ಅಕ್ಷರ ಜೋಡಣೆ, ಪುಸ್ತಕ ವಿನ್ಯಾಸಗಳಲ್ಲೇ ತೊಡಗಿ ಹಲವಾರು ವರ್ಷಗಳೇ ಕಳೆದು ಹೋಗಿವೆ. ನಾವು ವಿನ್ಯಾಸಗೊಳಿಸಿದ ಪುಸ್ತಕಗಳನ್ನು ಕಂಡಾಗಲೆಲ್ಲ ಒಂದು ತೆರನ ಖುಷಿ. ಪುಸ್ತಕಗಳನ್ನು ಕಂಡಾಗ ಅವುಗಳ ವಿನ್ಯಾಸಗಳನ್ನು ಪರಿಶೀಲಿಸುವುದು ಅಭ್ಯಾಸ. ಹೊಸ ಹೊಸ ವಿನ್ಯಾಸಗಳ ಪುಸ್ತಕಗಳನ್ನು ನೋಡಿದಾಗ ಸಂತೋಷವಾಗುತ್ತದೆ. ನೋಡಿದ ಪುಸ್ತಕಗಳನ್ನು ನೆನಪಿನಲ್ಲಿಟ್ಟುಕೊಂಡು ವಿಶಿಷ್ಟವಾದ ಪುಸ್ತಕಗಳನ್ನು ರೂಪಿಸುವುದು ಹಾಗೂ ಅವುಗಳು ಇನ್ನಷ್ಟು ಸುಂದರವಾಗುವಂತೆ ಮಾಡಬೇಕೆಂಬ ಕಾಳಜಿಯನ್ನು ಪ್ರೀತಿಯಿಂದ ಮಾಡುತ್ತ ಬಂದಿದ್ದೇವೆ. ಹಲವಾರು ಪುಟಗಳ ಪುಸ್ತಕಗಳನ್ನು ಕಡಿಮೆ ಅವಧಿಯಲ್ಲಿ ರೂಪಿಸಬೇಕಾದ ಅನಿವಾರ್ಯತೆಯ ನಡುವೆಯೂ ಹಗಲಿರುಳು ಶ್ರಮಿಸಿದ್ದೇವೆ. ಈ ನಮ್ಮ ಶ್ರಮವನ್ನು ಕುರಿತಂತೆ ಮೆಚ್ಚುಗೆ ಸೂಚಿಸಿದವರು ಹಲವರು. ನೀವೇ ಯಾಕೆ ಪುಸ್ತಕ ಪ್ರಕಟಿಸಬಾರದು? ಎಂದು ಪ್ರಶ್ನಿಸಿದವರು ಮತ್ತೆ ಕೆಲವರು. ಹಾಗೆ ಹಲವರ, ಕೆಲವರ ಅಭಿಪ್ರಾಯಗಳು ನಮ್ಮಲ್ಲಿ ಘನೀಭವಿಸಿ ಪುಸ್ತಕ ಪ್ರಕಾಶನದ ಕೆಲಸಕ್ಕೆ ಮುಂದಾಗಿದ್ದೇವೆ.

  • -40%

    ಕಾತರ

    0

    ಕಾತರ
    ಕವನ ಸಂಕಲನ
    ಶ್ರೀಯುತ ನಜೀರ ಚಂದಾವರ ಅವರ ‘ಕಾತರ’ ಕವನ ಸಂಕಲನ ತುಂಬಾ ವರ್ಷದ ಹಿಂದೆಯೇ ಪ್ರಕಟಗೊಂಡಿದ್ದು, ಇದು ಅವರ ಕಾಲೇಜು ಜೀವನದಲ್ಲಿ ಬರೆದಿದ್ದು.  ತಾವು ಕಂಡ ಸಮಾಜದ ಅಂಕುಡೊಂಕನ್ನೆ ತಮ್ಮ ಕವನದಲ್ಲಿ ದಾಖಲಿಸಿದ್ದಾರೆ. 

