• -40%

    ಯಕ್ಷಗಾನ ಸ್ಥಿತ್ಯಂತರ

    0

    ಯಕ್ಷಗಾನ ಸ್ಥಿತ್ಯಂತರ
    (ಸಂಶೋಧನ ಲೇಖನಗಳು)
    ಯಕ್ಷಗಾನವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರಲು ಸಾಂಸ್ಕೃತಿಕವಾಗಿ ಹತ್ತು ಹಲವು ಕಾರಣಗಳಿವೆ. ಈ ಸ್ಥಿತ್ಯಂತರಗಳನ್ನು ಶೈಕ್ಷಣಿಕ ಶಿಸ್ತು ಹಾಗೂ ವಿಮರ್ಶಾತ್ಮಕ ಒಳನೋಟಗಳಿಂದ ಇಲ್ಲಿನ ಲೇಖನಗಳು ದಾಖಲಿಸಿವೆ. ಯಕ್ಷಗಾನದ ಕುರಿತಂತೆ ಬಂದಿರುವ ಬರವಣಿಗೆಗಳಿಗೆ  ವಿನೂತನ ಆಯಾಮವನ್ನು ನೀಡಬಲ್ಲ ಆಲೋಚನೆಗಳು ಪ್ರಸ್ತುತ ಗ್ರಂಥದ ಲೇಖನಗಳಲ್ಲಿ ಹರಳುಗೊಂಡಿವೆ. 

    Original price was: $2.40.Current price is: $1.44.
    Add to basket
  • -40%

    ತೋಟಿಯ ಮಗ

    0

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತಗಳಿ ಶಿವಶಂಕರ ಪಿಳ್ಳೆ ಅವರ ಮಲಯಾಳಂ ಕಾದಂಬರಿಯ ಕನ್ನಡಾನುವಾದ
    ತೋಟಿಯ ಮಗ
    ಮೋಹನ ಕುಂಟಾರ್
    ತೋಟಿಯುಡೆ ಮಗನ್  ಕಾದಂಬರಿಯು ತಗಳಿ ಶಿವಶಂಕರ ಪಿಳ್ಳೆಯವರ ಬಹುಮುಖ್ಯ ಕಾದಂಬರಿಗಳಲ್ಲಿ ಒಂದು. ಅದನ್ನು ಕುಂಟಾರ್ ಅವರು ಮೂಲ ಸಾಂಸ್ಕೃತಿಕ ಸನ್ನಿವೇಶಕ್ಕೆ ಧಕ್ಕೆಬಾರದಂತೆ ಕನ್ನಡದಲ್ಲಿ ಸಂವಹನ ಸುಲಭವಾಗಿ ಅನುವಾದ ಮಾಡಿದ್ದಾರೆ.

    Original price was: $1.44.Current price is: $0.86.
    Add to basket
  • -40%

    ಮನನ

    0

    ಮನನ
    ಮನನದಲ್ಲಿನ ಪ್ರಬಂಧಗಳು ಹೊಸತನದಿಂದ ಕೂಡಿವೆ. ನಮ್ಮ ಸಮಾಜದ ಸಂಸ್ಕೃತಿಯಲ್ಲಿ ಅನೂಚಾನವಾಗಿ ಬಂದ ಹಲವು ನುಡಿಗಟ್ಟುಗಳು, ಸಂಪ್ರದಾಯಗಳನ್ನು ಮುಕ್ತ ಮನಸ್ಸು ಹಾಗೂ ತಾರ್ಕಿಕ ದೃಷ್ಟಿಯಿಂದ ಅವಲೋಕಿಸಿ, ಅವುಗಳ ಹಿನ್ನೆಯಲ್ಲಿರಬಹುದಾದ ಸತ್ಯಾಂಶಗಳನ್ನು ಹೆಕ್ಕಿ ತೆರೆಯುವುದು ಈ ಪ್ರಬಂಧಮಾಲೆಯ ಉದ್ದೇಶ. ಕಾಲ ಭೈರವ ಎಂಬ ಪುಟ್ಟ ಪ್ರಬಂಧದಲ್ಲಿ ಅವರು ಕಾಲದ ವೈಜ್ಞಾನಿಕ ಸ್ವರೂಪವನ್ನು ಸಾಮಾನ್ಯ ಜನರಿಗೆ ತಿಳಿಯುವ ಭಾಷೆಯಲ್ಲಿ ವಿವರಿಸಿದ್ದಾರೆ. ಶಕುನಗಳಲ್ಲಿನ ನಂಬಿಕೆಯಾಗಲೀ, ನಗುವಿನಂತಹ ಸಹಜ ಪ್ರಕ್ರಿಯೆಯಾಗಲೀ ರಾಶಿಯವರ ಚಿಂತನೆಯ ಮೂಸೆಯಲ್ಲಿ ಕರಗಿ ಹೊರಬರುವಾಗ ಅಪ್ಪಟ ಅಪರಂಜಿಯ ಹೊಳಹನ್ನು ಪಡೆಯುವ ಚಮತ್ಕಾರವನ್ನು ಇಲ್ಲಿ ಕಾಣಬಹುದು. ಅನೇಕ ಕೌತುಕಮಯ ವೈಜ್ಞಾನಿಕ ಚಿಂತನೆಗಳನ್ನು ನಮ್ಮ ಸನಾತನ ಧರ್ಮದ ಒರೆಗಲ್ಲಿನಲ್ಲಿ ತೀಡಿ ಮನನಯೋಗ್ಯವಾದ ಸಾಮ್ಯಗಳನ್ನು ರಾಶಿಯವರು ಈ ಪುಸ್ತಕದಲ್ಲಿ ಓದುಗರಿಗೆ ಉಣಬಡಿಸಿದ್ದಾರೆ.

    Original price was: $1.08.Current price is: $0.65.
    Add to basket
  • -40%

    ಮೆಲುದನಿ

    0

    ಮೆಲುದನಿ
    ಡಾ. ಪುರುಷೋತ್ತಮ ಬಿಳಿಮಲೆಯವರ ಓದು ಎಷ್ಟು ವ್ಯಾಪಕವಾದುದು ಎಂಬುದಕ್ಕೆ ಇಲ್ಲಿನ ಲೇಖನಗಳು ಹಾಗೂ ಮುನ್ನುಡಿಗಳೇ ಸಾಕ್ಷಿ ನುಡಿಯುತ್ತವೆ. ಹಿರಿಯ-ಕಿರಿಯ ಬರಹಗಾರರು ಎಂಬ ಭೇದವಿಲ್ಲದೆ ಎಲ್ಲರನ್ನೂ ಓದುವ, ಓದಿದುರ ಬಗೆಗೆ ನಾಲ್ಕು ಮಾತು ಬರೆದು ಗುಣಾವಗುಣಗಳನ್ನು ನಿರ್ದಾಕ್ಷಿಣ್ಯವಾಗಿ ಹೇಳುವ ಪ್ರಾಮಾಣಿಕ ನಿಷ್ಠೆ ಇಲ್ಲಿನ ಲೇಖನಗಳಲ್ಲಿ ವ್ಯಕ್ತವಾಗಿದೆ. ಸಾಹಿತ್ಯ, ಜಾನಪದ ವಲಯಗಳಲ್ಲಿ ಪ್ರಮುಖ ಚಿಂತಕರೂ ಬರಹಗಾರರೂ ಆದ ಡಾ. ಬಿಳಿಮಲೆಯವರ ಮುನ್ನುಡಿಗಳಲ್ಲಿ ಬರಹಗಾರರು ಸಾಗುವ ದಿಕ್ಕನ್ನು ಖಚಿತವಾಗಿ ತೆರೆದು ತೋರಿಸುವ ಗುಣವಿದೆ. ಎಲ್ಲವನ್ನು ವಸ್ತುನಿಷ್ಠವಾಗಿ ಪರಿಗ್ರಹಿಸುವ ದೃಷ್ಟಿಕೋನವೊಂದು ಇಲ್ಲಿ ಗಮನಸೆಳೆಯುತ್ತದೆ. 

