Your Cart

Need help? Call +91 9535015489

📖 Print books shipping available only in India. ✈ Flat rate shipping

ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಪ್ರವೇಶ

$8.00

Product details

Editor

G S Bhat

Publisher

Akshara Prakashana

Book Format

Ebook

Language

Kannada

Category

Stories

ಕನ್ನಡ ಭಾಷೆಯ ಮೊದಲ ಗದ್ಯಗ್ರಂಥವೆಂದು ಹೆಸರು ಪಡೆದ ’ವಡ್ಡಾರಾಧನೆ’ಯನ್ನು ಬರೆದವನು ಯಾರೆಂಬ ಸಂಗತಿಯು ಬಹುಕಾಲ ವಿದ್ವತ್ ವಿವಾದಕ್ಕೆ ಒಳಗಾಗಿ ಈಗ, ಅದು ಶಿವಕೋಟ್ಯಾಚಾರ್ಯ ವಿರಚಿತವೆಂದು ಸಾಧಾರಣವಾಗಿ ನಿರ್ಣಯಿತವಾಗಿದೆ. ಹಾಗಿದ್ದರೂ, ಕನ್ನಡ-ಪ್ರಾಕೃತ-ಸಂಸ್ಕೃತ ಸಾಹಿತ್ಯದಲ್ಲಿ ಹಲವಾರು ಶಿವಕೋಟ್ಯಾಚಾರ್ಯರಿದ್ದು ಇವರಲ್ಲಿ ಈ ಕರ್ತೃ ಯಾರೆಂಬುದು ಅಸ್ಪಷ್ಟವಾಗಿದೆ. ಈ ಶಿವಕೋಟ್ಯಾಚಾರ್ಯ ಕಾಶಿ ಯಾ ಕಂಚಿಯ ರಾಜನೇ ಅಥವಾ ನಮ್ಮದೇ ಬಳ್ಳಾರಿ ಜಿಲ್ಲೆಯಲ್ಲಿ ಹಿಂದೆ ಕೊಗಳಿ ಎಂದು ಕರೆಯಲಾಗುತ್ತಿದ್ದ ಪ್ರಾಂತ್ಯಕ್ಕೆ ಸೇರಿದವನೆ ಎಂಬುದು ಕೂಡಾ ನಿಖರವಾಗಿ ನಿರ್ಧಾರಿತವಾಗಿಲ್ಲ. ಈ ಕೃತಿಯನ್ನಲ್ಲದೆ ಈತ ’ರತ್ನಮಾಲಾ’ ಎಂಬ ಸಂಸ್ಕೃತ ಶಾಸ್ತ್ರಗ್ರಂಥವನ್ನೂ ಮತ್ತು ’ತಥಾರ್ಥಸೂತ್ರ’ವೆಂಬ ಗ್ರಂಥಕ್ಕೆ ಸಂಬಂಧಿಸಿದ ಪಠ್ಯವೊಂದನ್ನೂ ರಚಿಸಿದ್ದಾನೆಂದು ತಿಳಿಯಲಾಗಿದೆ. ಕ್ರಿ.ಶ. 920ರ ಸುಮಾರಿಗೆ, ಕನ್ನಡದ ಇನ್ನೊಂದು ಮಹತ್ವದ ಆದಿಕೃತಿ ’ಕವಿರಾಜಮಾರ್ಗ’ದ ಕಾಲದಲ್ಲಿಯೇ, ಜೈನ ಸಾಧಕರ ಆರಾಧನಾ ಗ್ರಂಥವಾಗಿ ಈ ’ವಡ್ಡಾರಾಧನೆ’ಯೂ ರಚಿತವಾಗಿದೆಯೆಂದು ವಿದ್ವಾಂಸರ ಅಭಿಮತ.ವಡ್ಡಾರಾಧನೆ’ ಹತ್ತೊಂಬತ್ತು ಜೈನ ಕತೆಗಳ ಸಂಕಲನ. ಕನ್ನಡದ ಮೊಟ್ಟಮೊದಲ ಕಥಾಸಂಕಲನ ಎಂಬ ಖ್ಯಾತಿಗೆ ಒಳಗಾದುದು. ಈ ಸಂಕಲನಕ್ಕೆ ’ಉಪಸರ್ಗ ಕೇವಲಿಗಳ ಕಥೆ’ ಎಂಬ ಇನ್ನೊಂದು ಹೆಸರೂ ಇದೆ. ’ಉಪಸರ್ಗ’ ಜೈನ ಪರಿಭಾಷೆ. ಕಷ್ಟ, ತೊಂದರೆ ಎಂಬುದು ಸಾಮಾನ್ಯ ಅರ್ಥ. ತಪಸ್ಸು ತೊಡಗಿದ ಸಾಧಕನಿಗೆ ದೇವತೆಗಳಿಂದ ತೊಂದರೆ ಬಂದರೆ ಅದು ದೇವೋಪಸರ್ಗ. ಮನುಷ್ಯರಿಂದ ಬಂದರೆ ಮನುಷ್ಯೋಪಸರ್ಗ. ಪ್ರಾಣಿ ಮುಂತಾದವುಗಳಿಂದ ಬಂದರೆ ತಿರಿಕೋಪಸರ್ಗ. ನಿರ್ಜೀವ ವಸ್ತುಗಳಿಂದ ಕಷ್ಟ ಒದಗಿದರೆ ಅಚೇತನೋಪಸರ್ಗ. ವಡ್ಡಾರಾಧನೆ ಇಂಥ ಕಷ್ಟಗಳನ್ನು ಸಹಿಸಿಕೊಂಡ ಸಾಧಕರ ಕಥೆ. ಹತ್ತೊಂಬತ್ತರಲ್ಲಿ ಮೊದಲನೆಯದು ಸುಕುಮಾರ ಸ್ವಾಮಿಯ ಕಥೆ. ಪೂರ್ವಜನ್ಮದಲ್ಲಿ ವಾಯುಭೂತಿಯ ಅತ್ತಿಗೆಯಾದವಳು ಜನ್ಮಜನ್ಮಾಂತರಗಳಲ್ಲಿ ತೊಳಲಾಡಿಗಳು. ಕೊನೆಯಲ್ಲಿ ಮಕ್ಕಳೊಂದಿಗೆ ಹೆಣ್ಣು ನರಿಯಾಗಿ ಹುಟ್ಟಿದಳು. ವಾಯುಭೂತಿಯೂ ತಾನು ಮಾಡಿದ ಅಪರಾಧಕ್ಕಾಗಿ ಜನ್ಮ- ಜನ್ಮಾಂತರಗಳಲ್ಲಿ ತೊಳಲಿ ಸುಕುಮಾರ ಸ್ವಾಮಿಯಾಗಿ ಹುಟ್ಟಿದ್ದ. ಧ್ಯಾನಮಗ್ನ ಸುಕುಮಾರನನ್ನು ನರಿಗಳು ಸೊಂಟದವರೆಗೆ ತಿಂದು ಹಾಕಿದವು. ಆದರೂ ಸುಕುಮಾರಸ್ವಾಮಿ ತಪಸ್ಸು ಮಾಡಿ ರತ್ನತ್ರಯ ಸಾಧಿಸಿದ. ಆದ್ದರಿಂದ ಇದು ತಿರಿಕೋಪಸರ್ಗದ ಕಥೆ.