
ಸಣ್ಣ ಸಂಗತಿ
Rahamat Tarikere$1.81 $1.63
Product details
Author | Rahamat Tarikere |
---|---|
Publisher | Nava Karnataka |
Book Format | Ebook |
Language | Kannada |
Pages | 260 |
Year Published | 2021 |
Category | Articles |
ಲೋಕ ಬದುಕಿನಲ್ಲಿ ಗೋಚರಿಸಿದ ಚಿಕ್ಕ ಎಳೆಯೊಂದನ್ನು ಆಯ್ದುಕೊಂಡು, ಅದರ ಸುತ್ತ ಬಲೆ ಹೆಣೆಯುವ ಜೇಡನಂತೆ ಅಥವಾ ಗೂಡುಕಟ್ಟುವ ರೇಷ್ಮೆಹುಳುವಿನಂತೆ ಚಿಂತನೆಯನ್ನು ಕಟ್ಟಲು ಇಲ್ಲಿ ಯತ್ನಿಸಿದೆ. ಹೀಗೆ ರೂಪುಗೊಂಡಿರುವ ಚಿಂತನೆಗಳಲ್ಲಿ ನೆನಪುಗಳಿವೆ, ವ್ಯಕ್ತಿಚಿತ್ರಗಳಿವೆ, ಶ್ರದ್ಧಾಂಜಲಿಗಳಿವೆ, ಪುಸ್ತಕ ವಿಮರ್ಶೆಗಳಿವೆ, ತಿರುಗಾಟದ ಅನುಭವಗಳಿವೆ, ವರದಿಗಳೂ ಇವೆ. ಎಲ್ಲವೂ ಲಹರಿ ರೂಪದಲ್ಲಿವೆ. ಲಹರಿಯ ಮುಖ್ಯ ಗುಣ ಅಲೆದಾಟ. ನಿರ್ದಿಷ್ಟ ಗುರಿಯಿಟ್ಟುಕೊಂಡು ಅಳಕ್ಕೆ ಇಳಿಯುವುದಲ್ಲ. ನೆಲವೇ ಕಾಣದಷ್ಟು ಎತ್ತರಕ್ಕೇರುವುದೂ ಅಲ್ಲ. ಬದಲಿಗೆ, ಆಪ್ತರಾದ ಸಖಸಖಿಯರು ಅಕ್ಕಪಕ್ಕ ಕುಳಿತು ವಿಚಾರ ಮೊಳೆಯುವಂತೆ ಸಣ್ಣಗೆ ಮಾತಾಡಿಕೊಳ್ಳುವುದು; ಉಗ್ರವಾಗಿ ತರ್ಕಬದ್ಧವಾಗಿ ಪ್ರತಿಪಾದಿಸಿ ವಿಚಾರವೊಂದನ್ನು ಮಂಡಿಸುವುದಲ್ಲ; ಬದಲಿಗೆ ಸಂವಾದಕ್ಕೆ ಪ್ರೇರಿಸಬಲ್ಲ ಅಂಶವೊಂದನ್ನು ಮುಂದಿಟ್ಟು ಸಮ್ಮತಿ ಮತ್ತು ಭಿನ್ನಮತಕ್ಕೆ
ಕಾಯುವುದು. ಹಿತವಾಗಿ ಕೆಣಕುವುದು. ತಕ್ಷಣ ಹೊಳೆದಿದ್ದನ್ನು ಹಂಚಿಕೊಳ್ಳುತ್ತಲೇ, ಸದ್ಯವಲ್ಲದ ದಿಟದತ್ತ ಕೊರಳು ಹೊರಳಿಸುವುದು.
Customers also liked...
-
H.S. Patil
$1.21$0.73 -
Girimane Shyamarao
$1.09$0.65 -
Girimane Shyamarao
$1.09$0.65 -
Girimane Shyamarao
$1.45$0.87 -
Prakash Garud
$3.14$1.89 -
Sarjoo Katkar
$1.45$0.87