• -10%

    ತಲೆದಂಡ

    0

    ತಲೆದಂಡ :

    ತಲೆದಂಡ ನಾಟಕದ ನಿಜವಾದ ವಸ್ತು ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ ಹಾಗೂ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿ. ನಿಜವಾದ ಕ್ರಾಂತಿ ಕೊನೆಯಿಲ್ಲದ ಒಂದು ಪ್ರತಿಕ್ರಿಯೆಯಾಗಿರುವುದರಿಂದ ಹಾಗೂ ಅದರ ಪರಿಣಾಮಗಳು ದೂರಗಾಮಿಯಾಗಿರುವುದರಿಂದ ಸೋಲು ಅದರ ಒಂದು ಅವಸ್ಥೆಯನ್ನು ಮಾತ್ರ ಸೂಚಿಸುತ್ತದೆ. ತಾನು ಹುಟ್ಟು ಹಾಕಿದ ಕ್ರಾಂತಿ ಒಂದಿಲ್ಲೊಂದು ದಿನ ಯಶಸ್ವಿಯಾಗುತ್ತದೆ ಎಂದು ಬಸವಣ್ಣ ನಂಬಿದ್ದಾನೆ. ಒಂದು ದಿವಸ ವರ್ಣಾಶ್ರಮ ಧರ್ಮ ಜಾತಿ ವ್ಯವಸ್ಥೆ ಇವೆಲ್ಲ ಅಳಿದು ಹೋಗುತ್ತವೆ. ಮಾತು ವೀರಶೈವ ಶರಣರ ಕ್ರಾಂತಿಗೂ ಅನ್ವಯಿಸುವಂತದು. ನಾಟಕ ಕ್ರಾಂತಿಯ ಸ್ವರೂಪ ಹಾಗೂ ಅದರ ಸೋಲು ಗೆಲುವುಗಳಿಗೆ ಕಾರಣವಾದ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳ ಶೋಧನವಾಗಿರುವುದರಿಂದ ಅದು ಸಾವ್ರತ್ರಿಕತೆಯನ್ನು ಪ್ರಸ್ತುತಪಡಿಸುತ್ತದೆ.

    Original price was: $1.56.Current price is: $1.40.
    Add to basket
  • -40%

    ತಲೆದಂಡ

    0

    ‘ತಲೆದಂಡ’ ಪದ ಬಸವಣ್ಣನವರ ವಚನದಿಂದ ಬಂದದ್ದಾದರೂ ನನಗೆ ನಾಟಕದ ಹೆಸರಾಗಿ ದೊರೆತದ್ದು ದ. ರಾ. ಬೇಂದ್ರೆ ಅವರಿಂದ. ಸುಮಾರು ಐವತ್ತು ವರ್ಷಗಳ ಹಿಂದೆ ಅವರು ಬಸವಣ್ಣ-ಬಿಜ್ಜಳರ ಯುಗವನ್ನು ಕುರಿತು ಈ ಹೆಸರಿನ ನಾಟಕವನ್ನು ಬರೆಯುವ ಹೊಳಹು ಹಾಕಿದ್ದರಂತೆ. ಆದರೆ ಬರೆಯಲಿಲ್ಲ.
    ಈಗಾಗಲೇ ಈ ವಿಷಯವನ್ನೇ ವಸ್ತುವಾಗಿಟ್ಟುಕೊಂಡ ಹಲವಾರು ಕಾದಂಬರಿ, ನಾಟಕಗಳು ಕನ್ನಡದಲ್ಲಿ ಬಂದಿವೆ. ಅವುಗಳಲ್ಲಿ ಲಂಕೇಶ್ ಹಾಗೂ ಶಿವಪ್ರಕಾಶ್ ಬರೆದ ನಾಟಕಗಳು, ಬಿ. ಪುಟ್ಟಸ್ವಾಮಯ್ಯ – ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ಕಾದಂಬರಿಗಳು ವಿಶೇಷ ಪ್ರಶಂಸೆ ಗಳಿಸಿವೆ.
    ಆದರೂ ಈ ನಾಟಕ ಬರೆದಿದ್ದೇನೆ.

    ಗಿರೀಶ ಕಾರ್ನಾಡ

    Original price was: $0.96.Current price is: $0.58.
    Add to basket
  • -40%

    ಬೆತ್ತಲಾಟ 

    0

    ಡಾ. ಪ್ರಕಾಶ ಗರುಡರು ಅನೇಕ ವರ್ಷಗಳಿಂದ ಪ್ರದರ್ಶಿಸುತ್ತಿರುವ ಮತ್ತು ಅತ್ಯಂತ ಪ್ರಭಾವಿ ನಾಟಕವನ್ನು ಪುಸ್ತಕರೂಪಕ್ಕೆ ಇಳಿಸಿ ಅದನ್ನು ಪ್ರಕಟಿಸಲು ಒಪ್ಪಿಗೆ ನೀಡಿದ್ದಾರೆ. ದಾರಿಯೊ ಫೋ ನ ‘One was nude;One wore tails’ ಎಂಬ ನಾಟಕವನ್ನು ಕನ್ನಡದ ಸನ್ನಿವೇಶಕ್ಕೆ ಅಳವಡಿಸಿಕೊಂಡು ಭಾವಾನುವಾದ ಮಾಡಿದ್ದಾರೆ.
    ನಾಟಕದಲ್ಲಿ ಬರುವ ಪಾತ್ರಗಳೆಲ್ಲ ನಮ್ಮ ನಿಜಜೀವನದಲ್ಲಿ ಕಾಣ ಸಿಗುವಂಥವೇ. ಆದರೆ ಸನ್ನಿವೇಶ ಮಾತ್ರ ಕುತೂಹಲಕಾರಿಯಾಗಿ ಹಾಸ್ಯವನ್ನು ಚಿಮ್ಮಿಸುತ್ತದೆ. ಭೌತಿಕ ನೆಲೆಯಿಂದ ಆಧ್ಯಾತ್ಮಿಕ ನೆಲೆಯ ಕಡೆಗೆ ತನ್ನ ವಿಚಾರಗಳನ್ನು ಎತ್ತರಿಸುತ್ತ ನಾಟಕ ಪ್ರೇಕ್ಷಕರನ್ನು ವಿಚಾರ ಮಾಡಲು ಹಚ್ಚುತ್ತದೆ.

    Original price was: $0.72.Current price is: $0.43.
    Add to basket