• -40%

    ಸುಖ ಯಾರ ಸೊತ್ತು?

    0

    ಸುಖ ಯಾರ ಸೊತ್ತು?
    (ವ್ಯಕ್ತಿತ್ವ ವಿಕಸನ)
    ನಾವು ಸುಖವಾಗಿರಬೇಕೆಂಬ ಬಯಕೆ ಅತಿಯಾದಾಗ ನಮಗೇ ತಿಳಿಯದಂತೆ ಇನ್ನೊಬ್ಬರ ಸುಖವನ್ನು ಕಿತ್ತು ಮತ್ತೊಬ್ಬರ ಬದುಕನ್ನು ಮೂರಾಬಟ್ಟೆ ಮಾಡಿರುತ್ತೇವೆ. ಜಗತ್ತನ್ನು ಕಣ್ಣು ಬಿಟ್ಟು ನೋಡಿದರೆ ಹಾಗೆ ಮಾಡದೆಯೂ ಅಂದರೆ ಯಾರಿಗೂ ತೊಂದರೆ ಕೊಡದೆ, ಯಾರ ಬದುಕನ್ನೂ ಕಿತ್ತುಕೊಳ್ಳದೆಯೂ ನಾವು ಸುಖ ಪಡುವ ಎಲ್ಲಾ ದಾರಿಗಳೂ ನಮಗಿವೆ ಮತ್ತು ನಿಜವಾದ ಸುಖ ಅಡಗಿರುವುದು ಅದರಲ್ಲೇ ಎನ್ನುವುದೂ ತಿಳಿಯುತ್ತದೆ. ಅದಕ್ಕೆ ವಿದ್ಯೆ, ಬುದ್ಧಿ, ವಿವೇಚನೆ, ಹುಟ್ಟುಗುಣಗಳ ಸಹಕಾರ ಬೇಕು. ಜೊತೆಗೆ ಯಾವುದು ಸತ್ಯ, ಏನು ಮಾಡಿದ್ದರಿಂದ ಏನಾಗುತ್ತದೆ ಎಂಬ ಜಗತ್ತಿನ ನಿಯಮಗಳನ್ನು ಅರ್ಥಮಾಡಿಕೊಳ್ಳುವ ಹಂಬಲ ಬೇಕು. ಮನಸ್ಸು ಮಾಡಿದರೆ ಅವನ್ನೆಲ್ಲಾ ತಿಳಿಯುವ ಶಕ್ತಿ ನಮಗೇ ಇದೆ. ಅದು `ತಿಳಿದು ಮಾಡಿದರೆ ನಿನಗೇ ಸುಖ; ಇಲ್ಲದೆ ಇದ್ದರೆ ಮಾಡಿದ್ದನ್ನು ಅನುಭವಿಸು’ ಎಂದು ಸೃಷ್ಟಿಕರ್ತ ನಮಗೆ ಹಾಕಿದ ಒಂದು ಛಾಲೆಂಜ್!

    Original price was: $1.20.Current price is: $0.72.
    Add to basket
  • -40%

    ಮಾತು ಹೇಗಿದ್ದರೆ ಚೆನ್ನ ?

    0

    ಮಾತು ಹೇಗಿದ್ದರೆ ಚೆನ್ನ ?
    (ವ್ಯಕ್ತಿತ್ವ ವಿಕಸನ)
    ಮಾತಿನಿಂದ ಏನೆಲ್ಲಾ ಸಾಧ್ಯ? ಎಂಬ ಪ್ರಶ್ನೆಗೆ `ಮಾತಿನಿಂದ ಎಲ್ಲವೂ ಸಾಧ್ಯ’ ಎನ್ನುವುದೊಂದೇ ಉತ್ತರ. ಮಾತನ್ನು ಬರೀ ಆಡಲು ಕಳಿತರೆ ಸಾಲದು. ಹೇಗೆ? ಎಲ್ಲಿ? ಎಷ್ಟು ಆಡಬೇಕು? ಹೇಗೆ ಆಡಬಾರದು? ಯಾಕೆ ಆಡಬಾರದು? ಎನ್ನುವುದನ್ನೂ ತಿಳಿದಿರಬೇಕು. ಮಾತಿನ ಬಗ್ಗೆ ಎಲ್ಲವೂ ಈ ಪುಸ್ತಕದಲ್ಲಿ ಇದೆ ಎಂದಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಕನಿಷ್ಟ ಇಷ್ಟನ್ನಾದರೂ ತಿಳಿದಿದ್ದರೆ ಒಂದಿಷ್ಟು ವ್ಯಕ್ತಿತ್ವ ವಿಕಸನ ಸಾಧ್ಯ.

