‘ಚಲುವಿ ಚಂದ್ರಿ’ ಕಥೆ ಮೊದಲ ಓದಿಗೇ ಒಂದು ಜನಪದ ಕಥೆಯಂತೆ ಭಾಸವಾಗುತ್ತದೆ. ಅದಕ್ಕೇ ತಕ್ಕಂತೆ ಇಲ್ಲಿ ಕಥೆಗಾರರು ಕೊಡುವ ಹೆಸರುಗಳೂ ನೀಡುವ ವಿವರಗಳೂ ಅದನ್ನೇ ಪೋಷಿಸುತ್ತವೆ. ಕಥೆ ನಡೆಯುವುದು ಚಂದ್ರನೂರಿನಲ್ಲಿ. ಕಥೆಯ ನಾಯಕ ಸೂರ್ಯಪುತ್ರ. ಅವನು ಬೆಳೆಸಿದ್ದು ಹೂವಿನ ತೋಟವನ್ನು. ಅವನು ಬೆಳೆಸಿದ ಹೂವುಗಳನ್ನು ಮೆಚ್ಚುವವರು ಯಾರೂ ಇಲ್ಲದ್ದಕ್ಕೆ ಆತ ಕೊರಗುತ್ತಿದ್ದಾನೆ. ಇಂತಹ ರಮ್ಯ ಕಥನ ವ್ಯಾಪ್ತಿ ಈ ಕಥೆಯದ್ದು. ಎರಡನೆಯ ಕಥೆ ‘ಇದೊಳ್ಳೆ ಪಂಚಾಯ್ತಿ ಆಯ್ತಲ್ಲಾ’ ತನ್ನ ಭಾಷಾ ಶೈಲಿಯಿಂದ ತಟ್ಟನೆ ಗಮನ ಸೆಳೆಯುತ್ತದೆ. ನಿಜಕ್ಕೂ ಹಳ್ಳಿಯ ಪಂಚಾಯತಿಯೊಂದರ ಕಟ್ಟಡದ ಕಾಮಗಾರಿಯನ್ನು ಆರಂಭಿಸಿದ ಊರವರು ಅನೇಕ ರೀತಿಯ ಫಜೀತಿ ಪಡುವ ಕೊನೆಗೂ ಊರ ಜನರೆಲ್ಲಾ ‘ಇದೊಳ್ಳೆ ಪಂಚಾಯ್ತಿ ಆಯ್ತಲ್ಲಾ’ ಎಂದು ಮಾತನಾಡಿಕೊಳ್ಳುವ ರೀತಿಯಲ್ಲಿ ಅಂತ್ಯವಾಗುತ್ತದೆ. ‘ಅಕ್ಷರ ಬೀಜ’ ಕಥೆ ತುಂಬ ಸರಳವಾದ ಕಥಾವಸ್ತುವನ್ನು ಒಳಗೊಂಡ ಕಥೆ. ‘ಮುತ್ಯಾನ ಜಾತ್ರಿ’ ಕಥೆಯ ವಸ್ತುವೂ ಹಳ್ಳಿಯ ಚಿತ್ರಣವೇ. ದೇವರಿಗೆ ಸೆರೆ(ಎಣ್ಣಿ) ಬೋನ ಹಿಡಿಯುವ ಮುಗ್ಧ ಚಿತ್ರಗಳನ್ನು ಕಥೆ ನೀಡುತ್ತದೆ, ‘ಭೂಮಿ ತಲ್ಲಣಿಸ್ಯಾವ’ ಕಥೆ ತುಂಬ ಚಿಕ್ಕದಾದರೂ ಬಹುಸೂಕ್ಷ್ಮವಾಗಿಯೆ ಫ್ಯಾಕ್ಟರಿಯೊಂದು ಬಂದು ಒಂದು ಊರೇ ನಾಶವಾಗುತ್ತದೆ ಎನ್ನುವ ಆಳದ ದುಃಖವನ್ನು ಒಡಲಲ್ಲಿಟ್ಟು ನೋಯುವ ಕಥೆ. ‘ಕತ್ತಲಾ ಕಾಡಿತು’ ಕಥೆಯಲ್ಲಿಯೂ ಊರನ್ನು ಅಗಲಿ ಪಟ್ಟಣ ಸೇರಿದ ಕುಟುಂಬದ ಹಳಹಳಿಕೆಯೆ ಪ್ರಧಾನ. ‘ಅಕ್ಕಿಕಾಳ’ ಕಥೆಯಲ್ಲಿ ಕಾಕತಾಳಿಯವೇನೋ ಎನ್ನುವಂತೆ, ಧಾಂ ಧೂಂ ನಡೆದ ಅಜ್ಜ ಯುವಕನಿದ್ದಾಗ ಲಗ್ನಕ್ಕೆ ಬಂದ ಮಂದಿ, ಅಜ್ಜನ ಲಗ್ನ ಮಾಡಲಾರದೆ ಚುನಾವಣೆ ಪ್ರಚಾರಕ್ಕೆ ಬಂದ ಅನಂತನಾಗ ಲಕ್ಷ್ಮಿಯರನ್ನು ನೋಡಲು ಹೋಗಿ, ಲಗ್ನ ಕೇವಲ ಹದಿನೈದು ಇಪ್ಪತ್ತು ಮಂದಿ ಮುಂದೆ ಆಗುವಂತಾದದ್ದು, ಈಗ ಮೊಮ್ಮಗನ ಲಗ್ನವಾದರೂ ಲಕ್ಷಾಂತರ ಜನರೆದುರು ಆಗಲಿ ಎಂದು ಬಯಸಿದರೆ, ಕರೊನಾದ ಕಾರಣಕ್ಕೆ ಅದೂ ಹದಿನೈದು ಇಪ್ಪತ್ತು ಜನರ ಮುಂದೆಯೇ ನಡೆದು, ಅವರ ಮೊಮ್ಮಕ್ಕಳ ಮದುವೆಯಾದರೂ ಸಾವಿರಾರು ಜನರ ಮುಂದೇ ಆಗಲಿ ಎಂದು ಹರಸುವದರಲ್ಲಿಯೆ ತೃಪ್ತವಾಗಬೇಕಾಗುತ್ತದೆ. ‘ನಮ್ಮೂರ ನಮಗ ಪಾಡ’ ಕಂಬಾರಿಕೆ ಕೆಲಸ ಮಾಡುವಾಗ ಕಬ್ಬಿಣದ ಚೂರೊಂದು ಸಿಡಿದು, ಕಣ್ಣಿಗೆ ಸೇರಿ ಹೈರಾಣಾಗುವ ಧರಮು, ಇಪ್ಪತ್ತು ಸಾವಿರ ಸೇರಿಸಿ ಆಪರೇಶನ್ ಮಾಡಿಕೊಳ್ಳಬೇಕಾಗಿದ್ದದ್ದು, ಕೊನೆಗೆ ಹಳ್ಳಿಯ ವೈದ್ಯ ಕುಬೇರಪ್ಪನ ಮಾಂತ್ರಿಕ ಕೈಚಳಕದಿಂದಾಗಿ ಊರಲ್ಲಿಯೇ ಅವನ ಕಣ್ಣಿನಿಂದ ಕಬ್ಬಿಣದ ಚೂರು ಹೊರಬಂದು, ಗ್ರಾಮೀಣ ವೈದ್ಯಕೀಯದ ಮಹತ್ವ ಅರಿವಿಗೆ ಬರುತ್ತದೆ.
Ebook
ಚೆಲುವಿ ಚಂದ್ರಿ
Author: Prakash Khade
$1.45 $0.87
Genre: short Stories
Tags: Cheluvi Chandri, Dr. Prakash Khade, ebook, Prakash Khade, Short stories, Yaji Prakashana
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Pages | 100 |
Year Published | 2021 |
ISBN | 978-93-83717-56-9 |
Category |
Reviews
Only logged in customers who have purchased this product may leave a review.
Reviews
There are no reviews yet.