    Original price was: $2.40.Current price is: $1.44.
    Add to basket
  • -40%

    ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು

    0

    ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು
    ಇಲ್ಲಿನ ಲೇಖನಗಳಲ್ಲಿ ದಲಿತರ ಸಮಕಾಲೀನ ಸಮಸ್ಯೆಗಳನ್ನು ಆತ್ಮೀಯವಾಗಿ ವಿಶ್ಲೇಷಿಸ ಲಾಗಿದೆ. ದಲಿತರ ಸಮಸ್ಯೆಗಳು ಮೇಲ್ನೋಟಕ್ಕೆ ತೋರುವುದಕ್ಕಿಂತಲೂ ಭಿನ್ನವಾಗಿ ಅವುಗಳ ಆಂತರ್ಯವನ್ನು ಶೋಧಿಸಿರುವಲ್ಲಿ ಲೇಖಕರ ಸಾಮಾಜಿಕ ಕಾಳಜಿ ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ಚಿಂತನೆಯನ್ನು ಮತ್ತು ದಲಿತ ಲೋಕವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತ ಮತಾಂತರದ ಒಳ ಹೊರಗುಗಳನ್ನು ಸೂಕ್ಷ್ಮವಾಗಿ ಇಲ್ಲಿನ ಬರವಣಿಗೆಗಳಲ್ಲಿ ಓದುಗರ ಮುಂದಿಡಲಾಗಿದೆ. ದಲಿತ ಸಂಸ್ಕೃತಿಯನ್ನು ಕೇಂದ್ರೀಕರಿಸಿ ಬರೆದ ಇಲ್ಲಿನ ಲೇಖನಗಳು ಕನ್ನಡ ವಿಚಾರ ಪ್ರಪಂಚದಲ್ಲಿ ಹೊಸ ತಿಳುವಳಿಕೆಯನ್ನು ಮೂಡಿಸುವಲ್ಲಿ ಸಶಕ್ತವಾಗಿವೆ.

    Original price was: $1.20.Current price is: $0.72.
    Add to basket
  • -40%

    ಬಹುರೂಪ

    0

    ಬಹುರೂಪ
    ಡಾ. ಪುರುಷೋತ್ತಮ ಬಿಳಿಮಲೆಯವರು ಅಂಕಣದ ಮೂಲಕ ಹರಿಯಬಿಟ್ಟ ನಿರಂತರ ಅನುಭವ, ಆಲೋಚನೆಗಳ ಬರಹಗಳು ಒಂದೆಡೆ ಈ ಕೃತಿಯಲ್ಲಿ ದಾಖಲಾಗಿದೆ. ಸ್ಥಳೀಯತೆಯ ಸಂಸ್ಕೃತಿ ಮತ್ತು ಬದುಕಿನ ಆರಂಭದ ದಿನಗಳ ಅನುಭವದ ಮೂಲಕ ನಾಡನ್ನು ದೇಶವನ್ನು ಮತ್ತು ವಿಶ್ವವನ್ನು ಕಾಣುವ ದೃಷ್ಟಿಕೋನ; ಮೌಖಿಕ ಸಂಸ್ಕೃತಿಯನ್ನು ತಳದಲ್ಲಿ ಮತ್ತು ಕೇಂದ್ರದಲ್ಲಿ ಇಟ್ಟುಕೊಂಡು ಅದರ ಮೂಲಕ ಪುರಾಣ ಮತ್ತು ಶಿಷ್ಟಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು; ಯಕ್ಷಗಾನ ರಂಗಭೂಮಿಯ ಆಕೃತಿಯ ಮೂಲಕ ರಾಷ್ಟ್ರೀಯ ಮತ್ತು ವಿಶ್ವದ ರಂಗಭೂಮಿ ಕಲೆಗಳನ್ನು ಅಭ್ಯಾಸ ಮಾಡುವುದು; ಭಾಷೆ ಮತ್ತು ನಾಡಿನ ಅನನ್ಯತೆಯನ್ನು ಸ್ಥಾಪಿಸಲು ನಿರ್ದಿಷ್ಟ ಯೋಜನೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು; ಜಾತೀಯತೆ ಮತ್ತು ಕೋಮುವಾದಗಳು ಜನಪದ ಸಂಸ್ಕೃತಿಯ ಮೇಲೆ ನಡೆಸುತ್ತಿರುವ ಧಾಳಿಯನ್ನು ಸಂಸ್ಕೃತಿಯ ಒಳಗಿನಿಂದಲೇ ಪ್ರತಿರೋಧಿಸುವುದು; ಪರಂಪರೆಯ ಸಂಸ್ಕೃತಿಯನ್ನು ಗಲೀಜು ಮಾಡುವ ಆಧುನಿಕತೆಯ ಹುನ್ನಾರಗಳನ್ನು ಬಯಲು ಮಾಡುವುದು-ಇವೆಲ್ಲವನ್ನೂ ತಾಳಮದ್ದಲೆಯ ಅರ್ಥಗಾರಿಕೆಯಂತೆ ಹರಿಕತೆಯ ಪ್ರವಚನದಂತೆ ತುಂಬ ಆಪ್ತವಾಗಿ ಸ್ವಾರಸ್ಯಕರವಾಗಿ ಅನುಭವ ಕಥನ ಮತ್ತು ಗ್ರಂಥ ಪಠನಗಳ ಉಪಕತೆಗಳೊಂದಿಗೆ ಓದುಗರ ಜೊತೆಗೆ ಹಂಚಿಕೊಳ್ಳುವುದು. ಇದು ‘ಬಿಳಿಮಲೆ ಬಹುರೂಪ’ದ ಆಂಜನೇಯ ಶಕ್ತಿ.