    Original price was: $1.44.Current price is: $0.86.
    Add to basket
  • -40%

    ಜೇನುಕಲ್ಲಿನ ರಹಸ್ಯ ಕಣಿವೆ

    0

    ಜೇನುಕಲ್ಲಿನ ರಹಸ್ಯ ಕಣಿವೆ
    (ಮಲೆನಾಡಿನ ರೋಚಕ ಕತೆಗಳು-೪)
    ಕಾದಂಬರಿ
    ಗಿರಿಮನೆ ಶ್ಯಾಮರಾವ್
    ಈ ಪಶ್ಚಿಮಘಟ್ಟ ಅದ್ಭುತ, ರಮ್ಯ, ಅಪರೂಪದ ಜೀವ-ಸಸ್ಯಗಳ ತಾಣ. ಆದರೆ ಅದು ಸುತ್ತಲಿಂದ ಇಂಚಿಂಚಾಗಿ ನಶಿಸುತ್ತಿದೆ. ಬಹುಶಃ ನಮ್ಮ ಕಾಲ ಮುಗಿಯುವುದರೊಳಗೆ ಅದರ ಸಹಜ ಸೌಂದರ್ಯ ಮಾಸಬಹುದು. ಮುಂದಿನ ಪೀಳಿಗೆಯವರಿಗೆ ಅದರ ಮತ್ತೊಂದು ರೂಪವೇ ಕಾಣಲು ಸಿಗಬಹುದು. ಹಾಗಾಗುವ ಮೊದಲೇ ಅದರ ಒಂದೊಂದೇ ಮಗ್ಗುಲನ್ನು ಪ್ರತಿಯೊಂದು ಕಾದಂಬರಿಯಲ್ಲೂ ಪದರು ಪದರಾಗಿ ಬಿಚ್ಚಿಡುತ್ತಾ ಹೋಗುವ ಉದ್ದೇಶ ಇಲ್ಲಿದೆ. ಕೋಟ್ಯಂತರ ವರ್ಷಗಳಿಂದ ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ವನ್ಯಜೀವಿಗಳ ಬದುಕು ಒಮ್ಮೆಲೇ ಈ ಶತಮಾನದಲ್ಲಿ ಘೋರವಾಗಿ ಜೀವಜಾಲದ ಸರಪಳಿ ಕಡಿಯುತ್ತಿದೆ. ಮಾಡಿದ ಕರ್ಮಗಳು ಬದುಕಿಗೆ ಮತ್ತೊಂದು ರೀತಿಯಲ್ಲಿ ಸುತ್ತಿಕೊಳ್ಳುತ್ತದಾ? ಅದು ಬೇಗ ಕಣ್ಣಿಗೆ ಕಾಣದಿದ್ದರೂ ಬದುಕನ್ನು ಆಳವಾಗಿ ನೋಡಿದಾಗ ಅಲ್ಲ ಎನ್ನಲು ಬರುವುದಿಲ್ಲ. `ಮಾಡಿದ್ದನ್ನು ಅನುಭವಿಸಲೇಬೇಕು’ ಎನ್ನುವುದು ಜಗತ್ತಿನ ನಿಯಮವೇ ಆಗಿರಬೇಕು. ಇವೆಲ್ಲದರ ಒಳನೋಟ ಈ ಕಾದಂಬರಿಯಲ್ಲಿದೆ.

    Original price was: $1.56.Current price is: $0.94.
    Add to basket