Your Cart

Need help? Call +91 9535015489

📖 Print books shipping available only in India. ✈ Flat rate shipping

ಭೂಮಿಗಂಧ

G.P.Basavaraju
$0.65

Product details

Category

Poetry

Author

G.P.Basavaraju

Publisher

Raghavendra Prakashana

Pages

174

Year Published

2005

Language

Kannada

Book Format

Ebook

“ ಭೂಮಿಗಂಧ ‘ ಸಂಕಲನ ಹಲವು ಬಗೆಯ ವಸ್ತುವಿಷಯಗಳಿಂದ ಕೂಡಿರುವ ಸಂಕಲನ ಸಮಕಾಲೀನ ಮುಖ್ಯ ಪ್ರಶ್ನೆಗಳಿಂದ ಹಿಡಿದು ಸೂಕ್ಷ್ಮ ವಾದ ಆಸಕ್ತಿಗಳಿಗೆ ಕವಿ ಎದುರಾಗಿದ್ದಾರೆ . ಈ ಸಂಕಲನದ ಎಲ್ಲ ಕವಿತೆಗಳಿಂದ ಪ್ರತೀತವಾಗುವ ತಾತ್ವಿಕಕೇಂದ್ರ ಗಂಭೀರ ಸ್ವರೂಪದ್ದಾಗಿದೆ . ಈ ನೆಲದ ಕೇಂದ್ರದಿಂದ ಹುಟ್ಟುವ ಅಸಂಖ್ಯ ಪ್ರಶ್ನೆಗಳಿಗೆ ಎದುರಾಗುತ್ತ ಒಂದು ಗಂಭೀರ ಸಂವಾದವನ್ನು ಇಲ್ಲಿನ ಕವಿತೆಗಳು ಕಟ್ಟಿಕೊಟ್ಟಿವೆ . ಕವಿಗೆ ಮನುಷ್ಯ ಲೋಕವಷ್ಟೇ ಮುಖ್ಯವೆನಿಸದೆ ಅಗಾಧ ಚೈತನ್ಯದ ಎಲ್ಲ ಮೂರ್ತ – ಅಮೂರ್ತ ವಿವರಗಳು ತನ್ನ ಧ್ಯಾನಕೇಂದ್ರಕ್ಕೆ ಧಾತುಗಳಾಗಿ ಒದಗಿ ಬಂದಿವೆ . ಕವಿಯ ನೋಡುವಿಕೆಯು  ಗೃಹೀತ ಚೌಕಟ್ಟುಗಳಿಗೆ ಮಾತ್ರ ಒಳಪಡದೆ ಅಗಾಧವಾದ ವಿವರಗಳ ವ್ಯಾಪ್ತಿಯಲ್ಲಿ ಗ್ರಹಿಸುವ ಧೋರಣೆ ಇಲ್ಲಿ ಪ್ರಧಾನವಾಗಿದೆ . ‘ ಸ್ವರ – ವಿಸ್ತಾರ ‘ ಎಂಬ ಕವಿತೆಯಲ್ಲಿ ಈ ನಿಲುವು ವ್ಯಕ್ತಗೊಳ್ಳುವುದನ್ನು ನೋಡಿ : ಅಬ್ಬರದೊಳಗಿನ ಮೌನವನ್ನು ಮೌನದೊಳಗಿನ ವಿಷಾದವನ್ನು ಒಂದರೊಳಗಿನ ಬಂಧವನ್ನು | ಸಂಬಂಧವನ್ನು | ಸಂಬಂಧಗಳ ಒಳಸೂಕ್ಷ ಗಳನ್ನು ಇಲ್ಲಿನ ರೂಪಕಗಳು ಅಪರಿಚಿತ ಅಂತರ್‌ ವಿವರಗಳನ್ನು ಓದುಗನಲ್ಲಿ ಕಟ್ಟಿಕೊಡುತ್ತವೆ .