕಾರಣಿಗಳು, ಕಾಮ್ರೇಡರು ಮತ್ತು ಪೊಳ್ಳು ಸೆಕ್ಯುಲರಿಜಂ ಪ್ರವಾಹದಲ್ಲಿ ಕೊಚ್ಚುತ್ತಿರುವವರ ಓಟು ಬೇಟೆಯಲ್ಲಿರುವ ಎಲ್ಲ ದುಷ್ಟ ಸಂಚಿನ ರಾಜಕಾರಣಿಗಳು, ವಿದೇಶೀ ದ್ರೋಹ ಶಕ್ತಿಗಳು.

    Original price was: $1.20.Current price is: $0.72.
    Add to basket
  • -40%

    ರಾಜಧರ್ಮ-ರಾಜನೀತಿ ಭಾಗ ೧

    0

    ರಾಜಧರ್ಮ, ರಾಜನೀತಿ ಭಾಗ ೧ 

    ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದು ಕಷ್ಟದ ಕೆಲಸ ಎಂದು ನನ್ನ ಅನುಭವ. ಬೇರೆಯವರ ಅಭಿಪ್ರಾಯವು ಬೇರೆಯೇ ಇದ್ದರೆ ಅದಕ್ಕೆ ಅವರವರೇ ಹೊಣೆ. ಬರೆಯುವವನ “ವ್ಯವಸಾಯ” – ಅಂದರೆ ಓದಿನ ವ್ಯಾಪ್ತಿ, ಅದರ ಸಾಂದರ್ಭಿಕ ಅನ್ವಯಿಕೆ, ಸಂಗತಿಗಳನ್ನು, ಸಂದರ್ಭಗಳನ್ನು ನೋಡುವಲ್ಲಿ, ಅರಿಯುವಲ್ಲಿ, ವಿಶ್ಲೇಷಣೆ ಮಾಡುವಲ್ಲಿ ಇರಬೇಕಾದ ನಿರ್ದಿಷ್ಟ ಸಾಮುದಾಯಿಕ, ಸಾರ್ವತ್ರಿಕ ಹಿತ, ನಿಷ್ಠುರವಾದರೂ ಸತ್ಯವನ್ನು ಹೇಳುವ ಛಲ, ಎದೆಗಾರಿಕೆ, ಅದಕ್ಕೆ ಬೇಕಾದ ಸಮರ್ಥನೆಗಳನ್ನು ಓದಿನಿಂದಲೂ, ಅನುಭವದಿಂದಲೂ ನಿರೂಪಿಸುವ ಪರಿಶ್ರಮ – ಅಡಕವಾಗಿ, ಓದುಗರ ಎಲ್ಲ ವರ್ಗಗಳನ್ನೂ ಮನದಲ್ಲಿಟ್ಟು, ತಿಳಿಯುವಂತೆ ಎಚ್ಚರ ವಹಿಸಬೇಕಾದ ಬರೆಹದ ಬಿಗಿ, ತಿಳಿ, ಭಾರವಾಗದ ಶೈಲಿ, ಅಲ್ಲಲ್ಲಿ ನೆನಪುಗಳು, ವ್ಯಕ್ತಿ ಚಿತ್ರಣ, anecdotes , ರೋಚಕವಾದ ಸಂಗತಿಗಳು ಎಲ್ಲೋ ಚದುರಿದ್ದರೂ, ಸಣ್ಣವಾಗಿದ್ದರೂ, ಹಿಡಿಯುವ ಸೂಕ್ಷ್ಮತೆ, ವಾರಾವಾರ ಪತ್ರಿಕಾಲಯಕ್ಕೆ ಸಕಾಲಕ್ಕೆ ತಲುಪಿಸಬೇಕಾದ ಹೊಣೆ, ಎಚ್ಚರ – ಇಂಥವು ಸುಲಭಸಾಧ್ಯವಾಗಿ ವಶವಾಗುವ ಗುಣಗಳಲ್ಲ. ಎಲ್ಲರೂ ಹೀಗೆ ಬರೆಯತ್ತಾರೋ ಇಲ್ಲವೋ, ಎಂಬುದು ನಿಮಗೂ ಗೊತ್ತಿದೆ. ಬರೀ Journalistic  ಎಂಬ ರೀತಿಯ ಸುದ್ದಿ ವಿಶ್ಲೇಷಣೆಗೇ ಮೀಸಲಾದ ಅಂಕಣ ಬರೆಹಗಾರರ ರೀತಿ ಬೇರೆ. ಅಲ್ಲಿ ಸೂಕ್ಷ್ಮತೆ, ವಿಶ್ಲೇಷಣಾ ಕುಶಲತೆ, ಸಮಗ್ರ ಸಂಗತಿಗಳ ಪಕ್ಷಿ ವೀಕ್ಷಣ, ಸುದ್ದಿ ಸಾಮೀಪ್ಯ, ತಕ್ಕಮಟ್ಟಿನ ನಿಷ್ಪಕ್ಷಪಾತತೆ, ಅತಿರೇಕ, ಆಕ್ರೋಶ, ಇಲ್ಲದ ಶೈಲಿ, ಓದುಗನನ್ನು ಮೆಚ್ಚಿಸಹೊರಡದ ಸುದ್ದಿನಿಷ್ಠೆ, ವಸ್ತು ನಿಷ್ಠೆ – ಬರೀ “report ” ಆಗದಂತೆ ವಹಿಸಬೇಕಾದ ಎಚ್ಚರ, ಇವು ಒಂದು ಬಗೆ.

