Basavaraj Donur

Basavaraj Donur

ಡಾ ಬಸವರಾಜ್ ಪಿ. ಡೋಣೂರು 1969ರ ಜುಲೈ 26 ರಂದು ಜನಿಸಿದರು.ಇವರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.
ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. ತಮ, ತಬಲಜಿ, ಹಾವು ತುಳಿದೇನ, ದಶಕದ ಕಥೆಗಳು, ಚಾಂದಿನಿ ಚೌಕ್‌ (ಕಥಾ ಸಂಗ್ರಹ) ಉರಿವ ಕೆಂಡದ ಮೇಲೆ (ಕಾದಂಬರಿ) ಸೀಳು ನೋಟಗಳು, ಕರ್ಪೂರದ ಗಿರಿ, ಬಯಲು ಬೆರಗು, ಕನ್ನಡ ನಾಟಕ ಮತ್ತು ರಂಗಭೂಮಿ, ಕನ್ನಡ ನಾಟಕ ಮತ್ತು ವಾಸ್ತವತೆ, ಒಳಗಣ ಹೊರಗಣ, ನೋಟ ನಿಲುವು (ಸಂಪುಟಗಳು) ಉರಿವ ಮಾತಿನ ಅರಿವು (ವಿಮರ್ಶೆ) ಪಾಪಿಯ ಪಶ್ಚಾತ್ತಾಪ, ಕೊನೆಯ ಎಲೆ ಲಾಜವಂತಿ, ಕಥಾಮಂಜರಿ, ದೇವರ ನ್ಯಾಯ ಇವರ ಕೃತಿಗಳು.

Books By Basavaraj Donur