    Original price was: $2.40.Current price is: $1.44.
    Add to basket
  • -40%

    ಮಾಟದೊಳಗಣ ನೋಟ

    0

    ಮಾಟದೊಳಗಣ ನೋಟ
    (ಶಿಲ್ಪಕಲೆ ಕುರಿತ ಬರೆಹಗಳು)
    ವಿಭಿನ್ನ ಮಾಧ್ಯಮಗಳ ಶಿಲ್ಪಕಲೆಗಳು ಭಾರತೀಯ ಸಂಸ್ಕೃತಿಯ ಅವಿಸ್ಮರಣೀಯ ಕುರುಹುಗಳು. ಹಾಗಾಗಿ ಸಮಕಾಲೀನ ದಿನಗಳಲ್ಲಿಯೂ ಸಾಂಪ್ರದಾಯಿಕ ಶಿಲ್ಪ ಕಲೆಗಳ ಬಗೆಗೆ ಪ್ರೀತಿ, ಆರಾಧನಾಭಾವ ಉಳಿದುಕೊಂಡಿದೆ. ಸಾಂಪ್ರದಾಯಿಕ ಶಿಲ್ಪ ಕಲೆಗಳ ರಚನಾ ವಿಧಾನ, ಹಿನ್ನೆಲೆ, ಅರ್ಥ, ಸ್ವರೂಪ ಇವುಗಳನ್ನು ಉಳಿಸಿಕೊಂಡು ಬಂದಿರುವ ಮನುಷ್ಯನ ನಂಬಿಕೆಗಳು ಇತ್ಯಾದಿಗಳೆಲ್ಲ “ಮಾಟದೊಳಗಣ ನೋಟ” ಪುಸ್ತಕದ ಲೇಖನಗಳಲ್ಲಿ ದಾಖಲಾಗಿವೆ.

    Original price was: $1.44.Current price is: $0.86.
    Add to basket
  • -40%

    ನಾದದ ನವನೀತ

    0

    ನಾದದ ನವನೀತ
    ಬೇಂದ್ರೆಯವರ ಕಾವ್ಯವನ್ನು ಕುರಿತಂತೆ ಆಳವಾದ ಅಧ್ಯಯನದಿಂದ ರೂಪುಗೊಂಡ ಲೇಖನಗಳು ಪುಸ್ತಕದಲ್ಲಿ ಅಡಕವಾಗಿವೆ. ನಾದದ ನವನೀತದಲ್ಲಿ ಹೊರಹೊಮ್ಮುವ ಭಾವಗೀತದ ಬಗೆಗಿನ ಬೇಂದ್ರೆಯವರ ಕಾವ್ಯತತ್ವವನ್ನು ವಿಸ್ತರಿಸುವ ಇಲ್ಲಿನ ಬರವಣಿಗೆ ಯಾವುದೇ ಕಾವ್ಯಾಭ್ಯಾಸಿಗೆ ಉಪಯುಕ್ತವಾಗಿದೆ. ಬೇಂದ್ರೆಯವರ ಕಾವ್ಯ ಮಥಿಸಿದಷ್ಟು ನವನೀತವಾಗಿ ಭಾವ, ಅರ್ಥ, ಗ್ರಾಹ್ಯವಾಗುವ ಪರಿ ವಿಸ್ಮಯಕಾರಿಯಾಗಿದೆ ಎಂಬುದನ್ನು ಪ್ರಸ್ತುತ ಕೃತಿಯ ಓದು ಖಚಿತ ಪಡಿಸುತ್ತದೆ.

    Original price was: $1.92.Current price is: $1.15.
    Add to basket
  • -40%

    ಬರಿ ನಿದ್ದೆಯಲ್ಲವೊ ಅಣ್ಣಾ!

    0

    ಬರಿ ನಿದ್ದೆಯಲ್ಲವೊ ಅಣ್ಣಾ!
    ವಿಷಯ-ವಿಚಾರ-ವಿಮರ್ಶೆ-ವಿಡಂಬನೆ-ವಿನೋದ
    ಡಾ. ಬಿ ಎಂ ಪುಟ್ಟಯ್ಯನವರ ‘ಬರಿ ನಿದ್ರೆಯಲ್ಲವೊ ಅಣ್ಣಾ!’ ಕೃತಿ ಸುತ್ತಮುತ್ತಲಿನ ಸಮಾಜದ ಜೊತೆ ಒಡನಾಟದಿಂದ ರೂಪುಗೊಂಡ ಬರವಣಿಗೆ. ಇಲ್ಲಿನ ಬರವಣಿಗೆ ಗಂಭೀರವಾದ ವಿಷಯವನ್ನು ವೈನೋದಿಕವಾಗಿ ನೋಡುವ ದೃಷ್ಟಿಕೋನದಿಂದಾಗಿ ಓದುಗರನ್ನು ಸೆಳೆಯುತ್ತವೆ. ಇಲ್ಲಿನ ಅನುಭವಗಳು ಎಲ್ಲರದೂ ಆಗಿದೆ. ಆದರೆ ಅದನ್ನು ನೋಡುವ ದೃಷ್ಟಿಕೋನದಿಂದಾಗಿ ಇಲ್ಲಿನ ಬರೆಹ ಅನನ್ಯವಾಗಿ ಓದುಗರಲ್ಲಿ ತಕ್ಷಣ ನಗೆಯುಕ್ಕಿಸುತ್ತವೆ. ಹಾಗೆಯೇ ಚಿಂತನೆಗೂ ಗುರಿಮಾಡುತ್ತವೆ ಎನ್ನುವುದೇ ವಿಶೇಷ.

    Original price was: $1.92.Current price is: $1.15.
    Add to basket
  • -40%

    ಜುಲೈ 22 1947

    0

    ಜುಲೈ ೨೨ ೧೯೪೭
    ಡಾ. ಸರಜೂ ಕಾಟ್ಕರ್
    ದೇಶಪ್ರೇಮವನ್ನು ಮನದಲ್ಲಿ ತುಂಬಿಕೊಂಡು ಜೀವನಪೂರ್ತಿ ನಿಷ್ಠಾವಂತರಾಗಿ ಬಾಳುವ ಅನೇಕರು ದೇಶದಲ್ಲಿರಬಹುದು. ಎಲೆಮರೆಯ ಕಾಯಂತೆ ಬದುಕಿದ ಸತ್ಯಪ್ಪನಂತಹ ದೇಶಭಕ್ತನ ಆದರ್ಶವನ್ನು ಕೇಂದ್ರ ಪ್ರಜ್ಞೆಯಾಗಿಟ್ಟುಕೊಂಡು ಮೂರು ತಲೆಮಾರುಗಳ ಕಥನವನ್ನು ಚಿತ್ರಿಸುವ ಕಾದಂಬರಿ ಇದು. ಇದರಲ್ಲಿ ಮೂರು ತಲೆಮಾರುಗಳ ಸಾಮಾಜಿಕ, ರಾಜಕೀಯ ಇತಿಹಾಸವೂ ಆನುಷಂಗಿಕವಾಗಿ ದಾಖಲಾಗಿದ್ದು, ಇದು ಕೇವಲ ಸತ್ಯಪ್ಪನ ಕತೆ ಮಾತ್ರವಾಗುಳಿಯದೆ ತಲೆಮಾರುಗಳ ನಡುವೆ ದೇಶನಿಷ್ಠೆಯ ಬಗೆಗಿನ ಸಂಘರ್ಷದ ಕತೆಯೂ ಆಗಿದೆ.