    Original price was: $4.20.Current price is: $2.52.
    Add to basket
  • -40%

    ಶ್ರೀ ಭಾಗವತ ಕಥಾ ಪ್ರಪಂಚ

    0

    ಶ್ರೀ ಭಾಗವತ ಕಥಾ ಪ್ರಪಂಚ

    ಶ್ರೀ ಭಾಗವತಧಾರಾತೀರ್ಥ ವಾಹಿನಿ

    ಈ “ಶ್ರೀ ಭಾಗವತ ಧಾರಾತೀರ್ಥವಾಹಿನೀ-ಶ್ರೀ ಭಾಗವತ ಕಥಾ ಪ್ರಪಂಚ” ಗ್ರಂಥದ ಪ್ರಕೃತ ಸಂಪುಟದ ಬಹುಭಾಗವನ್ನು ನಾನು ಬರೆದೇ ೧೬- ಅಥವಾ ೧೮ ವರ್ಷಗಳಾಗಿರಬೇಕು. ಮೊದಲ ಭಾಗಕ್ಕೆ ಸೇರ್ಪಡೆಯಾಗಬೇಕಿದ್ದ ಇನ್ನಷ್ಟನ್ನು ಇದೀಗ ಸೇರಿಸಿ ಒಂದು ರೂಪಕ್ಕೆ ತಂದು, ನನ್ನ ಮಿತ್ರ ಶ್ರೀ ಸುಬ್ರಹ್ಮಣ್ಯ ಅವರ ಪ್ರಕಾಶನದಿಂದ ಪ್ರಕಟಿಸಿ ನಿಮ್ಮ ಕೈ ಸೇರುವಂತೆ ಮಾಡಲಾಗಿದೆ. “ಈ ಗ್ರಂಥ ಏಕೆ ಇಷ್ಟು ತಡವಾಯಿತು? ಇದರಲ್ಲೇನಿದೆ? ಇದರ ಅವಶ್ಯಕತೆಯೇನು?” ಎಂಬ ಬಗೆಗೆ ನಾಲ್ಕು ಮಾತು ವಿವರಣೆ ಅವಶ್ಯವಾಗುತ್ತದೆ.
    “ಶ್ರೀಕೃಷ್ಣಾವತಾರ” (ಎರಡು ಭಾಗಗಳು) ಬರೆದಾಗಿತ್ತು. ಮೊದಲನೆಯದು ಭಾಗವತ ದಶಮಸ್ಕಂಧದ ಪೂರ್ವಾರ್ಧದ ಕಾದಂಬರೀಕರಣ, ಕಥಾರೂಪ ನಿವೇದನೆಯಾಗಿದ್ದು “ತರಂಗ” ವಾರಪತ್ರಿಕೆಯಲ್ಲಿ ಪ್ರಕಟವಾಗಲು ವಾರಾವಾರಾ ಕಂತಿನಲ್ಲಿ ಬರುವಂತೆ ಬರೆಯಲಾಗಿದ್ದು ಪ್ರಕಟವೂ ಆಯಿತು.

