• -40%

    ಕಾಣುತಿದೆ ನದಿಯ ಆಚೆಯ ದಂಡೆ

    0

    ಕಾಣುತಿದೆ ನದಿಯ ಆಚೆಯ ದಂಡೆ
    ಕಾಣುತಿದೆ ನದಿಯ ಆಚೆಯ ದಂಡೆ- ಈ ಸಂಗ್ರಹದಲ್ಲಿಯ ಕೆಲವೊಂದು ಕಥೆಗಳು “ಇದು ನನ್ನ ಜೀವನ. ನನ್ನ ಮನಸ್ಸಿನಂತೆ ತುಂಬಿದ ಭಾವರಂಗಗಳನ್ನು ಉಪಯೋಗಿಸುವ ಪೂರ್ಣ ಅಧಿಕಾರ ನನಗಿದೆ” – ಈ ರೀತಿಯ ಸ್ವಾಭಿಮಾನವನ್ನುಂಟು ಮಾಡುವಂಥವುಗಳು ಹಾಗೂ ಪರಂಪರೆಯಲ್ಲಿಯ ಒಳ್ಳೆಯದನ್ನು ಸ್ವತಃ ಬಿತ್ತುವ ಮಹಿಳೆಯರ ಕಥೆಗಳು ಇಲ್ಲಿವೆ.

    Original price was: $1.44.Current price is: $0.86.
    Add to basket
  • -40%

    ಮಳೆ ನಿಂತು ಹೋದ ಮೇಲೆ

    0

    ಮಳೆ ನಿಂತು ಹೋದ ಮೇಲೆ
    ಮಳೆ ನಿಂತು ಹೋದ ಮೇಲೆ ಇದು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕೆರೆವ ಕಿರು ವೈಚಾರಿಕ ಲೇಖನಗಳ ಸಂಗ್ರಹ. ಈ ಸಂಕಲನದ ‘ಸಿಇಓ ಆಫ್ ದ ಹೋಮ’, ‘ಕೆಪಿಒದಲ್ಲಿ ಸಂಧಿ’, ‘ತ್ಸುನಾಮಿ’ಯಂತಹ ಲೇಖನಗಳು ಲೇಖಕಿಯ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ, ಬೆಳವಣಿಗೆಗಳ ಸೂಕ್ಷ್ಮ ನೋಟವನ್ನು ಅನಾವರಣಗೊಳಿಸುತ್ತದೆ. ‘ಬದಲಾಗುತ್ತಿರುವ ಅತ್ತೆ-ಸೊಸೆಯರ ಸಂಬಂಧ’ ಮತ್ತು ‘ಪ್ರಬುದ್ಧ ಮಹಿಳೆಯ ಸಾಮಾಜಿಕ ಜವಾಬ್ದಾರಿ’ ಲೇಖನಗಳಲ್ಲಿ ಲೇಖಕಿ ಇಂದಿನ ಸುಶಿಕ್ಷಿತ ಮತ್ತು ಪ್ರಜ್ಞಾವಂತ ಮಹಿಳೆ ಇಡಬೇಕಾದ ಎಚ್ಚರಿಕೆಯ ಹೆಜ್ಜೆ ಗುರುತುಗಳ ನೀಲನಕ್ಷೆಯಿದೆ. ವಿವಿಧ ಸಂಬಂಧಗಳಲ್ಲಿದ್ದುಕೊಂಡು ಮಹಿಳೆ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಮಾಹಿತಿಯನ್ನು ನೀಡುತ್ತವೆ.

    Original price was: $0.96.Current price is: $0.58.
    Add to basket
  • -40%

    ಪರಿತ್ಯಕ್ತ ಮತ್ತು ಇತರ ಕತೆಗಳು

    0

    ಪರಿತ್ಯಕ್ತ ಮತ್ತು ಇತರ ಕತೆಗಳು
    ಮೊದಲ ಸ್ಪಂದನ
    ಇವರ ‘ಪರಿತ್ಯಕ್ತ ಮತ್ತು ಇತರ ಕಥೆಗಳು’ ಎಂಬ ಪ್ರಥಮ ಕಥಾ ಸಂಕಲನದಲ್ಲಿ ಆಧುನಿಕ ಪರಿಸರದಲ್ಲಿ ಮಹಿಳಾ ಸಂವೇದನೆ ಕುರಿತ ಕಥೆಗಳೇ ಇವೆ. ವಿವಿಧ ಪತ್ರಿಕೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನು ಪ್ರಕಟಿಸಿದ ಲೇಖಕಿ ಅದರ ಮುಂಬಡ್ತಿ ಎಂಬಂತೆ ಕಥೆಗಳಿಗೆ ಕೈ ಇಕ್ಕಿರುವುದು ಸಹಜವೇ ಆಗಿದೆ. ಹತ್ತು ಕಥೆಗಳ ಹರಹಿನಲ್ಲಿ ಅವರ ಅನುಭವಗಳು ಅನಾವರಣಗೊಂಡಿವೆ.

