Your Cart

Need help? Call +91 9535015489

📖 Print books shipping available only in India. ✈ Flat rate shipping

ಎಚ್. ಎಸ್. ವೆಂಕಟೇಶಮೂರ್ತಿ ಅವರ ಆಯ್ದ ಕವಿತೆಗಳು

$8.00

Product details

ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಆಯ್ದ ಕವಿತೆಗಳು
ಎಚ್.ಎಸ್. ವೆಂಕಟೇಶಮೂರ್ತಿ
1944ರಲ್ಲಿ ಚನ್ನಗಿರಿ ತಾಲ್ಲೂಕು ಹೋದಿಗೆರೆಯಲ್ಲಿ ಜನಿಸಿದ ವೆಂಕಟೇಶಮೂರ್ತಿಯವರು ಮೂವತ್ತು ವರ್ಷ ಗ್ರಾಮ್ಯಜೀವನ ನಡೆಸಿ ಬಳಿಕ ಬೆಂಗಳೂರಿನಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸಮಾಡಿ, ನಿವೃತ್ತಿಯ ಅನಂತರ ಈಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಸಮಕಾಲೀನ ಸಂದರ್ಭದ ಮುಖ್ಯ ಕವಿ ಮತ್ತು ಪ್ರಯೋಗಶೀಲ ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ಇವರು ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ. ‘ಕ್ರಿಯಾಪರ್ವ‘, ‘ಎಷ್ಟೊಂದು ಮುಗಿಲು‘, ‘ನದೀತೀರದಲ್ಲಿ‘, ‘ಉತ್ತರಾಯಣ‘ ಮೊದಲಾದವು ಇವರ ಮುಖ್ಯ ಕಾವ್ಯಕೃತಿಗಳು; ‘ಅಗ್ನಿವರ್ಣ’, ‘ಚಿತ್ರಪಟ’, ‘ಉರಿಯ ಉಯ್ಯಾಲೆ‘, ‘ಮಂಥರೆ‘ ಮೊದಲಾದುವು ಇವರ ಮುಖ್ಯ ನಾಟಕಗಳು; ‘ಈ ಮುಖೇನ‘ ಇವರ ವೈಚಾರಿಕ ಪ್ರಬಂಧಗಳ ಸಂಪುಟ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ – ಇವು ಇವರು ಪಡೆದ ಕೆಲವು ಮುಖ್ಯ ಗೌರವಪುರಸ್ಕಾರಗಳು.
ಎಚ್. ಎಸ್. ವೆಂಕಟೇಶ ಮೂರ್ತಿ – ಮುಖ್ಯ ಕೃತಿಗಳು

ಕವನ ಸಂಕಲನಗಳು:
ಸಿಂದಬಾದನ ಆತ್ಮಕಥೆ
ಕ್ರಿಯಾಪರ್ವ
ಒಣಮರದ ಗಿಳಿಗಳು
ಎಷ್ಟೊಂದು ಮುಗಿಲು
ನದೀತೀರದಲ್ಲಿ
ಉತ್ತರಾಯಣ ಮತ್ತು…

ನಾಟಕಗಳು:
ಅಗ್ನಿವರ್ಣ
ಚಿತ್ರಪಟ
ಉರಿಯ ಉಯ್ಯಾಲೆ
ಮಂಥರೆ
ಕಂಸಾಯಣ

ಮಕ್ಕಳ ಕೃತಿಗಳು:
ಹಕ್ಕಿಸಾಲು
ಅಳಿಲು ರಾಮಾಯಣ
ಅಜ್ಜೀ ಕಥೆ ಹೇಳು
ಚಿನ್ನಾರು ಮುತ್ತ

ಲೇಖನಗಳು:
ಈ ಮುಖೇನ