Your Cart

Need help? Call +91 9535015489

📖 Print books shipping available only in India. ✈ Flat rate shipping

ಸುಟ್ಟ ಗಾಯದ ಕಲೆಗಳು

Parvathi G.Aithal
$0.54

Product details

Author

Parvathi G.Aithal

Publisher

VIVIDLIPI

Book Format

Ebook

Pages

106

Category

Short stories

Year Published

2018

Language

Kannada

ಡಾ. ಪಾರ್ವತಿ ಜಿ. ಐತಾಳ್ ಅವರದು ಅನುವಾದ ಕ್ಷೇತ್ರದಲ್ಲಿ ದೊಡ್ಡ ಹೆಸರು. ಸ್ವತಂತ್ರ ಕೃತಿರಚನೆಯಲ್ಲೂ ಸಿದ್ದಹಸ್ತರು. 40ಕ್ಕೂ ಹೆಚ್ಚು ಗುಣಮಟ್ಟದ ಕೃತಿಗಳನ್ನು ಪ್ರಕಟಿಸಿರುವ ಡಾ. ಪಾರ್ವತಿ ಜಿ. ಐತಾಳ್ ಅವರ ಪ್ರಸ್ತುತ ಕೃತಿಯಲ್ಲಿ ಹನ್ನೆರಡು ಕಥೆಗಳಿವೆ. ಇಲ್ಲಿನ ಕಥೆಗಳಲ್ಲಿ ಪರಿಸರದ ಬಗ್ಗೆ ಅಪಾರ ಕಾಳಜಿ ವ್ಯಕ್ತವಾಗಿರುವಂತೆಯೇ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ-ಕೊಲೆಗಳು ಹುಟ್ಟಿಸುವ ಆತಂಕ, ಸ್ತ್ರೀಶೋಷಣೆ, ಯಂತ್ರ ನಾಗರಿಕತೆಯ ಅಮಾನವೀಯ ಮುಖಗಳೂ ಮನಮುಟ್ಟುವಂತೆ ಚಿತ್ರವಾಗಿವೆ. ಇಲ್ಲಿನ ‘ಬಲಿಪಶುಗಳು’, ‘ಹಲಸಿನ ಮರದ ಹಾಡು’, ‘ಕಾಮಾಲೆ’, ‘ಸುಟ್ಟ ಗಾಯದ ಕಲೆಗಳು’, ‘ಸಾಕ್ಷ್ಯಚಿತ್ರ’ ಕಥೆಗಳಲ್ಲಿ ಮಾನವೀಯ ತುಡಿತವಿದೆ. ಲೇಖಕಿಯವರ ಎಂದಿನ ಕಥೆಗಳನ್ನು ಹೆಣೆಯುವಲ್ಲಿ ವಿಶಿಷ್ಟ ಆಲೋಚನಾ ಕ್ರಮ, ಓದುಗರ ಹೃದಯವನ್ನು ನೇರ ತಾಕುವ ನಿರೂಪಣಾ ಶೈಲಿ ಈ ಕೃತಿಯಲ್ಲೂ ಮುಂದುವರಿದಿದೆ; ಸಾಮಾಜಿಕ ಪ್ರಸ್ತುತತೆ ಉದ್ದಕ್ಕೂ ಹರಿಯುವುದನ್ನು ಕಾಣಬಹುದಾಗಿದೆ.