    Original price was: $1.20.Current price is: $0.72.
    Add to basket
  • -40%

    ಬಾಜೀರಾವ್ ಮಸ್ತಾನಿ

    0

    ಬಾಜೀರಾವ್ ಮಸ್ತಾನಿ
    ಡಾ. ಸರಜೂ ಕಾಟ್ಕರ್
    ಬಾಜೀರಾವ್ ಮಸ್ತಾನಿ ಒಂದು ಅದ್ಭುತವಾದ ಪ್ರೇಮದ ಕಥೆ. ಪುಣೆಯಲ್ಲಿ ಮಸ್ತಾನಿ ಮಹಲ್ ಎಂಬ ವಾಸ್ತು ಇದ್ದರೂ ಇತಿಹಾಸದ ಅಧಿಕೃತ ದಾಖಲೆಯಲ್ಲಿ ಎಲ್ಲೂ ಮಸ್ತಾನಿಯ ಉಲ್ಲೇಖವೇ ಬರುವುದಿಲ್ಲ. ಬಾಜೀರಾವ್ ನಿಂದ ಆಕೆಗೆ ಆದ ಮಗ ಸಮಶೇರ ಬಹಾದ್ದೂರ ಪಾನೀಪತ್ ದಲ್ಲಿ ನಡೆದ ಯುದ್ಧದಲ್ಲಿ ಕೊಲ್ಲಲ್ಪಟ್ಟ ಎಂದು ಹೇಳುವ ಇತಿಹಾಸ ಮಸ್ತಾನಿಯ ಬಗ್ಗೆ ಜಾಣ ಮೌನ ತೋರಿಸುತ್ತದೆ. ಆದರೆ ಲೋಕ ಸಾಹಿತ್ಯದಲ್ಲಿ, ಜಾನಪದ ಕಥಾ ಕಥನಗಳಲ್ಲಿ ಅಲ್ಲಲ್ಲಿ ಬಾಜೀರಾವ್-ಮಸ್ತಾನಿಯರ ಕಥೆ ಉಲ್ಲೇಖಿಸಲ್ಪಡುತ್ತದೆ.

    Original price was: $1.44.Current price is: $0.86.
    Add to basket
  • -40%

    ಭಯಮುಕ್ತ ಬದುಕಿನೆಡೆಗೆ…

    0

    ಭಯಮುಕ್ತ ಬದುಕಿನೆಡೆಗೆ…
    ಇಂಗ್ಲಿಶ್ ಮೂಲ: ಸಂತೋಷ್ ನಂಬಿಯಾರ್
    ಕನ್ನಡಾನುವಾದ: ಶೀನಾ ನಾಡೋಳಿ

    ಪ್ರೀತಿ, ಸಂತೋಷ, ಸ್ವಾತಂತ್ರ್ಯ, ಕರುಣೆ ಹಾಗೂ ಕ್ರಿಯಾತ್ಮಕವಾದ ಬದುಕಿಗೆ ಸವೆದ ದಾರಿ ಇಲ್ಲ. ಇದು ಈಗ, ವರ್ತಮಾನದಲ್ಲಿ, ಸಮಯರಹಿತ ಕ್ಷಣದಲ್ಲಿ ಮಾತ್ರ ಸಂಭವಿಸಲು ಸಾಧ್ಯ. ಯೋಚನೆಯ ಚಲನೆ ನಿಂತು ಸುಳ್ಳು ‘ಅಹಂ’ ಕರಗಿದಾಗ ಭಯವು ಇಲ್ಲವಾಗುವುದು…. ಎಂದು ಹೇಳುತ್ತ ನಂಬಿಯಾರ್ ಅವರು ಎಲ್ಲರ ಯೋಚನೆಗಳು ಹೊಸ ದಿಕ್ಕಿನತ್ತ ತೆರೆದುಕೊಳ್ಳುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ.

    Original price was: $0.60.Current price is: $0.36.
    Add to basket
  • -40%

    ಅಂತರ್ಮುಖ

    0

    ಅಂತರ್ಮುಖ
    ಜಗತ್ತು ಅನೇಕ ವಿಸ್ಮಯಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ವಾಸ್ತವದಲ್ಲಿ ಗೋಚರವಾಗುವ ಸಂಗತಿಗಳೆಲ್ಲವೂ ವಿಸ್ಮಯಕರವೇ ಆಗಿವೆ. ಆದರೆ ಅವುಗಳನ್ನು ನೋಡುವ ಕಣ್ಣು ಮಾತ್ರ ಬೇಕು. ವೀಣಾ ಬನ್ನಂಜೆ ಅವರು ಅಂತಹ ಅನೇಕ ಸೋಜಿಗದ ಸಂಗತಿಗಳನ್ನು ಕಾಣುವ ದೃಷ್ಟಿಯುಳ್ಳವರು. ಇಲ್ಲಿನ ಲೇಖನಗಳಲ್ಲಿ ವಾಸ್ತವದ ಅನೇಕ ಘಟನೆಗಳನ್ನು ಅನುಭಾವದ ವತಿಯಿಂದ ಅಗೋಚರವಾದ ಅಮೂರ್ತದೆಡೆಗೆ ವಿಸ್ತರಿಸಿಕೊಳ್ಳುವ ದಾವಂತವನ್ನು ಕಾಣಬಹುದು. ವೀಣಾ ಅವರ ಬರವಣಿಗೆ ಹಾಗೂ ಚಿಂತನೆಯ ವೈಶಿಷ್ಟ್ಯವನ್ನು ಇಲ್ಲಿನ ಲೇಖನಗಳು ಸ್ಫುಟವಾಗಿ ದಾಖಲಿಸುವ ಕಾವ್ಯಾತ್ಮಕ ರಚನೆಗಳಾಗಿ ಗಮನ ಸೆಳೆಯುತ್ತವೆ.

    Original price was: $0.96.Current price is: $0.58.
    Add to basket
  • -40%

    ರೂಪಾಯಿಕ್ಕೊಂದ ಕವನ

    0

    ರೂಪಾಯಿಕ್ಕೊಂದ ಕವನ 
    ಇಲ್ಲಿಯ ಕವನಗಳು ತಮ್ಮದೇ ಆದ ದಾಟಿಯಲ್ಲಿ ಸಮಾಜಕ್ಕೆ ಕಿವಿಮಾತು. ಮಾಮಿರ್ಕವಾಗಿ ಚಾಟಿ ಏಟನ್ನು ನೀಡುವದರ ಜೊತೆಗೆ ಸಮಾಜ ತಿದ್ದುವ ಕೆಲಸವನ್ನು ಮಾಡಿದ್ದು ಕಂಡು ಬರುತ್ತದೆ. ಮುಂಬೈ ದಾಳಿ ತಿರುಗೇಟು ನಾನು ಮತ್ತು ನನ್ನ ಮನಸು ಈ ಕವಿತೆಗಳು ಮತ್ತು ಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸಿದ್ದು ಬಿಸಿರೊಟ್ಟಿ ಕವನ ಆಸೆಯನ್ನು ಪೂರೈಸಿಕೊಳ್ಳಲು ಸಮಯ ಅಡ್ಡ ಗೊಡೆಯಾಗಿ ನಿಂತು ನಮಗೆ ಅನುದಿನದ ಬದುಕಿನಲ್ಲಿ ಹೇಗೆ ಛೇಡಿಸುತ್ತದೆ ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
    ಕಾಲ ಎನ್ನುವ ಕವನದಲ್ಲಿ ಕಾಲ ಎಂದೂ ಯಾರೂ ಹೇಳಿದರೂ ನಿಲ್ಲದೇ ಓಡುವ  ಎಂದೂ ನಿಲ್ಲದ ಕಾಲನ ಆಟವನ್ನು ತುಂಬಾ ಚೆನ್ನಾಗಿ ಚಿತ್ರಿಸಲಾಗಿದೆ.

