Your Cart

Need help? Call +91 9535015489

📖 Print books shipping available only in India. ✈ Flat rate shipping

ಕಂಗಳ ಮುಂದಣ ಕತ್ತಲು

Mudnakudu Chinnaswamy
$1.09

Product details

Author

Mudnakudu Chinnaswamy

Publisher

Nava Karnataka

Book Format

Printbook

Language

Kannada

Pages

164

Year Published

2021

Category

Critical Book

ಭಾರತದಲ್ಲಿನ್ನೂ ಜೀವಂತವಾಗಿರುವ ಜಾತಿಪದ್ಧತಿ-ಅಸ್ಪೃಶ್ಯತೆಯ ವಿರಾಟ್ ದರ್ಶನ. ಬಲವಾಗಿ ಬೇರು ಬಿಟ್ಟಿರುವ ಈ ವ್ಯವಸ್ಥೆಯನ್ನು ಮೂಲೋತ್ಪಾಟನೆ ಮಾಡುವುದು ಅಂತಿರಲಿ, ಮೇಲ್ನೋಟಕ್ಕೆ ಖಂಡಿಸುತ್ತ ಒಡಲೊಳಗೆ ಭದ್ರವಾಗಿಟ್ಟು ಪೋಷಿಸುವ ವರ್ಣೀಯರು-ರಾಜಕಾರಣಿಗಳು ನಮ್ಮಲ್ಲಿರುವುದು ಆತಂಕದ ವಿಚಾರ. ವರ್ಣಾಶ್ರಮ-ಜಾತಿಪದ್ಧತಿ-ಅಸ್ಪೃಶ್ಯತೆಯನ್ನು ತೀರ ಇತ್ತೀಚಿನ ವಿಶ್ವಗ್ರಾಮ ಕಲ್ಪನೆಯ ಜಾಗತೀಕರಣ, ಖಾಸಗೀಕರಣದಂತಹ ಆಧುನಿಕ ವ್ಯವಸ್ಥೆಯೊಂದಿಗೆ ಮುಖಾಮುಖಿಯಾಗಿಸಿದ್ದು ಇಲ್ಲಿನ ವಿಶೇಷ. ನಮ್ಮಲ್ಲಿ ಲಿಖಿತ ಪ್ರಭುತ್ವ ಸಂವಿಧಾನ ವ್ಯವಸ್ಥೆಯಿದ್ದರೂ ಅಲಿಖಿತ ನಿಯಮಾವಳಿಗಳ ಸಂವಿಧಾನವೊಂದು ಮೇಲುಗೈ ಪಡೆಸು ವರ್ಣೀಯ ಸಮಾಜದಲ್ಲಿ ವಿಜೃಂಭಿಸುತ್ತಿದೆ. ಪ್ರಭುತ್ವದ ಸಂವಿಧಾನ ಇದ್ದೂ ಇಲ್ಲದಂತಾಗಿದ್ದು ಜಾತಿ ಭೂತದ ಬಿಗಿ ಸರಪಳಿ ಸಾಮಾಜಿಕವಾಗಿ ಎಲ್ಲರನ್ನೂ ಕಟ್ಟಿಹಾಕಿದೆ. ಯಾವುದೇ ಉತ್ತಮ ವ್ಯವಸ್ಥೆ ತರಲೆತ್ನಿಸಿದರೂ ಅದು ಜಾಗತಿಕ ಬಂಡವಾಳಶಾಹಿಯ ಕಣ್ಣಳತೆಯಲ್ಲೇ ಇದ್ದು ಅವರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಯೇ ಅದಕ್ಕೆ ಅಂಕಿತ ಬೀಳುತ್ತದೆ. ನಮ್ಮಲ್ಲಿ ರಾಜಕೀಯ ಧುರೀಣರಿರುವಂತೆ ಧಾರ್ಮಿಕ-ಸಾಂಸ್ಕೃತಿಕ ಧುರೀಣರಿದ್ದು ರಾಜಕೀಯ ವ್ಯವಸ್ಥೆಯನ್ನು ನಾಜೂಕಾಗಿ ನಿಯಂತ್ರಿಸುತ್ತಾರೆ. ಇನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದವರ ಉದ್ಧಾರ ಹೇಗೆ ಸಾಧ್ಯ?-ಹೀಗೆ ಇಂದಿನ ನಮ್ಮ ದೇಶದ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಸಂಶೋಧಿಸಿದ ಕೃತಿ ಇದು.