ಪ್ರತಿಯೊಬ್ಬ ಕನ್ನಡಿಗ ಅರಿಯಬೇಕಾದ ಮಾಹಿತಿಯುಳ್ಳ ಪುಸ್ತಕ “ಕನ್ನಡೋತ್ಸವ”. ಈ ನೃತ್ಯ ನಾಟಕ ಕನ್ನಡಿಗರೆಲ್ಲರ ಆತ್ಮ ಕಥೆ . ಕರ್ನಾಟಕದ ಇತಿಹಾಸವನ್ನು ಸಂಕ್ಷಿಪ್ತವಾಗಿ ಸಮಗ್ರವಾಗಿ ತಿಳಿಸಲಾಗಿದೆ. ಎಲ್ಲರಿಗೂ ತಿಳಿದಿರುವ ವಿಷಯಗಳ ಹೊರತಾಗಿ, ಎಲ್ಲರೂ ತಿಳಿದುಕೊಳ್ಳಬೇಕಾದ, ಆದರೆ ಬಹುತೇಕ ತಿಳಿದಿರದ ವಿಷಯಗಳನ್ನು ಈ ಕೃತಿ ಸಾರುತ್ತದೆ. ಕರ್ನಾಟಕದ ಇತಿಹಾಸವನ್ನು ರಾಜವಂಶಗಳ ಹಿನ್ನೆಲೆಯಲ್ಲಿಯೇ ಹೇಳುತ್ತ ಬಂದರೂ ಅವುಗಳ ನೆರಳಿನಲ್ಲಿ ನಾಡಿನ ಬಹುತೇಕ ವಿಶೇಷತೆಗಳನ್ನೂ ತಿಳಿಸಿಕೊಡುತ್ತದೆ.
ಸಂಗತಿ ಎಷ್ಟೇ ಉತ್ಕೃಷ್ಟವಾದರೂ, ಅದರ ನಿರೂಪಣೆ ಅಷ್ಟೇ ಸರಳವಾಗಿದೆ. ಎಲ್ಲರಿಗೂ ಅರ್ಥವಾಗುವಂತಿದೆ.ಈ ಕೃತಿಯನ್ನು ಪೂರ್ಣ ಓದಿಕೊಂಡಾಗ, ಯಾರಲ್ಲೇ ಆದರೂ ಕರ್ನಾಟಕ ಇತಿಹಾಸದ ಬಗ್ಗೆ ಗೌರವ ಮೂಡಿ ಅದರ ಇನ್ನೂ ಆಳದ ಓದಿಗೆ ಪ್ರೇರೇಪಣೆ ಒದಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಈ ನೃತ್ಯನಾಟಕದ ರಂಗ ಪ್ರದರ್ಶನ ನಾಡಿನ ಎಲ್ಲ ಕಡೆಯೂ ನಡೆದು, ವಿಶೇಷವಾಗಿ ಇಂದಿನ ಕನ್ನಡ ಯುವಜನತೆಗೆ, ನಮ್ಮ ಭವ್ಯ ಪರಂಪರೆಯ ಹಾಗು ಇತಿಹಾಸದ ಒಟ್ಟು ಕಲ್ಪನೆ ಸಮಗ್ರವಾಗಿ ಮೂಡಲಿ.

Additional information

Category

Author

Publisher

Book Format

Ebook

Pages

128

Language

Kannada

Year Published

2023

ISBN

978-81-957119-1-8

Reviews

There are no reviews yet.

Only logged in customers who have purchased this product may leave a review.