    Original price was: $0.72.Current price is: $0.43.
    Add to basket
  • -40%

    ಕಾತರ

    0

    ಕಾತರ
    ಕವನ ಸಂಕಲನ
    ಶ್ರೀಯುತ ನಜೀರ ಚಂದಾವರ ಅವರ ‘ಕಾತರ’ ಕವನ ಸಂಕಲನ ತುಂಬಾ ವರ್ಷದ ಹಿಂದೆಯೇ ಪ್ರಕಟಗೊಂಡಿದ್ದು, ಇದು ಅವರ ಕಾಲೇಜು ಜೀವನದಲ್ಲಿ ಬರೆದಿದ್ದು.  ತಾವು ಕಂಡ ಸಮಾಜದ ಅಂಕುಡೊಂಕನ್ನೆ ತಮ್ಮ ಕವನದಲ್ಲಿ ದಾಖಲಿಸಿದ್ದಾರೆ. 

    Original price was: $1.08.Current price is: $0.65.
    Add to basket
  • -40%

    ಝೆನ್ ವೀರ ಹೈಕು

    0

    ಝೆನ್ ವೀರ ಹೈಕು
    ಹೈಕುಗಳಲ್ಲಿ ಶ್ರೀ ಚನ್ನವೀರ ಶರಣರ ಶ್ರೀನುಡಿಗಳು
    ‘ಶ್ರೀನುಡಿ’ಗಳಲ್ಲಿಯ ೨೦೦ ವಿಚಾರಗಳನ್ನು ಇಲ್ಲಿ ಎತ್ತಿಕೊಂಡು ಅವುಗಳನ್ನು ಹೈಕುಗಳಲ್ಲಿ ಬರೆಯಲಾಗಿದೆ.  ಉದ್ಬೋಧ ಕೃತಿಯಾದ ‘ಝೆನ್ ವೀರ ಹೈಕು’ ಡಾ.ಸರಜೂ ಕಾಟ್ಕರ್ ಅವರಿಂದ ರಚಿತವಾಗಿದೆ. ಝೆನ್ ಕಥಾ ಸಾಹಿತ್ಯವು ವಿಷಿಕ್ಷ್ಟವಾದದ್ದು. ಇಲ್ಲಿ ಗುರುಶಿಷ್ಯರ ಸಂಭಾಷಣೆ ನಡೆಯುತ್ತದೆ. ಗುರುವಾದವನು ಶಿಷ್ಯನ ತಲೆಯಲ್ಲಿ ವಿಚಾರಗಳೆಂಬ ಹುಳುಗಳನ್ನು ಬಿಡುತ್ತಾನೆ . ಶಿಷ್ಯ  ಅದನ್ನು ಹೇಗಾದ್ರೂ ಅರ್ಥೈಸಿಕೊಳ್ಳಬಹುದು. ವಿಚಾರಗಳೆಂಬ ಹುಳುಗಳು ಸದಾಕಾಲ ಶಿಷ್ಯನ ತಲೆಯನ್ನು ತಿನ್ನುತ್ತಲೇ ಇರುತ್ತವೆ. ಅವನು ಅರ್ಥೈಸಿಕೊಂಡಷ್ಟು ಗುರುವಿನ ಸೂತ್ರರೂಪಿ ನಿರ್ವಚನಗಳು ವಿಸ್ತಾರವನ್ನು ಪಡ್ದೆದುಕೊಳ್ಳುತ್ತಾ ಹೋಗುತ್ತವೆ. ಹೀಗೆಂದು ಬಗೆದು ಹಿರಿಯರಾದ ಡಾ.ಸರಜೂ ಕಾಟ್ಕರ್ ‘ಹೈಕು’ ಪ್ರಕಾರದಲ್ಲಿ ಚನ್ನವೀರ ಶರಣರ ಶ್ರೀನುಡಿಗಳಿಗೆ ಹೊಸ ಉಡುಗೆಯನ್ನು  ತೊಡಿಸಿದ್ದಾರೆ. ಚನ್ನವೀರ ಶರಣರನ್ನು ಝೇನ್ ವೀರ ಶರಣರೆಂದು ಪರಿಭಾವಿಸಿದ್ದಾರೆ. 

    Original price was: $0.72.Current price is: $0.43.
    Add to basket
  • -40%

    ಬದುಕಲು ಅರ್ಹತೆ ಬೇಕು

    0

    ಬದುಕಲು ಅರ್ಹತೆ ಬೇಕು
    (ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ನೀಡಿದ ಪ್ರವಚನಗಳ ಸಾರ ಸಂಗ್ರಹ)
    ಒಂದು ಸಾಮಾನ್ಯ  ಸಂಸ್ಥೆಯ  ಸದಸ್ಯತ್ವವನ್ನು ಪಡೆಯಲು, ಒಂದು ಶಾಲೆಯನ್ನು  ಸೇರಲು , ಗಳಿಸಲು ಒಂದು ನೌಕರಿಯನ್ನು  ಪಡೆಯಲು . ಅವುಗಳಿಗೆ ತಕ್ಕ ಅರ್ಹತೆಯನ್ನು  ಪಡೆಯಬೇಕು.  ಹಾಗೆ ಅರ್ಹತೆ ಇದೆ ಎಂದು ಹೇಳುವ ಪ್ರವೇಶ ಪತ್ರವನ್ನು ತುಂಬಿ ಕೊಡಬೇಕು. ಅಗಾ ಸದಸ್ಯತ್ವ ಕೊಡಬೇಕೆ ಬೇಡವೇ ? ಶಾಲೆಗೆ ಸೆರಿಸಿಕೊಳ್ಳಬೇಕೆ ಬೇಡವೇ ? ನೌಕರಿಗೆ ಅರ್ಹನೆ ಎಂದು ವಿಚಾರಿಸುತ್ತಾರೆ. ಅಂಥದ್ದರಲ್ಲಿ ಭೂಮಿಯ ಮೇಲೆ ಹುಟ್ಟಿ ಬಂಡ ಮೇಲೆ, ಇಲ್ಲಿ ಬದುಕಲು ಅರ್ಹತೆಯನ್ನು  ಪಡೆಯಲು ಪ್ರವೇಶಪತ್ರ ಬೇಡವೇ ?

