• -40%

    ಈಡೊಂದು ಹುಲಿಯೆರಡು 

    0

    ಈಡೊಂದು ಹುಲಿಯೆರಡು
    ‘ಬೇಟೆಯ ನೆನಪುಗಳು ‘ ಕನ್ನಡ ಜನತೆಯಲ್ಲಿ ಮೂಡಿಸಿದ ಪರಿಣಾಮ ರಮಣೀಯತೆಗೆ ಸರಿಮಿಗಿಲೆನಿಸಿ ‘ ಈಡೊಂದು ಹುಲಿಯೆರಡು’ ಎಂಬೀ ಕೃತಿಯು ಮತ್ತಷ್ಟು ಬಣ್ಣ ಬೆಡಗು ಬೆರಗುಗಳನ್ನು ಹೊತ್ತು ವಿಜೃಂಭಿಸುವುದರಲ್ಲಿ ಸಂಶಯವಿಲ್ಲ.  ಇಲ್ಲಿರುವುದು ಬರಿಯ ಬೇಟೆಯ ವ್ಯಸನದ ಕ್ರೌರ್ಯದ ರಕ್ತರಂಜಿತ ಕಥನವಲ್ಲ; ನಾಲ್ಕೈದು ದಶಕಗಳ ಹಿಂದಿನ ತುಳುವ ಮಲೆನಾಡಿನ ಬದುಕಿನ ಜೀವಂತ ಚಿತ್ರಣ; ಒಂದು ಸೀಮೆಯ ಜನದ ನಡವಳಿಕೆಯನ್ನು ನಿಚ್ಚಳವಾಗಿ ಬಣ್ಣಿಸಿದ ಕುಂಚದ ಕುಶಲತೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ನೆನಪುಗಳು

    0

    ಬೇಟೆಯ ನೆನಪುಗಳು
    ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರ; ಅದರಲ್ಲಿ ಕತೆಗಾರಿಕೆಯ ಅಂಶ ಅಡಕವಾಗಿರುವುದರಿಂದ ಆ ಪ್ರಬಂಧಪ್ರಕಾರ ಹೆಚ್ಚಿನ ಮೆಚ್ಚುಗೆ ಪಡೆದಿದೆ. `ಬೇಟೆಯ ನೆನಪುಗಳು’ ಎಂಬೀ ತೆರನ ಬರವಣಿಗೆ ಅದೇ ಹಾದಿಯಲ್ಲಿ ಸಾಗಿದರೂ, ಅದಕ್ಕಿಂತಲೂ ಆಕರ್ಷಕವಾಗಿ ಮೂಡಿಬಂದ ಒಂದು ಮಹತ್ತರ ಸಾಹಿತ್ಯ ಪ್ರಕಾರವೆನ್ನಬೇಕು. ಇದರಲ್ಲಿನ ವರ್ಣನೆ ಕಾದಂಬರಿಗಳ ವರ್ಣನೆಯ ಮಟ್ಟವನ್ನು ಮುಟ್ಟಬಲ್ಲುದು; ಅನೇಕ ಕುತೂಹಲಕಾರೀ ಘಟನೆಗಳು ಅಲ್ಲಲ್ಲಿ ಮೂಡಿ ಬಂದಿರುವುದರಿಂದ ಪತ್ತೇದಾರಿ ಕತೆಗಳ ಆಸಕ್ತಿ ಕೆರಳಿಸುವ ಅಂಶಗಳೂ ಇಲ್ಲಿ ವಿಪುಲವಾಗಿ ತುಂಬಿರುತ್ತವೆ.

    Original price was: $1.80.Current price is: $1.08.
    Add to basket
  • -40%

    ಬೇಟೆಯ ಉರುಳು

    0

    ಬೇಟೆಯ ಉರುಳು
    ತುಳುನಾಡ ಮಲೆನಾಡ ಮಣ್ಣಿನ – ಕನ್ನಡದ ಕೊಡುಗೆ. ಈ ಮಾತಿಗೆ ಪೂರಕವಾಗಿ ಭಾವೀ ಜನಾಂಗಕ್ಕಾಗಿ `ಬೇಟೆಯ ಉರುಳು’ – ಎಂಬ ಈ ಕೃತಿಯನ್ನು ರಚಿಸಿದ್ದಾರೆ. ಬೇಟೆಯ ಕುರಿತಾದ ಇವರ ಅನುಭವ ಬತ್ತದ ತೊರೆಯಾಗಿ ಹರಿಯುತ್ತದೆ.
    ಇಲ್ಲಿ ಚಿಕ್ಕ ಪುಟ್ಟ ಬೇಟೆಗಳಲ್ಲಿರುವ ಜಾಣ್ಮೆ, ವಿಶಿಷ್ಟತೆಗಳ ಸಜೀವ ವಿವರಣೆಗಳಿವೆ. ಬೇಟೆಯ ಹವ್ಯಾಸ ಕಾರಣಾಂತರಗಳಿಂದ ದೂರವಾಗುತ್ತಿರುವ ಈ ಕಾಲದಲ್ಲಿ ಈ ಸಂಬಂಧವಾದ ಸಾಕ್ಷ್ಯಚಿತ್ರದ ದಾಖಲೆಯು ಇದಾಗಿದೆ. ಬಾಯಿಮಾತಿನ ಅನುಭವವು ಬರೆಹರೂಪವಾಗಿ ಚಿತ್ರವತ್ತಾಗಿ ಇಲ್ಲಿ ಉಳಿಯುತ್ತದೆ.
    ಭಾವೀಜನಾಂಗಕ್ಕಾಗಿ ಬೇಟೆಯ ಉರುಳು ಎಂಬ ಈ ಕೃತಿಯು ಶ್ರೀ ಜತ್ತಪ್ಪ ರೈಗಳ ಈ ಹಿಂದಿನ ಎರಡು ಕೃತಿಗಳನ್ನೂ ಇನ್ನೊಂದು ಮುಖವಾಗಿ ದಾಟಿಹೋಗಿದೆ ಎನ್ನಬೇಕು. ಪುರಾಣ ಚರಿತ್ರೆಗಳ ಕಾಲದಲ್ಲಿ ದೊರೆಯುವ ಬೇಟೆಯ ಸಂದರ್ಭಗಳ ಸಂಶೋಧಕ ಮೌಲ್ಯವನ್ನು ಈ ಕೃತಿಯು ಎತ್ತಿ ತೋರಿಸುತ್ತದೆ. ಇದು ಇದರ ಹೆಚ್ಚಳ. ಮಕ್ಕಳಿಗಾಗಿ ಕಥೆ ಹೇಳುವಾಗ ಕೊಂಡಿ ಕಳಚಿಕೊಳ್ಳದಂತೆ ಕುತೂಹಲ ಕೊನರಿಡುವಂತೆ ಮಾಡುವ ತನ್ನದೇ ಆದ ಕಥಾನಕದ ತಂತ್ರವಿಲ್ಲಿ ಎದ್ದು ತೋರುತ್ತಿದೆ. ಕಥೆಗಳನ್ನು ಹೇಳುವಾಗ ವಿವರಣೆಗಾಗಿ ತಡಕಾಡುವುದಿಲ್ಲ. ಅವೆಲ್ಲ ತಾವಾಗಿಯೇ ಒಂದರ ಹಿಂದೊಂದು ಹರಿದುಬಂದಿವೆ.

    Original price was: $1.80.Current price is: $1.08.
    Add to basket