• -39%

    ಬೆಳಕಿನ ಬೇಲಿ

    0

    ಬೆಳಕಿನ ಬೇಲಿ :

    {ನ್ಯಾನೋ ಕತೆಗಳು}

    ‘ನ್ಯಾನೋ ಕತೆ’, ‘ಸೂಜಿ ಮಲ್ಲಿಗೆ’, ‘ಚೌಕಟ್ಟು ಮೀರಿದ ಚಿತ್ರ’, ‘ಹನಿಗತೆ’ ಹೀಗೆ ನಾನಾ ಹೆಸರುಗಳಡಿ ಕನ್ನಡಪ್ರಭ, ವಿಜಯವಾಣಿ, ಪ್ರಜೋದಯ ಮತ್ತು ತುಷಾರ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇಲ್ಲಿನ ಬರಹಗಳನ್ನು ಬರೆದಿದ್ದಾರೆ.

    Original price was: $0.67.Current price is: $0.41.
    Add to basket
  • -40%

    ಕರಗದ ನಗು

    0

    ಕರಗದ ನಗು

    ಪತ್ರಕರ್ತೆ ಕಾವೇರಿ ಎಸ್ ಎಸ್ ಅವರ ಕಥಾಸಂಕಲನವಿದು. ಇದರಲ್ಲಿ ಹನ್ನೆರಡು ಕಥೆಗಳಿದ್ದು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.

    Original price was: $0.78.Current price is: $0.47.
    Add to basket
  • -40%

    ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

    0

    ಲೋಹಿತ್ ನಾಯ್ಕರ್ ಅವರು ವೃತ್ತಿಯಿಂದ ನ್ಯಾಯವಾದಿಗಳು. ಅವರಿಗೆ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ. ಅವರ ಹಿಂದಿನ ಎರಡು ಕಥಾ ಸಂಕಲನಗಳಲ್ಲಿ ಕಾಣಿಸಿಕೊಂಡಿದ್ದ ಈ ಆಸಕ್ತಿ ಈ ಸಂಕಲನದಲ್ಲೂ ಮುಂದುವರೆದಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂದರ್ಭ ಒಂದೆಡೆ ಕಾಯಿದೆ ದೃಷ್ಟಿಯಿಂದ ಸಮಸ್ಯೆಗಳಾಗಿದ್ದರೆ, ಇನ್ನೊಂದೆಡೆ ನೈತಿಕ ದೃಷ್ಟಿಯಿಂದ ಸಮಸ್ಯೆಗಳಾಗಿವೆ. ಈ ಸಂದಿಗ್ಧತೆಯನ್ನು ಲೋಹಿತ್ ಅವರ ಸಣ್ಣಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ.

    Original price was: $0.84.Current price is: $0.50.
    Add to basket
  • -40%

    ಎಷ್ಟು ಕಾಡತಾವ ಕಬ್ಬಕ್ಕೀ…

    0

    ರಾಘವೇಂದ್ರ ಪಾಟೀಲರ ‘ಮತ್ತೊಬ್ಬ ಮಾಯಿ’ ಮತ್ತು ‘ಎಷ್ಟು ಕಾಡತಾವ ಕಬ್ಬಕ್ಕೀ…’ ಓದುವಾಗ ನಾವು ಬದುಕಿನೊಂದಿಗೇ, ಅದರ ನಿಷ್ಠುರ ಅನಿಯತಿಯೊಂದಿಗೇ ಹೊಕ್ಕಾಡುವ ಅನುಭವವಾಗುತ್ತದೆ. ಕಥೆಯನ್ನೂ ಅದೊಂದು ಬದುಕು ಎನ್ನುವಂತೆ ಬೆಳೆದುಕೊಳ್ಳುವುದು ಅಸಾಮಾನ್ಯ ಕತೆಗಾರನಿಗೆ ಮಾತ್ರ ಸಾಧ್ಯ. ಕಥೆಗಾಗಿ ಬದುಕು ಇರುವುದಿಲ್ಲ. ಲೇಖಕ ಎಂಬ ಹುಲುಮಾನವನು, ತಾನು ಕಂಡುಂಡು ಕಳವಳಿಸಿದ ಬದುಕನ್ನು ಅದರ ಎಲ್ಲ ವೈರುಧ್ಯ, ತೀವ್ರತೆ, ಅತಾರ್ಕಿಕತೆಯೊಂದಿಗೆ ಭಾಷೆಯ ಪಾದಯಾತ್ರೆಯಲ್ಲಿ ಹಿಡಿಯಲು ಸಾಧ್ಯವೇ ಎಂದು, ಪಾಟೀಲರ ಕಥೆಗಳು ಪರಮ ವಿನಯದಲ್ಲಿ ಪ್ರಯತ್ನ ಮಾಡುತ್ತವೆ. ಪಾಟೀಲರ ಹೊಸ ಸಂಗ್ರಹದಲ್ಲಿ ನಾವು ನೋಡುತ್ತಿರುವುದು ಅಂಥ ಕಥೆಗಳನ್ನು. ಬದುಕಿನ ನಿಬಿಡತೆಯನ್ನು ಯಾವ ಸಂವಿಧಾನದಲ್ಲಿ ಮಂಡಿಸಿದಾಗ ದರ್ಶನದ ಹೊಳಹೊಂದು ಫಳಕ್ಕನೆ ಮಿಂಚುವುದು ಎಂಬ ಸಂಗತಿಯು ಹಗಲೆಚ್ಚರಕ್ಕೆ ಏನು ಗೊತ್ತು? ಚಾರಣವೇ ತುದಿಗುರಿಯೆಂಬಂತೆ ಪಾಟೀಲ ತಮ್ಮ ಕಥೆಗಳನ್ನು ಬರೆಯುತ್ತಾರೆ. ಅದೇ ಅವರ ಅನನ್ಯತೆ.

