• -40%

    ಸಂಗೀತ ಸಮ್ಮೋಹಿನಿ

    0

    ಸಂಗೀತ ಸಮ್ಮೋಹಿನಿ :
    (ವೈಜ್ಞಾನಿಕ ಕಾದಂಬರಿ)

    ೨೦೨೦ರ ಸುಮಾರಿಗೆ ಕಂಪ್ಯೂಟರ್ ವಿಜ್ಞಾನ ಸ್ಥಿತ್ಯಂತರ ಪಡೆಯುತ್ತದೆ. ದ್ವಿಮಾನ (ಬೈನರಿ) ಬದಲು ತ್ರಿಮಾನ ಪದ್ಧತಿಯನ್ನು ಅಳವಡಿಸಿದಾಗ ಕಂಪ್ಯೂಟರುಗಳು ಸೃಜನಾತ್ಮಕತೆಯನ್ನು ಮೈಗೂಡಿಸಿಕೊಳ್ಳುತ್ತವೆ . ಮನುಷ್ಯರೊಂದಿಗೆ ಪೈಪೋಟಿಗಿಳಿಯುತ್ತವೆ. ಸಂಗೀತ ಕ್ಷೇತ್ರವು ಇದಕ್ಕೆ ಹೊರತಾಗುವುದಿಲ್ಲ. ಒಂದು ಡೂರೋ ‘ಸಮ್ಮೋಹಿನಿ‘ ರಾಗವನ್ನು ಸೃಷ್ಟಿಸಿ ಪ್ರಸ್ತುತಪಡಿಸುತ್ತದೆ. ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯ ಕಂಪನಗಳನ್ನೆಬ್ಬಿಸುವ ಕಾದಂಬರಿ.

    Original price was: $0.96.Current price is: $0.58.
    Add to basket
  • -40%

    ತಂತ್ರಯೋನಿ

    0

    ತಂತ್ರಯೋನಿ
    ‘ತಂತ್ರಯೋನಿ’  ಗ್ರಂಥ  ತಂತ್ರದ  ಶಾಸ್ತ್ರವನ್ನು  ಕುರಿತು  ವಿವರವಾಗಿ  ಹೇಳುತ್ತದೆ.  ತಂತ್ರ  ಒಂದು  ರಹಸ್ಯವಿದ್ಯೆ.  ಈ  ವಿದ್ಯೆಯನ್ನು  ಗುರುವಿನಿಂದ  ಪಡೆಯಲು  ಶಿಷ್ಯ  ಅಧಿಕಾರಿಯಾಗಿರಬೇಕು.  ‘ಅಶಿಷ್ಯಾಯ  ನ  ದೇಯಂ’  ಎನ್ನುವದು  ಇಂಥ  ವಿದ್ಯೆಗಳಿಗೆ  ಒಂದು  ನಿಷೇಧವಾಕ್ಯ. ದೀಕ್ಷೆ,  ಧ್ಯಾನ,  ಜಪ,  ಮಂತ್ರ  ಮೊದಲಾದವುಗಳು  ಕೂಡ  ತಂತ್ರವಿದ್ಯೆಯ  ಅಂಗಗಳಾಗಿರುವುದರಿಂದ  ಅವುಗಳನ್ನು  ಕುರಿತು  ಸಾಕಷ್ಟು  ವಿವರಗಳನ್ನು  ಈ  ಗ್ರಂಥದಲ್ಲಿ  ನೀಡಲಾಗಿದೆ.

    Original price was: $4.50.Current price is: $2.70.
    Add to basket
  • -40%

    ಸೋಲು ಗೆದ್ದವನದ್ದು!

    0

    ಸೋಲು ಗೆದ್ದವನದ್ದು!
    ನಕ್ಸಲ್ ಹಾಗು ಪೊಲೀಸರ ನಡುವಿನ ಸಂಘರ್ಷದ ಕಥಾಹಂದರ ಒಳಗೊಂಡಿದೆ.‘ಸೋಲು ಗೆದ್ದವನದ್ದು!’ ಕಾದಂಬರಿ ನಕ್ಸಲರು ಮತ್ತು ಪೊಲೀಸರ ನಡುವಿನ ‘ಮಾಡು ಇಲ್ಲವೇ ಮಡಿ’ ಸಮರಕ್ಕೆ ಸಂಬಂಧಿಸಿದ ಕಥಾನಕವೆಂಬಂತೆ ಮೇಲ್ನೋಟಕ್ಕೆ ತೋರಿದರೂ ಅದರ ಆಂತರ್ಯದಲ್ಲಿ ಮನುಷ್ಯನೊಳಗಿನ ಜೀವನ ಪ್ರೀತಿ, ನೋವು, ನಲಿವು, ಆಸೆ, ಹತಾಶೆ, ಮುಗ್ಧತೆ, ಕ್ರೌರ್ಯ ಎಲ್ಲವೂ ಹುದುಗಿದೆ.
    ಇಲ್ಲಿನ ಕಥಾಹಂದರ ಕಾಲ್ಪನಿಕವೇ ಆಗಿದ್ದರೂ, ಅಲ್ಲಲ್ಲಿ ಎದುರಾಗುವ ಸನ್ನಿವೇಶಗಳು ಕಲ್ಪನೆಯ ಪರದೆ ಹೊದ್ದುಕೊಂಡಿರುವ ನೈಜ ಘಟನೆಗಳೆಂಬಂತೆ ಭಾಸವಾಗುತ್ತವೆ.

