• -40%

  ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ

  0

  ತಲೆ ಬುರುಡೆ
  ಬಿಡಿಸಿದ ಕೊಲೆ ರಹಸ್ಯ
  ಮೂಲ : ಶ್ರೀ ಕೆ. ರಾಮಯ್ಯ ರೈ
  ಅನುವಾದ: ಕೆದಂಬಾಡಿ ಜತ್ತಪ್ಪ ರೈ
  ಸಮಾಜದ ಈ ಸ್ವಾಸ್ಥ್ಯ ಕಾಪಾಡಲು ನಾವೇ ಪೊಲೀಸ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪೊಲೀಸರು ನಾಗರಿಕರ ಸ್ನೇಹಿತರಾಗಿದ್ದರೆ ಅದರಿಂದ ಎಲ್ಲರಿಗೂ ಹಿತ. ಒಳ್ಳೆಯ ಪೊಲೀಸ್ ಅಧಿಕಾರಿಗಳಿಗೆ ಯಾವತ್ತೂ ಜನರ ನೈತಿಕ ಬೆಂಬಲ ಸಿಕ್ಕಿಯೇ ಸಿಗುತ್ತದೆ. ಪೊಲೀಸರೇ ನಾಗರಿಕರ ಸಹಕಾರ ಪಡೆಯದೆ ದೂರ ಸರಿದರೆ ಈ ಮಾತು ವಿರೋಧಾಭಾಸದ್ದು ಅನಿಸುತ್ತದೆ.
  ಆದರೆ ನಮ್ಮ ನಡುವೆ ಶ್ರೀ ಕೆ. ರಾಮಯ್ಯ ರೈ ಅವರಂಥ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳೂ ಇದ್ದರು. ಅವರ ಅನುಭವ ನೆನಪುಗಳೇ ಇಂದಿನವರಿಗೆ ಆದರ್ಶವಾಗಲಿ. ಅವರ ಸ್ವಾನುಭವದ ಸತ್ಯಕಥೆ ‘ತಲೆಬುರುಡೆ’ ಕಾದಂಬರಿ ರೂಪದಲ್ಲಿ ಸ್ವಾರಸ್ಯಕರವಾಗಿ ಹರಿದು ಬಂತು.

  Original price was: $2.10.Current price is: $1.26.
  Add to basket
 • -40%

  ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ

  0

  ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ
  ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ ಪುಸ್ತಕವು ಬೆಟ್ಟದ ತಪ್ಪಲ ಮಾರಿಯಾದ ಹುಲಿಯನ್ನು ಮನೆಗೆ ತಂದು, ಅದು ಪಾಪ ರೂಪದ ಬೇತಾಳನಾಗಿ ಬೆಂಬತ್ತಿ ಹೆಗಲೇರಿ ಅನುದಿನವೂ ಪೀಡಿಸುತ್ತಿರಲಾಗಿ, ಅದರ ಜೀವನವನ್ನು ದುರಂತದಲ್ಲಿ ಅಂತ್ಯಗೊಳಿಸಿದ ಘಟನೆಯಾಗಿದೆ.

  Original price was: $0.96.Current price is: $0.58.
  Add to basket
 • -40%

  ಈಡೊಂದು ಹುಲಿಯೆರಡು 

  0

  ಈಡೊಂದು ಹುಲಿಯೆರಡು
  ‘ಬೇಟೆಯ ನೆನಪುಗಳು ‘ ಕನ್ನಡ ಜನತೆಯಲ್ಲಿ ಮೂಡಿಸಿದ ಪರಿಣಾಮ ರಮಣೀಯತೆಗೆ ಸರಿಮಿಗಿಲೆನಿಸಿ ‘ ಈಡೊಂದು ಹುಲಿಯೆರಡು’ ಎಂಬೀ ಕೃತಿಯು ಮತ್ತಷ್ಟು ಬಣ್ಣ ಬೆಡಗು ಬೆರಗುಗಳನ್ನು ಹೊತ್ತು ವಿಜೃಂಭಿಸುವುದರಲ್ಲಿ ಸಂಶಯವಿಲ್ಲ.  ಇಲ್ಲಿರುವುದು ಬರಿಯ ಬೇಟೆಯ ವ್ಯಸನದ ಕ್ರೌರ್ಯದ ರಕ್ತರಂಜಿತ ಕಥನವಲ್ಲ; ನಾಲ್ಕೈದು ದಶಕಗಳ ಹಿಂದಿನ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣ; ಒಂದು ಸೀಮೆಯ ಜನದ ನಡವಳಿಕೆಯನ್ನು ನಿಚ್ಚಳವಾಗಿ ಬಣ್ಣಿಸಿದ ಕುಂಚದ ಕುಶಲತೆ.

  Original price was: $1.80.Current price is: $1.08.
  Add to basket
 • -40%

  ಬೇಟೆಯ ನೆನಪುಗಳು

  0

  ಬೇಟೆಯ ನೆನಪುಗಳು
  ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರ; ಅದರಲ್ಲಿ ಕತೆಗಾರಿಕೆಯ ಅಂಶ ಅಡಕವಾಗಿರುವುದರಿಂದ ಆ ಪ್ರಬಂಧಪ್ರಕಾರ ಹೆಚ್ಚಿನ ಮೆಚ್ಚುಗೆ ಪಡೆದಿದೆ. `ಬೇಟೆಯ ನೆನಪುಗಳು’ ಎಂಬೀ ತೆರನ ಬರವಣಿಗೆ ಅದೇ ಹಾದಿಯಲ್ಲಿ ಸಾಗಿದರೂ, ಅದಕ್ಕಿಂತಲೂ ಆಕರ್ಷಕವಾಗಿ ಮೂಡಿಬಂದ ಒಂದು ಮಹತ್ತರ ಸಾಹಿತ್ಯ ಪ್ರಕಾರವೆನ್ನಬೇಕು. ಇದರಲ್ಲಿನ ವರ್ಣನೆ ಕಾದಂಬರಿಗಳ ವರ್ಣನೆಯ ಮಟ್ಟವನ್ನು ಮುಟ್ಟಬಲ್ಲುದು; ಅನೇಕ ಕುತೂಹಲಕಾರೀ ಘಟನೆಗಳು ಅಲ್ಲಲ್ಲಿ ಮೂಡಿ ಬಂದಿರುವುದರಿಂದ ಪತ್ತೇದಾರಿ ಕತೆಗಳ ಆಸಕ್ತಿ ಕೆರಳಿಸುವ ಅಂಶಗಳೂ ಇಲ್ಲಿ ವಿಪುಲವಾಗಿ ತುಂಬಿರುತ್ತವೆ.

  Original price was: $1.80.Current price is: $1.08.
  Add to basket