• -40%

    ಪಾರಿತೋಷ

    0

    ಪಾರಿತೋಷ
    ಈ ಪುಸ್ತಕವು ಆರ್. ಕೆ. ಶಾನಭೋಗ ಅವರು ಬರೆದ ಮಕ್ಕಳ ನಾಟಕ ವಾಗಿದೆ.

    Original price was: $0.42.Current price is: $0.25.
    Add to basket
  • -39%

    ತಲಲಂ ಪಂ ಪಂ 

    0

    ತಲಲಂ ಪಂ ಪಂ
    (ಮಕ್ಕಳ ಕವನಗಳು)
    ಶ್ರೀಮತಿ ಶ್ವೇತಾ ನರಗುಂದ ಅವರ ‘ಕಿಂಕಿಣಿ’ ಕವನ ಸಂಕಲನವನ್ನು 2006 ರಲ್ಲಿ ಜಡಭರತ ಪ್ರಕಾಶನದಿಂದ ಪ್ರಕಟಿಸಲಾಗಿತ್ತು. ಕಳೆದ 2-3 ವರ್ಷಗಳಲ್ಲಿ ಅವರ ಸೃಜನಶೀಲ ಪ್ರಕ್ರಿಯೆ ಮಕ್ಕಳ ಓಲೈಕೆಯ ಹಿನ್ನೆಲೆಯಲ್ಲಿ ಅವರಿಗಾಗಿ ಗುಣುಗುಣಿಸುತ್ತಿರುವ ಲಾಲಿ ಪದ್ಯಗಳ ಜೊತೆಗೆ ಶಬ್ದಗಳ ಕಿಂಕಿಣಿ ನಾದವನ್ನು ಶಬ್ದಗಳಲ್ಲಿ ಹಿಡಿದಿಟ್ಟು ಇತರರಿಗೂ ನೀಡುವಂತೆ ಪ್ರಯತ್ನಿಸಿದ್ದಾರೆ.

    Original price was: $0.36.Current price is: $0.22.
    Add to basket
  • -40%

    ಸೋಮಾರಿ ಓಲ್ಯಾ

    0

    ಸೋಮಾರಿ ಓಲ್ಯಾ
    (ಮಕ್ಕಳ ನಾಟಕ)
    ಸುಮಾರು ಏಳೆಂಟು ವರ್ಷದೊಳಗಿನ ಮಕ್ಕಳಿಗಾಗಿ ಹತ್ತುವರ್ಷಗಳ ಹಿಂದೆ ಬರೆದ ನಾಟಕವಿದು. The Lost Ring ಎಂಬ ಪುಟ್ಟ ಪದ್ಯದಿಂದ ಪ್ರೇರಿತವಾದದ್ದು. ರಚನೆಯಲ್ಲಿ ಕೆಲ ಜನಪ್ರಿಯ ಮಕ್ಕಳ ಕಥೆಗಳ ಬಿಡಿ ನೇಸಲುಗಳೂ ಸೇರಿವೆ.

    Original price was: $0.30.Current price is: $0.18.
    Add to basket
  • -100%

    ಪರಾಗ

    0

    ಪರಾಗ
    (ಕವನ ಸಂಕಲನ) :
    ಶ್ರೀ ಅರವಿಂದ ಅವರು ಬರೆದ ಮೊದಲ ಕವನ ಸಂಕಲನ ಇದಾಗಿದೆ. ಇವರು ಕರ್ನಾಟಕದವರೇ ಆಗಿದ್ದರೂ ಸಹ ಅವರ ಸರ್ಕಾರಿ ಸೇವೆ ಅವಧಿಯಲ್ಲಿ ಕರ್ನಾಟಕ ಹೊರತು ಪಡಿಸಿ ದೇಶದ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಪುಣೆಯಲ್ಲಿ ನೆಲೆಸಿದ್ದರು ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದ ಅವರ ಜೀವಮಾನದ ಅನುಭವಗಳನ್ನೆಲ್ಲ ಕ್ರೂಡೀಕರಿಸಿ ಬರೆದಂತಹ ಮೊದಲ ಕವನ ಸಂಕಲನ ಇದಾಗಿದೆ.