    Original price was: $1.80.Current price is: $1.08.
    Add to basket
  • -40%

    ಹೊಳೆಮಕ್ಕಳು

    0

    ಇದು ಬಿದರಹಳ್ಳಿ ನರಸಿಂಹಮೂರ್ತಿಯವರ ಕಾದಂಬರಿ.

    Original price was: $2.40.Current price is: $1.44.
    Add to basket
  • -39%

    ಅಕ್ಷಯಪಾತ್ರೆ

    0

    ಅಕ್ಷಯಪಾತ್ರೆ
    (ಕಾಂದಬರಿ)
    ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಸ ಕಥೆ ಕಾದಂಬರಿಗಳು ಕಮ್ಮಿಯಾಗಿವೆ. ಮೊದಲೇ ಕನ್ನಡ ಸಾಹಿತ್ಯವು ಓದುಗರ ಕ್ಷಾಮವನ್ನು ಎದುರಿಸುತ್ತಿದೆ. ಟಿವಿ, ಸಿನಿಮಾದ ಅಬ್ಬರದಲ್ಲಿ ಕಾದಂಬರಿ ಓದಿಗರ ಸಂಖ್ಯೆ ಕಡಿಮೆಯಾಗಿದೆ. ಅದರಲ್ಲೂ ಯುವವರ್ಗ ಸಾಹಿತ್ಯ ಕ್ಷೇತ್ರದತ್ತ ನಿರಾಸಕ್ತಿ ಹೊಂದಿದೆ. ಇಂತಹ ವಿಷಮ ಘಟ್ಟದಲ್ಲಿ ಮಿತ್ರ ಶ್ರೀ ಎಚ್.ಜಿ.ಮಳಗಿಯವರು ರೋಚಕ ಸಾಹಸ ಕಾದಂಬರಿಯನ್ನು ಕನ್ನಡ ಓದುಗರಿಗೆ ನೀಡುವ ಸಾಹಸ ಮಾಡಿದ್ದು ಅಭಿನಂದನೀಯ. ಮಹಾಭಾರತ ಕಾಲದ ಅಕ್ಷಯಪಾತ್ರೆಯನ್ನು ಹುಡುಕಿಕೊಂಡು ಪ್ರಾಚ್ಯವಸ್ತು ಸಂಶೋಧನಾ ತಂಡವು ದೂರದ ಅಫಘಾನಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದರಿಂದ, ಖಳನಾಯಕನಿಂದ ಅನೇಕ ತೊಂದರೆಗಳನ್ನು ಎದುರಿಸಿ ಬರುವ ರೋಚಕ ಕಥಾವಸ್ತುವನ್ನು ಹೊಂದಿದೆ. ಕ್ಷಣಕ್ಷಣಕ್ಕೂ ಎದುರಾಗುವ ಅಪಾಯಗಳು, ವಿಕ್ಷಿಪ್ತ ಖಳನಾಯಕನ ಕ್ರೂರ ನಡೆಗಳು. ನಾಯಕನ ಮೈನವಿರೇಳಿಸುವ ಸಾಹಸಗಳು, ನಾಯಕಿಯ ಅಹಂ, ಸಿಟ್ಟು, ಅಸಹಾಯಕತೆ ಎಲ್ಲವೂ ರೋಚಕತೆಗೆ ಮೆರಗನ್ನು ತಂದಿವೆ. ನಾಯಕಿ ಅಫಘಾನಿಸ್ತಾನದ ಹಳ್ಳಿಯ ತಾಂಡಾವೊಂದರಲ್ಲಿ ಅಲ್ಲಿನ ನೃತ್ಯಗಾತಿಯೊಂದಿಗೆ ಸ್ಪರ್ಧೆಗೆ ಬಿದ್ದು ನೃತ್ಯ ಮಾಡುವುದಂತೂ ಥೇಟ್ ಹಿಂದೀ ಚಿತ್ರದಲ್ಲಿ ಬರುವ ಸನ್ನಿವೇಶದಂತಿದೆ.