    Original price was: $1.56.Current price is: $0.94.
    Add to basket
  • -40%

    ಜನಪದ ರಮ್ಯ ಕಥಾನಕಗಳು

    0

    ಜನಪದ ರಮ್ಯ ಕಥಾನಕಗಳು
    ಜನಪದರು ಕಥೆಯ ವಿಚಾರಗಳೆಲ್ಲ ಸತ್ಯ ಎಂದೇ ನಂಬಿಕೊಳ್ಳುತ್ತಾರೆ. ಕಥೆಗಳನ್ನು ಕೇಳುವವರು ತಮ್ಮ ಹಗಲಿನ ನೋವು ನಲಿವುಗಳನ್ನು ಇರುಳಿನ ಬೆಳದಿಂಗಳಿನಲ್ಲಿ ಕಥೆಗಾರನ ಬಾಯಿಂದ ಬಂದ ಕಥೆಯ ಪಾತ್ರಗಳ ನೋವು ನಲಿವುಗಳಿಗೆ ಹೋಲಿಸಿಕೊಂಡು ಸಾಂತ್ವನ ಹೊಂದುತ್ತಾರೆ. ಕಥೆಗಾರನ ಪ್ರತಿಯೊಂದು ಮಾತನ್ನು ಶ್ರದ್ಧೆಯಿಟ್ಟು ಆಲಿಸುತ್ತಾರೆ. ಈ ಸಂಗ್ರಹದಲ್ಲಿ ಚಿತ್ರದುರ್ಗದ ಪ್ರಾಂತೀಯ ಭಾಷೆಯಲ್ಲಿ ಆರು ಕಥೆಗಳನ್ನು ಸಂಗ್ರಹಿಸಲಾಗಿದೆ. ಹಾಗೆಯೇ ಈ ಕಥೆಗಳು ಎಲ್ಲರೂ ಓದುವಂತಾಗಬೇಕು ಮತ್ತು ಮೂಲಕಥೆಗಾರನ ನುಡಿಗಟ್ಟುಗಳನ್ನು ಉಳಿಸಿಕೊಳ್ಳಲಾಗಿದೆ.