    Original price was: $0.84.Current price is: $0.50.
    Add to basket
  • -19%

    ಉಘೇ ಉಘೇ

    0

    ಉಘೇ ಉಘೇ
    ಕಥಾ ಸಂಕಲನ
    ನನಗೆ ಬರೆಯುವುದಕ್ಕಿಂತಲೂ ಓದುವುದೇ ಇವತ್ತಿಗೂ ಹೆಚ್ಚು ಇಷ್ಟದ ವಿಷಯ. ಆದರೂ ಬಿಡುವು ಸಿಕ್ಕಾಗಲೆಲ್ಲಾ ನನ್ನ ತಲೆಯಲ್ಲಿ ವರ್ಷಗಟ್ಟಲೇ ಗಿರಕಿ ಹೊಡೆಯುವ ಕಥೆಗಳನ್ನು ಬರೆದೆ. ಅದರಲ್ಲಿ ‘ಟ್ಯೂಷನ್ ಫೀ’ ಎಂಬ ಕತೆ ನನಗೆ ಒಂದು ಬಹುಮಾನವನ್ನು ಮತ್ತು ಅಪಾರ ಜನಮನ್ನಣೆಯನ್ನು ತಂದು ಕೊಟ್ಟಿತು. ಈ ಕತೆಯಿಂದ ನಾನು ಕತೆಗಾರ ಎಂದು ಗುರುತಿಸಿಕೊಳ್ಳಲು ಸಾಧ್ಯವಾಯಿತು. ಮತ್ತಷ್ಟು ಉತ್ತಮ ಕತೆಗಳನ್ನು ಬರೆಯಬೇಕೆಂಬ ಹಂಬಲದಿಂದಲೇ ಬಹುತೇಕ ಎಲ್ಲಾ ಉತ್ತಮ ಕನ್ನಡ ಮತ್ತು ಇಂಗ್ಲೀಷ್ ಕತೆಗಾರರನ್ನು ಸಾಧ್ಯವಾದಷ್ಟು ಓದಿಕೊಂಡೆ. ಅದರ ಫಲವೇ ಈ ಸಂಕಲನ.
    -ಗುಬ್ಬಚ್ಚಿ ಸತೀಶ್

    Original price was: $0.72.Current price is: $0.58.
    Add to basket
  • -40%

    ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ

    0

    ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ
    ಇಲ್ಲಿನ ಲೇಖನಗಳಲ್ಲಿ ದಲಿತರ ಸಮಕಾಲೀನ ಸಮಸ್ಯೆಗಳನ್ನು ಆತ್ಮೀಯವಾಗಿ ವಿಶ್ಲೇಷಿಸಿಲಾಗಿದೆ. ದಲಿತರ ಸಮಸ್ಯೆಗಳು ಮೇಲ್ನೋಟಕ್ಕೆ ತೋರುವುದಕ್ಕಿಂತಲೂ ಭಿನ್ನವಾಗಿ ಅವುಗಳ ಅಂತರ್ಯವನ್ನು ಶೋಧಿಸಿರುವಲ್ಲಿ ಲೇಖಕರ ಸಾಮಾಜಕ ಕಾಳಜಿ ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ಚಿಂತನೆಯನ್ನು ಮತ್ತು ದಲಿತ ಲೋಕವನ್ನು ಚಾರಿತ್ರಿಕ ಹಿನ್ನಲೆಯಲ್ಲಿ ವಿಶ್ಲೇಷಿಸುತ್ತ ಮತಾಂತರದ ಒಳ ಹೊರಗುಗಳನ್ನು ಸೂಕ್ಷ್ಮವಾಗಿ ಇಲ್ಲಿನ ಬರವಣಿಗೆಗಳಲ್ಲಿ ಓದುಗರ ಮುಂದಿಡಲಾಗಿದೆ. ದಲಿತ ಸಂಸ್ಕತಿಯನ್ನು ಕೇಂದ್ರೀಕರಿಸಿ ಬರೆದ ಇಲ್ಲಿನ ಲೇಖನಗಳು ಕನ್ನಡ ವಿಚಾರ ಪ್ರಪಂಚದಲ್ಲಿ ಹೊಸ ತಿಳುವಳಿಕೆಯನ್ನು ಮೂಡಿಸುವಲ್ಲಿ ಸಶಕ್ತವಾಗಿದೆ.

    Original price was: $2.40.Current price is: $1.44.
    Add to basket
  • -40%

    ತೇರು

    0

    ತೇರು ಕೃತಿಯನ್ನು ನಾವು ನೀಳ್ಗತೆಯಂತೆಯೂ ನೋಡಬಹುದು. ಅಥವಾ ಅದನ್ನು ಒಂದು ಜಾನಪದ / ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು.
    ತೇರು ಕೃತಿಯೂ ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭ ವಾಗುತ್ತದೆ. ಹೊಸ ದೇಸಾಯಿ ಧರಮನಟ್ಟಿಯಲ್ಲಿ ತನ್ನ `ಮನೆ ದೇವರಾದ’ ವಿಠ್ಠಲನ ಒಂದು ಭವ್ಯ ದೇವಾಲಯವನ್ನು ಕಟ್ಟಿಸುತ್ತಾನೆ. ಹೊನ್ನ ಕಳಸದ, ಬೃಹತ್ ಕಲ್ಲಿನ ಚಕ್ರಗಳ, ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ.

    Original price was: $2.04.Current price is: $1.22.
    Add to basket
  • -40%

    ತಂದೆಯ ಕಣ್ಣಲ್ಲಿ  ಪಂ. ಭೀಮಸೇನ ಜೋಶಿ

    0

    ತಂದೆಯ ಕಣ್ಣಲ್ಲಿ  ಪಂ. ಭೀಮಸೇನ ಜೋಶಿ
    ಈ ಮನೋಹರ ಗ್ರಂಥಮಾಲೆ ೧೯೫೮ – ೬೦ ರಲ್ಲಿ ಗ್ರಂಥಮಾಲೆಯು ನಡೆದು ಬಂದ ದಾರಿ ಸಂಪುಟಗಳನ್ನು ಪ್ರಕಟಿಸಿತ್ತು. ಈ ವ್ಯಕ್ತಿಚಿತ್ರ ೩ ನೇ ಸಂಪುಟದಲ್ಲಿ ಪ್ರಕಟವಾಗಿತ್ತು.ಸುಮಾರು ೫೦ ವರ್ಷಗಳ ನಂತರ ಪಂ.ಭೀಮಸೇನ ಜೋಷಿಯವರು ಮುಗಿಲೆತ್ತರಕ್ಕೆ ಬೆಳೆದು “ಭಾರತ  ರತ್ನ” ಪ್ರಶಸ್ತಿಯನ್ನು ಅಲಂಕರಿಸಿದ ಮೇಲೆ ಅವರ ಬಗ್ಗೆ ಸಾಕಷ್ಟು ಲೇಖನಗಳು ಪ್ರಕಟವಾಗತೊಡಗಿದವು.  ಪಂ.ಭೀಮಸೇನ ಜೋಷಿಯವರು ೨೪ ಜನೇವರಿ ೨೦೧೧ ರಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹೀಗಾಗಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ.