    Original price was: $0.77.Current price is: $0.47.
    Add to basket
  • -40%

    ಲಿಲ್ಲಿ ಪುಟ್ಟ

    0

    ಲಿಲ್ಲಿ ಪುಟ್ಟ
    ಲಿಲ್ಲಿ ಪುಟ್ಟ ಸಹಜ ಲಹರಿಯಲ್ಲಿ ಹರಿದು ಬರುವ ಕಾದಂಬರಿ. ರೋಚಕತೆ ಮತ್ತು ನಾಟಕೀಯತೆ ಇದರ ಪ್ರಧಾನ ಗುಣಗಳು. ಪಕ್ಕ ಧಾರವಾಡದ ಶೈಲಿ ಭಾಷಾ ಸೊಗಡು, ತಿಳಿ ಹಾಸ್ಯ, ದಟ್ಟ ಪಾತ್ರ ಚಿತ್ರಿಕತೆ, ಇಲ್ಲಿಯ ಸತ್ವವಾಗಿದೆ. ಯಾರಾದರು, ಎಂದಾದರೂ ತಮ್ಮ ಯವ್ವನದಲ್ಲಿ ಅನುಭವಿಸಿರಬಹುದಾದ ಕಥಾಕೋಷ ಇಲ್ಲಿಯದು. ಏಕಕಾಲಕ್ಕೆ ಸೀರಿಯಲ್ ಮತ್ತು ಸಿನೇಮಾ ಶೈಲಿ ಈ ಕಾದಂಬರಿಯ ಕಥಾ ಕೇಂದ್ರ ಯವ್ವನದ ರೋಚಕ ದಿನಗಳದ್ದಾಗಿದ್ದರಿಂದ ಒಂದು ವರ್ಗದ ಓದುಗರಿಗೆ ಗಕ್ಕನೆ ಹಿಡಿಯಬಲ್ಲ ಶಕ್ತಿ ಇದಕ್ಕಿದೆ.

    Original price was: $1.20.Current price is: $0.72.
    Add to basket
  • -40%

    ಸರದಿ

    0

    ಸರದಿ
    ಡಾ.ನಾ. ದಾಮೋದರ ಶೆಟ್ಟಿ ಅವರ ‘ಸರದಿ’ ಕಾದಂಬರಿಯು ಆಧುನಿಕತೆ ಮತ್ತು ಜಾಗತಿಕರಣದ ಪರಿಣಾಮವಾಗಿ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆ ಸಾಗುತ್ತಿರುವ ದಾರಿ ಎಲ್ಲೆಡೆಯೂ ಅಭಯಾಶ್ರಮದ ಕಡೆ ಚಲಿಸುತ್ತಿರುವ ದೃಶ್ಯಗಳನ್ನು ಚಿತ್ರಿಸುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ಆಶ್ರಮ ಸೇರುತ್ತಿರುವವರೆಲ್ಲಾ ಹೆಂಗಸರು ಮತ್ತು ತಾಯಂದಿರು ಎನ್ನುವುದು ವಿಶೇಷವಾದುದು. ಈ ಕಾದಂಬರಿಯು ಕುಟುಂಬ ಮತ್ತು ತಾಯಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಕಾಲದ ಭಿನ್ನ ಅನನ್ಯತೆಗಳ ನಡುವಿನ ಸಂಘರ್ಷ ಮತ್ತು ಅದರಿಂದ ಸಂಭವಿಸುವ ನೋವು, ಅದನ್ನು ನಿವಾರಿಸಲು ಮಾಡುವ ಪ್ರಯತ್ನಗಳು – ಹೀಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತದೆ.

    Original price was: $0.84.Current price is: $0.50.
    Add to basket
  • -40%

    ಪಾಚಿ ಕಟ್ಟಿದ ಪಾಗಾರ

    0

    ಪಾಚಿ ಕಟ್ಟಿದ ಪಾಗಾರ
    (ಕಾದಂಬರಿ)
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಗಾರ್ತಿ ಮಿತ್ರಾ ವೆಂಕಟರಾಜ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿ ನೀತಿಗಳ ಇತರ ಸಾಧಾರಣ ಕುಟುಂಬಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಸವಿವರವಾಗಿ ಚಿತ್ರಿಸಲಾಗಿದೆ. ಮಿತ್ರಾ ವೆಂಕಟರಾಜ ಅವರು ಎರಡು ಭಾಗಗಳಲ್ಲಿ ಕಾದಂಬರಿಯ ಒಟ್ಟು ಜೀವನದ ಪರಂಪರೆ ಅಳಿಸಿಹೋಗದಹಾಗೆ ಚಿತ್ರಿಸಿ ಮುಂದಿನ ತಲೆಮಾರಿಗೆ ದಾಖಲೆ ಉಳಿಸಿದ್ದಾರೆ.