    Original price was: $1.68.Current price is: $1.01.
    Add to basket
  • -40%

    ದಿನಚರಿಯ ಕಡೇ ಪುಟದಿಂದ…

    0

    ದಿನಚರಿಯ ಕಡೇ ಪುಟದಿಂದ…
    ಸುಮಾರು ಎರಡು ದಶಕಗಳ ತಮ್ಮ ಬರವಣಿಗೆಯುದ್ದಕ್ಕೂ ಶ್ರೀಮತಿ ಜಯಶ್ರೀಯವರು ಕಥನ ಶೈಲಿಯಲ್ಲಿ ನಡೆಸಿರುವ ಪ್ರಯತ್ನಗಳು ಮಹಿಳಾ ಕಥಾ ಪರಂಪರೆಯಲ್ಲಿ ಮಾತ್ರವಲ್ಲ, ಒಟ್ಟು ಕನ್ನಡ ಕಥನ ಪರಂಪರೆಯಲ್ಲೂ ಮುಖ್ಯವಾಗಿವೆ. ಇದರ ಮುಖ್ಯ ಗುಣವೆಂದರೆ ಅದು ದಶದಿಕ್ಕುಗಳಿಗೂ ಕುತೂಹಲದಿಂದ ಕೈಚಾಚುವ ಬಗೆಯದ್ದಲ್ಲ. ತನ್ನ ಅನುಭವಕ್ಕೆ ಆಳವಾಗಿ ದಕ್ಕಿರುವ, ತನಗೆ ಪರಿಚಿತವಾದ, ತಾನು ಅಧಿಕಾರದಿಂದ ಮಾತನಾಡಾಬಲ್ಲ ಬದುಕಿನ ಮಾದರಿಗಳನ್ನೇ ಅದು ಹಲವು ಮಗ್ಗುಲುಗಳಿಂದ ನೋಡಲು ಬಯಸುತ್ತದೆ. ಈ ನಿರ್ದಿಷ್ಟ ಮಾದರಿಯನ್ನು ಅದು ಈಗಾಗಲೆ ಮತ್ತೆ ಮತ್ತೆ ನೋಡಲಾಗಿರುವ ದೃಷ್ಟಿಕೋನದಾಚೆಗೆ ವಿಸ್ತರಿಸಲು ತೀವ್ರವಾಗಿ ಹಂಬಲಿಸುತ್ತದೆ. ಹೆಣ್ಣಿನ ಘರ್ಷಣೆಗಳ ಮೂಲ ಒಳಗಿನದೇ ಹೊರಗಿನದೇ ಅಥವಾ ಅವುಗಳ ಒಳಹೊರಗುಗಳನ್ನು ಮೂರ್ತವಾಗಿ ಬೇರ್ಪಡಿಸುವುದಾದರೂ ಸಾಧ್ಯವಿದೆಯೇ ಎಂದು ಆತಂಕ ಮತ್ತು ಆರ್ತತೆಗಳೆರಡೂ ಬೆರೆತೆ ಸ್ಥಿತಿಯಲ್ಲಿ ಇವರ ಬಹುಪಾಲು ಕಥೆಗಳಿವೆ.

    Original price was: $1.32.Current price is: $0.79.
    Add to basket
  • -40%

    ಹೆಗ್ಗುರುತು

    0

    ಹಿರಿಯ ಕತೆಗಾರ ಕೆ ಸತ್ಯನಾರಾಯಣ ಅವರ ಕಥಾಸಂಕಲನ ಇದು. ಚಿಕ್ಕತಾಯಿ, ಡಾಕ್ಟರನ ಹುಚ್ಚುಮಗು ಸೇರಿದಂತೆ ೨೦೧೦ರ ಈಚೆಗೆ ಬರೆದ ಅವರ ಹತ್ತು ಕತೆಗಳನ್ನು ನಾವಿಲ್ಲಿ ಓದಬಹುದು. ಪುಸ್ತಕದ ಕಡೆಯಲ್ಲಿ ಕತೆ ಕತೆಯಾಗುವ ರೀತಿ ಎಂಬ ಅನುಬಂಧವೂ ಇದೆ.ಇದರಲ್ಲಿನ ಕಥೆಗಳು ಸಮಕಾಲೀನ ಸಾಮೂಹಿಕ ವಾಸ್ತವಗಳ ಶೋಧನೆಯನ್ನು ಬದುಕಿನ ವೈರುಧ್ಯಗಳು ಹಾಗೂ ಜಠಿಲತೆಗಳನ್ನು ಗ್ರಹಿಸಿಕೊಂಡ ಸಮೃದ್ಧವಾದ ಕಥೆಗಳಿವೆ. ಅವು ಇವತ್ತಿನ ನಮ್ಮ ಬದುಕಿನ ಅನೇಕ ಮಗ್ಗಲುಗಳ ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತವೆ. ಸಮಷ್ಠಿತ ಸಹಬಾಳ್ವೆಗಾಗಿ ತುಡಿಯುವ ಕಥೆಗಳಿವು.

    Original price was: $1.92.Current price is: $1.15.
    Add to basket
  • -40%

    ಹೊಡಿ ಚಕ್ಕಡಿ

    0

    ಡಾ. ಬಸು ಬೇವಿನಗಿಡದ ಅವರ ಕತೆಗಳ ಸಂಕಲನ – ‘ಹೊಡಿ ಚಕ್ಕಡಿ’

    Original price was: $1.20.Current price is: $0.72.
    Add to basket
  • -20%

    ಐದು ದಶಕದ ಕಥೆಗಳು

    0
    Original price was: $2.88.Current price is: $2.31.
    Add to basket