
ಮೂರನೇ ಕಿವಿ
Ravindra Bhatt$1.93 $1.55
Product details
Category | Stories |
---|---|
Author | Ravindra Bhatt |
Publisher | Nava Karnataka |
Book Format | Printbook |
Pages | 152 |
Language | Kannada |
ಇದು ಕಟ್ಟು ಕಥೆಯಲ್ಲ, ದೀಪಾರವರು ಕಷ್ಟಪಟ್ಟು ಸಾಧಿಸಿದ ಯಶೋಗಾಥೆ. ಒಬ್ಬ ಕಿವುಡು ಮಗುವಿಗೆ ತಾಯಿ ಮತ್ತು ಮನೆಯವರು ಮಾತು, ಭಾಷೆ ಕಲಿಸಿ ವಿದ್ಯಾಭ್ಯಾಸದ ತಳಹದಿ ಹಾಕಿದ ಸ್ಫೂರ್ತಿದಾಯಕ ಸುವಾರ್ತೆ.
ನಿರಂಜನ, ದೀಪಾ ಮತ್ತು ರವೀಂದ್ರರ ಎರಡನೆಯ ಮಗ. ಈಗ ಅವನಿಗೆ ಎಂಟು ವರ್ಷ ತುಂಬಿದೆ. ಎಲ್ಲ ಮಕ್ಕಳಂತೆ ಶಾಲೆಗೆ ಹೋಗುತ್ತಿದ್ದಾನೆ. ಮೂರನೇ ತರಗತಿಯಲ್ಲಿ ಮುಂಚೂಣಿಯಲ್ಲಿದ್ದಾನೆ. ಅವನ ಸಾಧನೆಗೆ ಮೆರುಗು ಕೊಡುವ ಅಂಶವೆಂದರೆ ಅವನಿಗೆ ತೀವ್ರ ಶ್ರವಣದೋಷವಿದೆ, ಅವನು ಹುಟ್ಟಿನಿಂದ ಕಿವುಡ.
ಹುಟ್ಟಿನಿಂದ ತೀವ್ರ ಕಿವುಡಿರುವ ಬಹಳಷ್ಟು ಮಕ್ಕಳು ಭಾಷೆ ಮತ್ತು ಮಾತು ಕಲಿಯಲು ಬಹಳ ಕಷ್ಟಪಡುತ್ತಾರೆ. ಚೆನ್ನೈನಲ್ಲಿರುವ ಬಾಲ ವಿದ್ಯಾಲಯí ಕಿವುಡು ಮಕ್ಕಳ ಶಾಲೆಯ ಮುಖ್ಯಸ್ಥರಾದ ಸರಸ್ವತಿ ನಾರಾಯಣಸ್ವಾಮಿಯವರು ನಮ್ಮ ವಿಸ್ಮಯವನ್ನು ಹೀಗೆ ತಿಳಿಸುತ್ತಾರೆ : ವೈಮಾನಿಕ ಶಾಸ್ತ್ರದ ತಂತ್ರಜ್ಞರ ಲೆಕ್ಕದಂತೆ ದುಂಬಿಯು ತನ್ನ ಮೈ ಮತ್ತು ಭಾರಗಳನ್ನು ಹೊತ್ತು ಹಾರಲು ಸಾಧ್ಯವೇ ಇಲ್ಲ! ಆದರೆ ದುಂಬಿಗಳಿಗೆ ಇದು ಗೊತ್ತಿಲ್ಲ; ಹಾಗಾಗಿ ಅವು ತಮ್ಮಷ್ಟಕ್ಕೆ ಸ್ವಚ್ಛಂದವಾಗಿ ಹಾರಾಡುತ್ತವೆ! ಹಾಗೆಯೇ ಕಿವುಡು ಮಕ್ಕಳಿಗೆ ಮಾತು ಬರುವುದಿಲ್ಲವೆಂದು ಅನೇಕರ ಅಭಿಪ್ರಾಯ! ಆದರೆ ಅನೇಕಡಿ ಕಿವುಡು ಮಕ್ಕಳಿಗೆ ಇದು ಗೊತ್ತಿಲ್ಲ. ಹಾಗಾಗಿ ಅವರು ಮಾತು ಕಲಿತು ಚಕ್ಕಂದ ಹೊಡೆಯುತ್ತಾರೆí ಹಾಗೆ ಮಾತು, ಭಾಷೆ ಕಲಿತ ಮಕ್ಕಳಲ್ಲಿ ನಿರಂಜನನೂ ಒಬ್ಬ.
ಆದರೆ ಇದು ಸುಲಭಸಾಧ್ಯವಾದುದಲ್ಲ. ಅವನ ತಾಯಿ ದೀಪಾ, ಅವನಿಗೆ ಮಾತು, ಭಾಷೆ ಕಲಿಸಲು ತನ್ನ ಮಿಕ್ಕೆಲ್ಲ ಜವಾಬ್ದಾರಿಗಳನ್ನು, ಆಸೆ, ಹವ್ಯಾಸಗಳನ್ನು ಕಡೆಗಣಿಸಿ, ತನ್ನ ಮತ್ತು ಮನೆಯವರ ಅಗತ್ಯಗಳನ್ನು ಮರೆತು, ಹಗಲೂ, ರಾತ್ರಿ ಎಡೆಬಿಡದೆ ಶ್ರಮಿಸಿದ್ದು ಈ ಸಾಧನೆಯ ಅಡಿಗಲ್ಲು. ಈ ಸಾಹಸ ಕ್ರಿಯೆಯಲ್ಲಿ ದೀಪಾಳ ಜೊತೆ ರವೀಂದ್ರ, ನಿರಂಜನನ ಅಣ್ಣ ನಿಕೇತನ, ಅಜ್ಜ, ಅಜ್ಜಿ ಮತ್ತು ಎಲ್ಲ ಮನೆಯವರ ಸಹಕಾರ, ಸಹಭಾಗಿತ್ವವೂ ಇದ್ದವು.
ಈ ಪುಸ್ತಕ ಅವರೆಲ್ಲರ ಶ್ರಮವನ್ನು ವಿವರಿಸಿ, ಹೆಜ್ಜೆ ಹೆಜ್ಜೆಗೂ ನಿರಂಜನನ ಪ್ರಗತಿಯನ್ನು ಕೇಳಿ, ನೋಡಿ ಆನಂದಿಸಿದ ಮಜಲುಗಳನ್ನು ತೆರೆದಿಡುತ್ತದೆ.
Customers also liked...
-
Deepika Chate
$0.73$0.44 -
B. Suresh
$0.85$0.51 -
Nagesh Kumar C S
$1.93$1.16 -
Hanumanta Haligeri
$2.90$1.74 -
Jayashree Kasaravalli
$1.33$0.80 -
U.R. Ananthamurthy
$2.90$2.32