    Original price was: $3.60.Current price is: $2.16.
    Add to basket
  • -40%

    ಸತ್ತು ಹುಟ್ಟಿದ್ದು

    0

    ಸತ್ತು ಹುಟ್ಟಿದ್ದು
    (ವೈದ್ಯಕೀಯ ರೋಮಾಂಚಕಾರಿ ಕಾದಂಬರಿ)
    ಇದು ಶ್ರೀಮತಿ ರೋಹಿಣಿ ನಿಲೇಕಣಿ ಅವರ ಪೆಂಗ್ವಿನ್ ಪ್ರಕಾಶಕರಿಂದ ಇಂಗ್ಲೀಷನಲ್ಲಿ “ಸ್ಟಿಲ್ ಬಾರ್ನ್” ಎಂಬ ಹೆಸರಿನಲ್ಲಿ ಪ್ರಕಟವಾಗಿದ್ದು ಇದನ್ನು ಆರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

    Original price was: $2.40.Current price is: $1.44.
    Add to basket
  • ಭವ

    0
    $6.00
    Add to basket
  • -40%

    ಮಸುಕು ಬೆಟ್ಟದ ದಾರಿ

    0

    ಮಸುಕು ಬೆಟ್ಟದ ದಾರಿ :

    ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗನ ಕಥೆಯಾಗಿದೆ.

    Original price was: $3.60.Current price is: $2.16.
    Add to basket
  • -40%

    ಆತ್ಮ ವೃತ್ತಾಂತ

    0

    ಆತ್ಮವೃತ್ತಾಂತ

    ಲೇಖಕಿ ರಜನಿ ನರಹಳ್ಳಿ ಅವರ ಪ್ರಸ್ತುತ ಕೃತಿ ‘ಆತ್ಮವೃತ್ತಾಂತ’ ಹಲವು ಕಾರಣಗಳಿಗಾಗಿ ಪ್ರಮುಖವೆನಿಸುತ್ತದೆ.  ರಜನಿ ನರಹಳ್ಳಿಯವರು ಬರೆದ ಈ ಕಾದಂಬರಿಯ ವಸ್ತು ಒಂದು ನಾಯಿಯ ಬಾಳು. ಜತೆಗೆ ಅದರ ಹಿಂದಿನ ಮೂರು ತಲೆಮಾರಿನ ನಾಯಿಗಳ ಆತ್ಮಕತೆಗಳೂ ಈ ಕಾದಂಬರಿಯಲ್ಲಿದೆ.

    Original price was: $3.60.Current price is: $2.16.
    Add to basket
  • -40%

    ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ

    0

    ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ –

    ಮೂಲ ಸ್ಪ್ಯಾನಿಶ್ ಭಾಷೆಯಲ್ಲಿದ್ದ ಈ ಕಾದಂಬರಿಯನ್ನು, ಜೆ. ಎನ್. ಬರ್ನ್ ಸ್ಟಿನ್  ಎಂಬುವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಇದನ್ನು   ಶ್ರೀನಿವಾಸ ವೈದ್ಯರು  ಕನ್ನಡಕ್ಕೆ  ಅನುವಾದಿಸಿದ್ದಾರೆ. ಶ್ರೀನಿವಾಸ ವೈದ್ಯರು ‘ಇದು ನನ್ನ ಮೊದಲ ಅನುವಾದ’ ಎಂದಿದ್ದಾರೆ. ಇಡೀ ಕಥೆಯಲ್ಲಿ ಹುಂಜ, ಮತ್ತೆ ಮತ್ತೆ ಪ್ರಸ್ತಾಪಗೊಳ್ಳುವ ಬಾರದ ಪತ್ರ,ಕರ್ನಲ್ ನ ಮತ್ತು ಇತರರ ಆರೋಗ್ಯ, ಅನಾರೋಗ್ಯ ಇವೆಲ್ಲ ಕವಿತೆಯೊಂದರ ಸಂಕೇತ, ಪ್ರತಿಮೆಗಳಂತೆ ಬಳಕೆಯಾಗಿವೆ. ಹೆಸರಿಲ್ಲದ ಊರಿನ ಹೆಸರಿಲ್ಲದ ನಾಯಕನ ಕಥೆ ಲ್ಯಾಟಿನ್ ಅಮೆರಿಕದ, ಅದನ್ನೂ ಮೀರಿ ಅಸಮಾನ ಮನುಷ್ಯ ಸಮಾಜದ, ಅದನ್ನೂ ಮೀರಿ ಮನುಷ್ಯ ಸಾಮಾನ್ಯನ ಬದುಕಿನ ಕಥೆಯಾಗುವಂತೆ ಹೇಗೆಲ್ಲ ಹಬ್ಬುತ್ತದೆ, ಅನುಭವವಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ

    Original price was: $0.72.Current price is: $0.43.
    Add to basket