    Original price was: $0.72.Current price is: $0.43.
    Add to basket
  • -40%

    ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು

    0

    ಅತಿ ಸಂಶಯ ಪ್ರವೃತ್ತಿಯ ಗಂಡ, ಅವನಿಂದ ಹಿಂಸೆಗೊಳಗಾಗುವ ಪತ್ನಿ ‘ಹೊಸ ಹಾಡಿನ ಪಲ್ಲವಿ’ ಕತೆಯ ಕೇಂದ್ರಬಿಂದು. ಗಂಡ ಕೊನೆಗೆ ಬದಲಾಗುವ ಸನ್ನಿವೇಶ ಹೃದಯಸ್ಪರ್ಶಿಯಾಗಿದೆ. ‘ತಿರುವು’ ಅನೀರಿಕ್ಷಿತ ತಿರುವು ಹೊಂದಿರುವ ಕತೆ. ಸ್ವಾರಸ್ಯಕರವಾಗಿ ನಿರೂಪಿತವಾಗಿದೆ. ಅಂತರ್ಜಾತಿ ವಿವಾಹಕ್ಕೆ ಮನೆಯವರ ಅಡ್ಡಿ, ಅದಕ್ಕಾಗಿ ಮಗ ಅನುಸರಿಸುವ ತಂತ್ರ ಇಲ್ಲಿಯ ವಿಶೇಷ.

    Original price was: $0.72.Current price is: $0.43.
    Add to basket
  • -40%

    ಹಾಗೇ ಸುಮ್ಮನೇ

    0

    ಹಾಗೇ ಸುಮ್ಮನೇ
    ಮನೆಯಲ್ಲೇ ಜರುಗಿದ ಹಾಸ್ಯ ಪ್ರಸಂಗಗಳನ್ನು  ಆಗಾಗ್ಗೆ ಬರೆದು  ಮಯೂರ, ಕಸ್ತೂರಿ ತುಷಾರಕ್ಕೆ ಕಳುಹಿಸುತ್ತಿದ್ದೆ. ಅದನ್ನೋದಿದ ಸಾಕಷ್ಟು ಜನ  ಫೊನಾಯಿಸಿ ಅಭಿನಂದಿಸುತ್ತಿದ್ದರು. ಹೀಗಾಗಿ ದೊಡ್ಡ ಪ್ರಸಂಗಗಳನ್ನೇ: ಸೇರಿಸಿ  ಬರೆಯಬಾರದೇಕೆ ಎಂದು ಅನ್ನಿಸಿದ್ದುಂಟು, ಬಾಲ್ಯದಲ್ಲಿ ಜರುಗಿದ ಘಟನೆಗಳೋ,  ಪತಿಯೊಂದಿಗಿನ ಹಾಸ್ಯ ಪ್ರಸಂಗವೋ ತೆಗೆದುಕೊಂಡು ಬರದೆ, ಮನೆಗೆ ಬಂದ  ಅಣ್ಣ ಅಕ್ಕಂದಿರ ಮುಂದೆ ಓದಿ ತೋರಿಸುತ್ತಿದ್ದೆ.  ಅವರ ಮುಖದಲ್ಲಿ ಅರಳಿದ  ಮುಗುಳ್ನಗೆ ನನ್ನಲ್ಲಿ ಬರೆಯುವುದಕ್ಕೆ ಪ್ರೆರೇಪಿಸಿತು ಎಂದು ಹೇಳಬಹುದು.

    Original price was: $0.60.Current price is: $0.36.
    Add to basket
  • -40%

    ಮಾತು ಮೌನ

    0

    ಮಾತು ಮೌನ
    ಸಾಹಿತ್ಯ ಪರಿಷತ್ತಿನವರು ಏರ್ಪಡಿಸಿದ ಕವಿಗೋಷ್ಟಿಗಳಲ್ಲಿ ವಾಚಿಸಲೆಂದೇ ರಚಿಸಿದ ಕವಿತೆಗಳಿವು. ಈ ಕವನ ಸಂಕಲನದಲ್ಲಿ ನಿಸರ್ಗ ಪ್ರೇಮ, ಜೀವನ ಸೌಂದರ್ಯ , ಬದುಕಿನ ಬವಣೆ, ಹೆಣ್ಣಿನ ಶೋಷಣೆ, ಸಾಂಸ್ಕೃತಿಕ ಚಿಂತನೆ, ಪ್ರೀತಿ ಪ್ರೇಮ , ನಾಡು ನುಡಿ , ದೇಶಭಕ್ತಿ , ಗಣ್ಯವ್ಯಕ್ತಿ , ಹಾಗೂ ‘ಅಹಲ್ಯ’ ಎಂಬ ಕಿರುಕಥನಗೀತೆ, ಭಕ್ತಿಗೀತೆ, ಹೀಗೆ ಸಾಕಷ್ಟು ವೈವಿಧ್ಯತೆಯನ್ನು ಕಾಣುತ್ತೇವೆ. ಇವರು ಸಾಹಿತ್ಯದ ದೋಣಿಯನ್ನು ನಡೆಸುವಲ್ಲಿ ಗದ್ಯ ಪದ್ಯದ ಹುಟ್ಟನ್ನು ಹಾಕಿದ್ದಾರೆ.

    Original price was: $1.08.Current price is: $0.65.
    Add to basket