Meenagundi Subramanya

Meenagundi Subramanya

ಸುಬ್ರಹ್ಮಣ್ಯಂ ವೆಂಕಟರಾವ್ ಮೀನಗುಂಡಿ ೧೯೪೩ರಲ್ಲಿ ಜನಿಸಿದರು. ಬಳ್ಳಾರಿಯ ತಾರಾನಾಥ ಆಯರ್ವೇದ ವಿದ್ಯಾಪೀಠದಲ್ಲಿ ಎಲ್.ಎ.ಎಮ್.ಎಸ್.ಶಿಕ್ಷಣ ಮುಗಿಸಿದರು. ಸೈಕೋಥೆರಪಿ ರಂಗಕ್ಕೆ ೧೯೭೫ರಲ್ಲಿ ಪ್ರೊ.ರೂಪಿಕುಮಾರ್ ಪಾಂಡ್ಯರಿಂದ ಕ್ಲಿನಿಕಲ್ ಹಿಪ್ನಾಸಿಸ್ನಲ್ಲಿ ತರಬೇತಿ ಪಡೆಯುವುದರೊಂದಿಗೆ ಪ್ರವೇಶಿಸಿದರು.ಮೀನಗುಂಡಿಯವರು ಮನಸ್ಸು ಇಲ್ಲದ ಮಾರ್ಗ ಕೃತಿ(1988) ಪ್ರಕಟಿಸಿ ನೂತನ ಚಿಕಿತ್ಸಾ ಕ್ರಮವನ್ನು ಪರಿಚಯಿಸಿದರು. ಈ ಕೃತಿಗೆ 1992-93ನೇ ಸಾಲಿನ ಮೂಡಬಿದಿರೆಯ ವರ್ಧಮಾನ ಸಾಹಿತ್ಯ ಪ್ರಶಸ್ತಿ ಲಭಿಸಿತು. ‘ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?’ ಮೀನಗುಂಡಿಯವರ ಇನ್ನೊಂದು ಕೃತಿ. ಮನಸ್ಸಿಗೆ ಸಂಬಂಧಿಸಿದ ದಾರ್ಶನಿಕ ಪರಿಕಲ್ಪನೆಗಳೇ ಹೆಚ್ಚಿರುವ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುವ ಮಾನಸಿಕ ಕ್ರಿಯೆಯ ವೈಜ್ಞಾನಿಕವೆನಿಸುವ ಅರಿವನ್ನು ಇವರು ತಂದುಕೊಟ್ಟರು. ಟ್ರ್ಯಾನ್ಸಕನಲ್ ಅನಾಲಿಸಿಸ್ ನ ಆಧಾರದಿಂದ ತಾನೇ ಮಾಡಿದ ಪ್ರಯೋಗ, ಚಿಕಿತ್ಸಾ ವಿಧಾನಗಳ ದೃಷ್ಣಾಂತದಿಂದ ಮಾನಸಿಕ ಆರೋಗ್ಯದ ಕುರಿತು ನೂತನ ಅರಿವನ್ನು ಮೂಡಿಸುತ್ತಾರೆ.

Books By Meenagundi Subramanya