    Original price was: $0.48.Current price is: $0.29.
    Add to basket
  • -20%

    ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…

    0

    ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಸಮಯದಲ್ಲಿ . ಬೇಡನ ಬಣ ಗುರಿ ಜೀವನ್ಮರಣದ ಹೋರಾಟದಲ್ಲಿ ಸಿಲುಕಿದರೂ, ಆತ್ಮವಿಶ್ವಾಸದಿಂದ, ಹಲವು ಅಮೃತ ಹಸ್ತಗಳ ಪ್ರೀತಿಯ ಶುಶ್ರೂಷೆ, ಹರಕೆ-ಹಾರೈಕೆಗಳಿಂದ ಮತ್ತೆ ಬಾನಿಗೆ ಹಾರುವ ಹಕ್ಕಿಯ ಕಥೆಯಂತೆ ಈ ಪುಸ್ತಕದ ಲೇಖಕಿಯ ಜೀವನಗಾಥೆ. ಕ್ಯಾನ್ಸರ್ ಎಂಬ ವ್ಯಾಘ್ರನನ್ನು ತನ್ನ ಛಲದಿಂದ ಎದುರಿಸಿ ಹಿಮ್ಮೆಟ್ಟಿದ ಪುಣ್ಯಕೋಟಿಯ ಕಥೆಯೂ ಹೌದು.

    Original price was: $1.20.Current price is: $0.96.
    Add to basket
  • -20%

    ಭಾವದ ಅಂಬಾರಿ

    0

    ಭಾವದ ಅಂಬಾರಿ
    ‘ಭಾವದ ಅಂಬಾರಿ’ ಎಂಬುದು ಅವರ ಒಂಬತ್ತು ಕಥೆಗಳ ಸಂಕಲನ. ಇದರಲ್ಲಿನ ಕೆಲವು ಕಥೆಗಳು ‘ಮಂಗಳ’, ‘ಕರ್ಮವೀರ’ ದಂಥ ವಾರಪತ್ರಿಕೆಗಳಲ್ಲಿ, ‘ಅಡ್ವೈಸರ್’ನಂಥ ಮಾಸಪತ್ರಿಕೆಯಲ್ಲಿ ಈಗಾಗಲೇ ಬೆಳಕು ಕಂಡಿವೆ. ಹೀಗಾಗಿ ಅವರು ಉದಯೋನ್ಮುಖ ಕಥೆಗಾರರಾಗಿಯೂ ಹೊಮ್ಮುತ್ತಿರುವುದನ್ನು ದಾಖಲಿಸಿದ್ದಾರೆ. ಅವರ ಈ ಸಂಕಲನ ಇದಕ್ಕೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ.

    Original price was: $1.20.Current price is: $0.96.
    Add to basket
  • -40%

    ಕಲಬುರ್ಗಿ ನೆನಪು

    0

    ಕಲಬುರ್ಗಿ ನೆನಪು
    ನಾಡಿನ ಹಿರಿಯ ಸಂಶೋಧಕರಾಗಿದ್ದ ದಿವಂಗತ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಸ್ಮರಿಸಿಕೊಳ್ಳುವ ನಿಮಿತ್ಯವಾಗಿ ಅಕ್ಟೋಬರ್ ೪ ೨೦೧೫ ರಂದು ಏರ್ಪಡಿಸಿದ್ದ ವಿಚಾರ ಸಂಕೀರ್ಣದಲ್ಲಿ ಮಂಡಿಸಿದ ಪ್ರಬಂಧಗಳು  ಇದರಲ್ಲಿವೆ. ಕಲಬುರ್ಗಿ ಅವರು ಮಾಡಿದ ಕೆಲಸವನ್ನು ವಿವಿಧ ಕ್ಷೇತ್ರದ ವಿದ್ವಾಂಸರು ಅಭ್ಯಾಸ ಪೂರ್ಣ ಪ್ರಬಂಧಗಳ ಜೊತೆಗೆ ಇನ್ನೂ ಕೆಲವು ಪ್ರಬಂಧಗಳನ್ನು ಸೇರಿಸಿ ಈ ಗ್ರಂಥ ಹೊರತರಲಾಗಿದೆ.

    Original price was: $1.62.Current price is: $0.97.
    Add to basket
  • -21%

    ಬೆಳದಿಂಗಳು ಮತ್ತು ಮಳೆ

    0

    ಬೆಳದಿಂಗಳು ಮತ್ತು ಮಳೆ
    ‘ಐದು ನಿಮಿಷದಲ್ಲಿ ಐದು ಕತೆಗಳು, ಊಹಿಸಲಾಗದ ಅಂತ್ಯಗಳು’ – ದಟ್ಸ್ ಕನ್ನಡ ಡಾಟ್ ಕಾಂ
    ಈ ಸಂಕಲನದಲ್ಲಿ ಜೀವನದ ಸಮಗ್ರ ಮತ್ತು ಪರಿಪಕ್ವವಾದ ಮನೋಭಾವನೆ ಮೂಡಿಬಂದಿರುವುದನ್ನು ಕಾಣಬಹುದಾಗಿದೆ. ಇಲ್ಲಿನ ಕಥೆಗಳಲ್ಲಿ ವಿರಳ, ವಿಷಾದ, ಸೂಕ್ಷ್ಮ ಸಂವೇದನಾಶೀಲ ಜೀವನದರ್ಶನ ಪಡೆಯಬಹುದು. ಇಲ್ಲಿಯ ಚುಟುಕು ಕಥೆಗಳು ಕೆಲವೇ ಕ್ಷಣದಲ್ಲಿ ಓದಬಹುದಾದರೂ ಇಡೀ ದಿನ ಯೋಚಿಸುವಂತೆ ಮಾಡುತ್ತವೆ.
    ಈ ಕಥೆಗಳಲ್ಲಿ ಸಾಮಾಜಿಕ ಕಾಳಜಿಯ ಸ್ಪರ್ಶ, ಪ್ರಗತಿಪರ ಚಿಂತನೆಗಳ ಮನೋಭಾವನೆ, ಪ್ರಕೃತಿ ಬಗೆಗಿನ ಒಲವು ಮತ್ತು ಸಮಕಾಲೀನ ವಿದ್ಯಮಾನಗಳ ಅಂತರ್ಗತದೃಷ್ಟಿ, ಗತಕಾಲದ ನೆನಪು ಪ್ರಸ್ತುತ ವ್ಯವಸ್ಥೆಯ ಕೈಗನ್ನಡಿಯಾಗಿ ಮೂಡಿಬಂದಿವೆ.

    Original price was: $0.48.Current price is: $0.38.
    Add to basket
  • -40%

    ಶ್ರೀ ಉತ್ತರಾದಿಮಠ

    0

    ಶ್ರೀ ಉತ್ತರಾದಿಮಠ  :

    ಶ್ರೀ ಮಜ್ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲಮಹಾ ಸಂಸ್ಥಾನ, ಸರ್ವಜ್ಞ ಪೀಠ – ಶ್ರೀ ಉತ್ತರಾದಿಮಠ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿದೆ. ಇದನ್ನು ಕೃಷ್ಣ ಕೊಲ್ಹಾರಕುಲಕರ್ಣಿ ಅವರು ರಚಿಸಿದ್ದಾರೆ.