    Original price was: $1.44.Current price is: $0.00.
    Add to basket
  • -100%

    ಅಗಸ್ತ್ಯನಿಂದ ಐ.ಟಿ.ವರೆಗೆ

    0

    ಅಗಸ್ತ್ಯನಿಂದ ಐ.ಟಿ.ವರೆಗೆ :
    (ದ್ವಿಪಾತ್ರ ನಾಟಕ ಪ್ರಸಂಗಗಳು)

    ಬಹುಕಲಾವಿದರ ತಂಡಗಳ ಪ್ರದರ್ಶನದಿಂದ ಏಕವ್ಯಕ್ತಿ ಪ್ರದರ್ಶನದ ಹಂತಕ್ಕೆ ಬಂದು ನಿಂತಿರುವ ಇಂದಿನ ದಿನಗಳಲ್ಲಿ ಆರ್ಯರ ದ್ವಿಪಾತ್ರ ನಾಟಕಗಳು ಹೊಸತನ್ನೇ ನೀಡಿ ಮತ್ತು ಸಾಧ್ಯತೆಯನ್ನು ಸಾಬೀತುಪಡಿಸಿವೆ. ಇದರಲ್ಲಿನ ಏಳು ನಾಟಕಗಳು ವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆ ಆಯಾ ಕಾಲಘಟ್ಟದ ವಸ್ತುವಿಗೆ ತಕ್ಕಂತೆ ಭಾಷೆಯ ಬಳಕೆ ಮತ್ತು ಸರಳ ಸಂಭಾಷಣೆ ಎನಿಸಿದರೂ ಅವುಗಳ ಒಳ ಅರ್ಥ ಪ್ರೇಕ್ಷಕನ ಮೆದುಳು ಹಾಗೂ ಮನಸ್ಸನ್ನು ಮತ್ತು ಹೃದಯವನ್ನು ಯಶಸ್ವಿಯಾಗಿ ತಲುಪುತ್ತವೆ. ಈಗಾಗಲೇ ಈ ನಾಟಕಗಳು ಆಕಾಶವಾಣಿಯಲ್ಲಿ ಪ್ರಸಾರಗೊಂಡು ಪುರಸ್ಕಾರಕ್ಕೂ ಪಾತ್ರವಾಗಿವೆ.

    Original price was: $0.72.Current price is: $0.00.
    Add to basket
  • -40%

    ಜನನಾಯಕ -ಡಿ. ಕೆ. ನಾಯ್ಕರ್

    0

    ಜನನಾಯಕ –ಡಿ. ಕೆ. ನಾಯ್ಕರ್

    ರಾಜ್ಯ ರಾಜಕಾರಣದಲ್ಲಿ ಅಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದ ಶ್ರೀ ನಾಯ್ಕರ್ ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ. ಇಂಥ ಅಪರೂಪದ ರಾಜಕಾರಣಿ ಕುರಿತು ಪುಸ್ತಕ ಬರೆಯುವ ಅವಕಾಶ ಸಿಕ್ಕಿದ್ದು ನನಗೆ ಸಹಜವಾಗಿಯೇ ಸಂತೋಷ ಉಂಟು ಮಾಡಿದೆ.
    ಶ್ರೀ ಡಿ. ಕೆ. ನಾಯ್ಕರ್ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತು ಹಲವು ಹುದ್ದೆ, ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಆದರೆ ಅವರಿಗೆ ಮುಖ್ಯಮಂತ್ರಿಯ ಗದ್ದುಗೆ ದೂರವೇ ಉಳಿದದ್ದು ಈಗ ಇತಿಹಾಸ. ಒಂದು ಬಡ, ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದು ರಾಜಕಾರಣದಲ್ಲಿ ನೆಲೆ ಕಂಡುಕೊಂಡು ರಾಜ್ಯದ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಶ್ರೀ ಡಿ. ಕೆ. ನಾಯ್ಕರ್ ಈಗಲೂ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ.