    Original price was: $4.20.Current price is: $2.52.
    Add to basket
  • -40%

    ಆಳ್ವಾರರು ಮತ್ತು ಹರಿದಾಸರು

    0

    ಆಳ್ವಾರರು ಮತ್ತು ಹರಿದಾಸರು

    ಹರಿದಾಸರು, ಆಳ್ವಾರುಗಳು, ಶರಣರು, ಉತ್ತರ ಭಾರತೀಯ ಭಕ್ತಿ ಸಾಹಿತ್ಯ ರಚಯಿತರಾದ ಸಂತರು, ಭಕ್ತರು – ಇವರೇ ನಮ್ಮ ಸಂಸ್ಕೃತಿಯನ್ನು ಆಪತ್ಕಾಲದಲ್ಲಿ ವಿದೇಶೀಪ್ರಭಾವ, ಮತಾಂತರ ಹಾವಳಿಯಿಂದ ರಕ್ಷಿಸಿದವರು. ಯೋಗಿಗಳು, ಜ್ಞಾನಿಗಳು. ಪ್ರಕೃತ ಗ್ರಂಥದಲ್ಲಿ ನಾನು ಆಳ್ವಾರರುಗಳ ಮತ್ತು ಹರಿದಾಸರ ಕೊಡುಗೆಗಳು, ಶೈಲಿ ವ್ಯತ್ಯಾಸಗಳು, ಪರಸ್ಪರ ಪ್ರಭಾವಸಾಧ್ಯತೆಗಳನ್ನು ಕುರಿತು ಹಲವು ದಶಕಗಳ ಹಿಂದೆ ಉಡುಪಿಯಲ್ಲಿ ನೀಡಿದ ಉಪನ್ಯಾಸಗಳ ಮರುಮುದ್ರಣವಿದು.

    ಎಲ್ಲ ವೇದಾಂತವೂ ಅದಕ್ಕೆ ಪೂರಕವಾದ ತರ್ಕ ವ್ಯಾಕರಣಾದಿ ಶಾಸ್ತ್ರಗಳೂ ಪರಿಪೂರ್ಣತೆ ಹೊಂದಿ, ಪರಿಸಮಾಪ್ತಿ, ಸಮಗ್ರ ಪ್ರತ್ಯಕ್ಷಾನುಭವದ ರೂಪದಲ್ಲಿ ಉಪಾಸಕನಿಗೆ ದೊರಕುವುದೇ “ಯೋಗ”ದಲ್ಲಿ. ಹಾಗೆಂದರೆ ಬರೀ “ಆಸನ”ಗಳಲ್ಲ, ದೇಹ ವ್ಯಾಯಾಮ ಅಲ್ಲ. ಅಷ್ಟಾಂಗ ಯೋಗವಿಜ್ಞಾನಕ್ಕೇ ಭಕ್ತಿ ಎಂದು ಬೇರೊಂದು ಹೆಸರು. ಪಾತಂಜಲಯೋಗಕ್ಕೂ ಪೂರ್ವದ್ದು ಅಧ್ಯಾತ್ಮ ವೈದಿಕ ಯೋಗ. “ಮನಸ್ಸನ್ನು ದೇವರಿಂದ ತುಂಬುವುದೇ ಯೋಗ”. (ಯುಜ್ ಸೇರಿಸುವುದು). ಮನಸ್ಸನ್ನು “ಖಾಲಿ” ಮಾಡುವುದಲ್ಲ!

    Original price was: $0.60.Current price is: $0.36.
    Add to basket
  • -40%

    ಭಾರತ, ಇಸ್ಲಾಂ ಮತ್ತು ಗಾಂಧಿ

    0

    ಭಾರತ, ಇಸ್ಲಾಂ ಮತ್ತು ಗಾಂಧಿ:
    ಶ್ರೀ ಅರವಿಂದರ ಭವಿಷ್ಯವಾಣಿ
    ಮತ್ತು ಇತರ ಲೇಖನಗಳು
    ಗಾಂಧಿಯವರ ಮೇಲೂ ಹೆಚ್ಚು ಬೆಳಕು ಚೆಲ್ಲುವ, ದಿಗ್ದರ್ಶಕವಾದ ಸೂಕ್ತ ಲೇಖನಗಳು ಎಂದು ಭಾವಿಸುತ್ತೇನೆ. ಈಗ ನಮ್ಮೆದುರು ಇರುವುದು ರಾಷ್ಟ್ರ ರಕ್ಷಣೆಯ ಮಹಾ ಹೊಣೆ. ಅದಕ್ಕೆ ವಿಘ್ನವಾಗಿರುವ ಎಲ್ಲ ದುಷ್ಟ ವಿಚಾರಗಳನ್ನೂ, ಅಂಥ ಪರಂಪರೆಗಳನ್ನೂ, ಅವುಗಳನ್ನು ಹುಟ್ಟು ಹಾಕಿದವರನ್ನೂ ನಿರ್ದಾಕ್ಷಿಣ್ಯವಾಗಿ ಬಯಲು ಮಾಡಿ, ಅವುಗಳನ್ನು ಮೆಟ್ಟಿಯೇ ನಾವು ಮುಂದೆ ನಡೆದ ಹೊರತು ನಮಗೆ ಭವಿಷ್ಯವಿಲ್ಲ. ಕಣ್ಣು ಮುಚ್ಚಿ ಒಪ್ಪುವ, ಯಾರನ್ನೂ ಪೂಜಿಸುವ ಅಂಧಶ್ರದ್ಧೆ ಭಾರತೀಯ ಪರಂಪರೆಗೆ ದೂರವಾದುದು.

    Original price was: $1.80.Current price is: $1.08.
    Add to basket