    Original price was: $0.84.Current price is: $0.50.
    Add to basket
  • -40%

    ಗದುಗಿನ ನಾರಾಯಣರಾವ ಹುಯಿಲಗೋಳ

    0

    ಗದುಗಿನ ಹುಯಿಲಗೋಳ ನಾರಾಯಣರಾವ
    ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ನಾಡಗೀತೆ ಖ್ಯಾತಿಯ ಶ್ರೀ ಹುಯಿಲಗೋಳ ನಾರಾಯಣರಾವ ಕರ್ನಾಟಕದ ಏಕೀಕರಣ ಚಳುವಳೀಯಲ್ಲಿ ಮನದುಂಭಿ ಪಾಲುಗೊಂಡು ಕನ್ನಡ ಭಾಷೆಯ ಅಭಿವೃದ್ದಿ ಹಾಗೂ ಕನ್ನಡಿಗರಲ್ಲಿ ಸ್ವಂತಿಕೆಯ ಬಗೆಗೆ ಅಭಿಮಾನ ಮೂಡಿಸುವ ಅಭಿಯಾನದಲ್ಲಿ ಬಹುವಿಧಿಯಾಗಿ ಶ್ರಮಿಸಿದರು. ನಾಟಕಗಳನ್ನು ಬರೆದು ಆಡಿಸಿದರು. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ನಾಟಕಗಳ ರಚನೆಯಲ್ಲಿ ಮೊದಲಿಗರಾಗಿ ನಾಟಕಗಳ ಮೂಲಕ ಜನಜಾಗೃತಿ ಮಾಡಿದರು. ಶಿಕ್ಷಣ ಪ್ರಸಾರಕ್ಕೆ ಬುನಾದಿ ಹಾಕಿಕೊಡುವಲ್ಲಿ ಪ್ರೇರಕಶಕ್ತಿಯಾದರು . ಗಾಂಧೀಜಿಯವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಂತರ್ಗತಿಸಿಕೊಂಡು ಕರ್ನಾಟಕದ ಏಕೀಕರಣ ಆಂದೋಲನದಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಕಾಯಾ-ವಾಚ-ಮನಸಾ ಮಾಡಿ ವಂದ್ಯರಾಗಿದ್ದಾರೆ.

    Original price was: $0.30.Current price is: $0.18.
    Add to basket
  • -40%

    ಮಂಕರು ಬೆಪ್ಪರು

    0

    ಮಂಕರು ಬೆಪ್ಪರು
    “ಮಂಕರು ಬೆಪ್ಪರು” ಎಂಬ ಈ ನಗೆ ಸಂಕಲನ ರಾ.ಶಿ.ಯವರ “ತುಟಿ ಮೀರಿದುದು” ಹಾಗೂ “ನಗು ಸರಸಿ ಅಪ್ಸರೆಯರು” ಇವುಗಳಿಂದ ಆಯ್ದ ಲೇಖನಗಳ ಸಂಗ್ರಹ.
    ಈ ಬರಹಗಳು ರಾ.ಶಿ.ಯವರ ಹಾಸ್ಯಪ್ರಜ್ಞೆಯ ಒಂದು ಮುಖ.

    Original price was: $1.14.Current price is: $0.68.
    Add to basket
  • -40%

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….

    0

    ಆಚಾರ್ಯ ಪ್ರಹಸನ  ಮತ್ತು  ಏನ್ ಹುಚ್ಚೂರೀ….
    ಆಚಾರ್ಯ ಪ್ರಹಸನ  ಮತ್ತು ಏನ್ ಹುಚ್ಚುರೀ ಇವು ಎರಡು  ನಾಟಕಗಳಾಗಿದ್ದು , ಇವೆರಡು ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯರನದ್ದು. ‘ಆಚಾರ್ಯ  ಪ್ರಹಸನ’ವು  ಮೋಲಿಯರನ ‘ಲೆ ತಾರ್ ತೂಫ್’ ನಾಟಕದಿಂದಲೂ. ‘ಏನ್ ಹುಚ್ಚೂರೀ….’ ನಾಟಕವು ‘ಬೂರ್ಜ್ವಾ ದಿ ಜಂಟಲ್ ಮನ್’ ನಾಟಕದಿಂದಲೂ ಪ್ರಭಾವಿತವಾಗಿವೆ.  ಈ ಎರಡು ನಾಟಕಗಳನ್ನು ಅಭಿನಯಿಸುವುದು ಸುಲಭವಲ್ಲ. ನಾಟಕಕಾರ ಹಾಗೂ ನಿರ್ದೇಶಕರ ಮೇಲೆ ಕಲಾತ್ಮಕ ನಿರ್ಬಂಧ ಹೇರ ಬಲ್ಲ ಕೃತಿಗಳಿವು.

    Original price was: $1.44.Current price is: $0.86.
    Add to basket
  • -40%

    ರಾಘವೇಂದ್ರ ಖಾಸನೀಸ ಸಮಗ್ರ

    0

    ರಾಘವೇಂದ್ರ ಖಾಸನೀಸ ಸಮಗ್ರ
    ರಾಘವೇಂದ್ರ ಖಾಸನೀಸರು ಕನ್ನಡದ ಅತ್ಯಂತ ಮಹತ್ವದ ಕಥೆಗಾರರಲ್ಲಿ ಒಬ್ಬರು. ಸಾಮಾನ್ಯವಾಗಿ ಎಲ್ಲ ಪ್ರಾತಿನಿಧಿಕ ಕಥಾ ಸಂಗ್ರಹಗಳಲ್ಲಿ ಅವರ ಕಥೆಗಳು ಕಾಣಿಸಿಕೊಳ್ಳುವವು. ಕೆಲವೇ ಕಥೆಗಳನ್ನು ಬರೆದರೂ ಖಾಸನೀಸರು ಸಣ್ಣ ಕಥೆಯ ಪ್ರಕಾರದ ಸಾಧ್ಯತೆಗಳನ್ನು ಸೊರೆಗೊಂಡಿದ್ದಾರೆ ಅಷ್ಟೇ ಅಲ್ಲದೆ ಅವುಗಳನ್ನು ಆಶ್ಚರ್ಯಕರವಾಗಿ ವಿಸ್ತರಿಸಿದ್ದಾರೆ. ಅವರ ಚಿಂತನೆ ಸ್ವರೂಪ ಹಾಗೂ ಅವರ ಕಥೆಗಳ ಬಂಧ ಅವ್ರಿಗೆಯೇ ವಿಶಿಷ್ಟವಾದವುಗಳು. ಈ ಕೃತಿಯಲ್ಲಿ ಖಾಸನೀಸರ ೧೬ ಪ್ರಕಟಿತ ಕಥೆಗಳು ಮತ್ತು ೭ ಅಪ್ರಕಟಿತ ಕಥೆಗಳು ಸೇರಿವೆ. ಇವುಗಳನ್ನು ಡಾ. ಜಿ.ಎಸ್ ಅಮೂರ ಹಾಗೂ ಡಾ. ರಮಾಕಾಂತ ಜೋಶಿ ಸಮರ್ಥವಾಗಿ ಸಂಪಾದನೆ ಮಾಡಿದ್ದಾರೆ.

    Original price was: $3.00.Current price is: $1.80.
    Add to basket