Satyesh Bellur

Satyesh Bellur

1962ರಲ್ಲಿ ಮೈಸೂರಿನಲ್ಲಿ ಜನನ. ಓದಿದ್ದು ಎಂಜಿನಿಯರಿಂಗ್ ಹಾಗೂ ಎಮ್.ಬಿ.ಎ. ಬೆಂಗಳೂರಿನ ತೇಜಸ್ ನೆಟ್‍ವರ್ಕ್ಸ್ ಲಿಮಿಟೆಡ್ ಕಂಪನಿಯಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ 2018ರಲ್ಲಿ ಸ್ವಯಂ ನಿವೃತ್ತಿ ಪಡೆದು “ಸುಶಿಕ್ಷಣ” ಎಂಬ ತಮ್ಮ ಎನ್.ಜಿ.ಒ ಅಡಿಯಲ್ಲಿ ಗ್ರಾಮಾಂತರ ಶಾಲಾ ಮಕ್ಕಳ ಬದುಕಿಗೆ ಮಾರ್ಗದರ್ಶಿಯಾಗಬಲ್ಲ ಚಿಂತನೆಗಳನ್ನೊಳಗೊಂಡ ಕಾರ್ಯಾಗಾರಗಳನ್ನು ರೂಪಿಸುತ್ತಿದ್ದಾರೆ. ಸುಮಾರು ಮೂವತ್ತುಮೂರು ವರ್ಷಗಳ ಟೆಲಿಕಾಂ ಕ್ಷೇತ್ರದ ಅನುಭವದೊಂದಿಗೆ ಕೆಲಸದ ನಿಮಿತ್ತವಾಗಿ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ವಾಣಿಜ್ಯ ವ್ಯವಹಾರ ಮಾಡಿರುವ ಹೆಗ್ಗಳಿಕೆ. ಅನೇಕ ತಾಂತ್ರಿಕ ಹಾಗೂ ಮ್ಯಾನೇಜ್‍ಮೆಂಟ್ ಕಾಲೇಜುಗಳಲ್ಲಿ ದೀರ್ಘಕಾಲದಿಂದ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಮ್ಯಾನೇಜ್‍ಮೆಂಟಿನ ವಿಷಯವಾಗಿ ಅನೇಕ ಕಾರ್ಯಾಗಾರಗಳನ್ನು ನಡಿಸಿಕೊಟ್ಟಿದ್ದಾರೆ.

ಇವರಿಗೆ “ಪ್ರತಿಭಾನ್ವಿತ ಬರಹಗಾರ-2014″ಪ್ರಶಸ್ತಿ ಬೆಂಗಳೂರಿನ ಲೋಟಸ್ ಸಂಸ್ಥೆಯ ವತಿಯಿಂದ ಬಂದಿರುತ್ತೆ. ಇವರು ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿಯ ವತಿಯಿಂದ “ರೋಟರಿ ಮುಕ್ತಕ ಸಾಹಿತ್ಯ ಪ್ರಶಸ್ತಿ-2017″ಗೆ ಭಾಜನರಾಗಿರುತ್ತಾರೆ. ಇವರಿಗೆ ಮೈಸೂರಿನ ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದಿಂದ “ದಸರಾ ಪ್ರಶಸ್ತಿ-2018″ಲಭಿಸಿದೆ.

Books By Satyesh Bellur