    Original price was: $1.08.Current price is: $0.65.
    Add to basket
  • -40%

    ಝೆನ್ ವೀರ ಹೈಕು

    0

    ಝೆನ್ ವೀರ ಹೈಕು
    ಹೈಕುಗಳಲ್ಲಿ ಶ್ರೀ ಚನ್ನವೀರ ಶರಣರ ಶ್ರೀನುಡಿಗಳು
    ‘ಶ್ರೀನುಡಿ’ಗಳಲ್ಲಿಯ ೨೦೦ ವಿಚಾರಗಳನ್ನು ಇಲ್ಲಿ ಎತ್ತಿಕೊಂಡು ಅವುಗಳನ್ನು ಹೈಕುಗಳಲ್ಲಿ ಬರೆಯಲಾಗಿದೆ.  ಉದ್ಬೋಧ ಕೃತಿಯಾದ ‘ಝೆನ್ ವೀರ ಹೈಕು’ ಡಾ.ಸರಜೂ ಕಾಟ್ಕರ್ ಅವರಿಂದ ರಚಿತವಾಗಿದೆ. ಝೆನ್ ಕಥಾ ಸಾಹಿತ್ಯವು ವಿಷಿಕ್ಷ್ಟವಾದದ್ದು. ಇಲ್ಲಿ ಗುರುಶಿಷ್ಯರ ಸಂಭಾಷಣೆ ನಡೆಯುತ್ತದೆ. ಗುರುವಾದವನು ಶಿಷ್ಯನ ತಲೆಯಲ್ಲಿ ವಿಚಾರಗಳೆಂಬ ಹುಳುಗಳನ್ನು ಬಿಡುತ್ತಾನೆ . ಶಿಷ್ಯ  ಅದನ್ನು ಹೇಗಾದ್ರೂ ಅರ್ಥೈಸಿಕೊಳ್ಳಬಹುದು. ವಿಚಾರಗಳೆಂಬ ಹುಳುಗಳು ಸದಾಕಾಲ ಶಿಷ್ಯನ ತಲೆಯನ್ನು ತಿನ್ನುತ್ತಲೇ ಇರುತ್ತವೆ. ಅವನು ಅರ್ಥೈಸಿಕೊಂಡಷ್ಟು ಗುರುವಿನ ಸೂತ್ರರೂಪಿ ನಿರ್ವಚನಗಳು ವಿಸ್ತಾರವನ್ನು ಪಡ್ದೆದುಕೊಳ್ಳುತ್ತಾ ಹೋಗುತ್ತವೆ. ಹೀಗೆಂದು ಬಗೆದು ಹಿರಿಯರಾದ ಡಾ.ಸರಜೂ ಕಾಟ್ಕರ್ ‘ಹೈಕು’ ಪ್ರಕಾರದಲ್ಲಿ ಚನ್ನವೀರ ಶರಣರ ಶ್ರೀನುಡಿಗಳಿಗೆ ಹೊಸ ಉಡುಗೆಯನ್ನು  ತೊಡಿಸಿದ್ದಾರೆ. ಚನ್ನವೀರ ಶರಣರನ್ನು ಝೇನ್ ವೀರ ಶರಣರೆಂದು ಪರಿಭಾವಿಸಿದ್ದಾರೆ. 

    Original price was: $0.72.Current price is: $0.43.
    Add to basket
  • -40%

    ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ

    0

    ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ
    ಇಲ್ಲಿನ ಲೇಖನಗಳಲ್ಲಿ ದಲಿತರ ಸಮಕಾಲೀನ ಸಮಸ್ಯೆಗಳನ್ನು ಆತ್ಮೀಯವಾಗಿ ವಿಶ್ಲೇಷಿಸಿಲಾಗಿದೆ. ದಲಿತರ ಸಮಸ್ಯೆಗಳು ಮೇಲ್ನೋಟಕ್ಕೆ ತೋರುವುದಕ್ಕಿಂತಲೂ ಭಿನ್ನವಾಗಿ ಅವುಗಳ ಅಂತರ್ಯವನ್ನು ಶೋಧಿಸಿರುವಲ್ಲಿ ಲೇಖಕರ ಸಾಮಾಜಕ ಕಾಳಜಿ ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ಚಿಂತನೆಯನ್ನು ಮತ್ತು ದಲಿತ ಲೋಕವನ್ನು ಚಾರಿತ್ರಿಕ ಹಿನ್ನಲೆಯಲ್ಲಿ ವಿಶ್ಲೇಷಿಸುತ್ತ ಮತಾಂತರದ ಒಳ ಹೊರಗುಗಳನ್ನು ಸೂಕ್ಷ್ಮವಾಗಿ ಇಲ್ಲಿನ ಬರವಣಿಗೆಗಳಲ್ಲಿ ಓದುಗರ ಮುಂದಿಡಲಾಗಿದೆ. ದಲಿತ ಸಂಸ್ಕತಿಯನ್ನು ಕೇಂದ್ರೀಕರಿಸಿ ಬರೆದ ಇಲ್ಲಿನ ಲೇಖನಗಳು ಕನ್ನಡ ವಿಚಾರ ಪ್ರಪಂಚದಲ್ಲಿ ಹೊಸ ತಿಳುವಳಿಕೆಯನ್ನು ಮೂಡಿಸುವಲ್ಲಿ ಸಶಕ್ತವಾಗಿದೆ.

    Original price was: $2.40.Current price is: $1.44.
    Add to basket