    Original price was: $3.00.Current price is: $1.80.
    Add to basket
  • -39%

    ಗೋರಾ

    0

    ಗೋರಾ
    (ಜೀವನ ಚರಿತ್ರೆ)
    ಅತಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗೋರಾ (ಗೋಪರಾಜು ರಾಮಚಂದ್ರರಾವ) ಜಗತ್ತಿನ ಪ್ರಪ್ರಥಮ ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದರು. ನಾಸ್ತಿಕವಾದದ ಪ್ರಚಾರಕ್ಕಾಗಿ ಪ್ರಪಂಚದಾದ್ಯಂತ ಸಂಚರಿಸಿ ಪ್ರಥಮ ಅಂತರಾಷ್ಟ್ರೀಯ  ನಾಸ್ತಿಕ ಸಮ್ಮೇಳನವನ್ನು ಏರ್ಪಡಿಸಿದರು. ನಾಸ್ತಿಕತೆ ಎಂದರೆ ಕೇವಲ ನಿರೀಶ್ವರ ವಾದಿಗಳೆಂದು  ತಿರಸ್ಕ್ರತ ದೃಷ್ಟಿಯಿಂದ  ಕಾಣುವಂತಹ ವಾತಾವರಣ ಇರುವ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬದುಕು ಹಸನಗೊಳ್ಳಲು ದಾರಿದೀಪ ಎಂದು ತಮ್ಮ ಬದುಕಿನ ಕೊನೆಯ ಘಳಿಗೆಯವರೆಗೂ ‘ಇತ್ಯಾತ್ಮಕ ನಾಸ್ತಿಕವಾದ’ದ ಪರ ಹೋರಾಡಿದ ಅಪರೂಪದ ವ್ಯಕ್ತಿಯ ಜೀವನ ಚರಿತ್ರೆ ಇದು.

    Original price was: $0.36.Current price is: $0.22.
    Add to basket
  • -40%

    ಕಿಂಕಿಣಿ

    0

    ಕಿಂಕಿಣಿ
    ಬದುಕಿನುದ್ದಕ್ಕೂ ಎದುರಾಗುವ ಘಟನೆಗಳ ಸುತ್ತ ಮೂಡುವ ಮನಸ್ಸಿನ ಎಳೆಗಳನ್ನು ಹಸಿಹಸಿಯಾಗಿ ಮೂಡಿಸುವ ಪ್ರಯತ್ನ ಇಲ್ಲಿದೆ.

    Original price was: $0.72.Current price is: $0.43.
    Add to basket
  • -40%

    ಅಬ್ಬಾಲಕ್ಕ ಅಜ್ಜೀಮನೆಗೆ ಹೋಗಿದ್ದು

    0

    ಅಬ್ಬಾಲಕ್ಕ ಅಜ್ಜೀಮನೆಗೆ ಹೋಗಿದ್ದು
    (ಮಕ್ಕಳ ಕತೆಗಳು)
    ವೈದೇಹಿಯವರು ಮಕ್ಕಳನ್ನು ಎದುರಿಗೆ ಕುಡ್ರಿಸಿಕೊಂಡು ಹೇಳಿದಂತಿರುವ  ಈ ಕಥೆಗಳು ಆಕರ್ಷಕ ಶೈಲಿ ನಾಟಕೀಯ ನಿರೂಪಣೆಗಳ ಮೂಲಕ ಮಕ್ಕಳ ಕಥೆಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿವೆ.  ಈ ಕಥೆಗಳು ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಸಂತೋಷ ನೀಡುತ್ತವೆ.  ನಿರಸವಾದ ನೀತಿ ಕಥೆಗಳಿಂದ ತುಂಬಿರುವ ಕನ್ನಡದ ಮಕ್ಕಳ ಕಥೆಗಳಿಗಿಂತ ಇವು ವಿಭಿನ್ನವಾಗಿವೆ.

    Original price was: $0.84.Current price is: $0.50.
    Add to basket