Your Cart

Need help? Call +91 9535015489

📖 Print books shipping available only in India. ✈ Flat rate shipping

ಒಂಟಿ ಹಕ್ಕಿಯ ಪಯಣ

Vinuta Hanchinamani
$0.87

Product details

Category

Stories

Author

Vinuta Hanchinamani

Publisher

VIVIDLIPI

Language

Kannada

Book Format

Ebook

Pages

128

Year Published

2020

ISBN

978-81-947074-1-7

ಇಲ್ಲಿನ ಕಥೆಗಳೆಲ್ಲವೂ ಏಕಾಂಗಿ ಮಹಿಳೆಯ ಹೋರಾಟದ ಕಥೆಗಳು.ಇಲ್ಲಿನ ಕಥೆಗಳು ಕ್ರಮವಾಗಿ ಹೆಣ್ಣನ್ನು ಶೋಷಿಸುವಲ್ಲಿ ಪುರುಷರಂತೆ ಸ್ತ್ರೀಯರೂ ಸ್ವಾರ್ಥವನ್ನು ಮರೆಯುತ್ತಾರೆ. ಹೆಣ್ಣು ಸಂಸಾರದ ಕಣ್ಣಾಗಿಯೂ ತನ್ನ ನೋವುಗಳನ್ನೇ ಪ್ರಧಾನವಾಗಿಸಿಕೊಂಡರೆ ಅದವಳ ಸಂಸಾರಕ್ಕೆ ಮಾರಕವಾಗುತ್ತದೆ. ಹೆಣ್ಣು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು. ಇದಕ್ಕೆ ಬೇಕಾಗಿರುವುದು ಅವಳ ಇಚ್ಛಾಸಕ್ತಿ ತನ್ನದಲ್ಲದೆ ತಪ್ಪಿತೆ ಶಿಕ್ಷೆ ಅನುಭವಿಸಬೇಕಾಗಿ ಬಂದರೂ ಹೆಣ್ಣು ಸಹನಾಮೂರ್ತಿಯಾಗಿ ಕಂಗೊಳಿಸಿ ಆದರ್ಶಳೆನಿಸುತ್ತಾಳೆ, ಸಂಸಾರದ ನೋವು -ನಲಿವಿನಲ್ಲಿ ಹೆಣ್ಣಿನ ಪಾತ್ರವೇ ಪ್ರಧಾನವಾದುದು. ಬದುಕಿನ ಅರ್ಥವಿರುವುದು ಧನಾತ್ಮಕ ಚಿಂತನೆಗಳಿಂದ ಧೃತಿಗೆಡದೆ ಬಾಳನ್ನು ಮುನ್ನಡೆಸಿದಾಗ ಮಾತ್ರ ನಶ್ವರಸುಖಕ್ಕೆ ನೆರಳಾದರೆ ಬದುಕು ನೋವು-ನರಳಿಕೆಗಳ ಆಡುಂಬೊಲವಾಗುತ್ತದೆ, ಸಾಧನೆಗೆ ಮನ ಸದಾ ಸಿದ್ಧವಿರಬೇಕು. ನಮ್ಮ ಪರಿಶ್ರಮವೇ ನಮ್ಮ ಸಂತಸಕ್ಕೆ ಕಾರಣ ಸಮಾಜ ಅಸಹಾಯಕ ಹೆಣ್ಣನ್ನು ಹಿಂಸಿಸಲು ಸದಾ ಹದ್ದಾಗಿರುತ್ತದೆ. ನಾವು ನಮ್ಮ ಬದುಕ ವಿಪರೀತಗಳನ್ನು ಮರೆತು ಇತರರನ್ನು ಹೀಗಳೆಯುವುದರಲ್ಲೇ ರಾಕ್ಷಸಾನಂದ ಕಾಣುತ್ತವೆ… ಮೊದಲಾದ ನಿಜಬದುಕ ವೈಪರೀತ್ಯಗಳನ್ನು ಪಟ್ಟಿ ಮಾಡಿದೆ.
ಕಥೆಗಳನ್ನು ಓದುತ್ತಿದ್ದಂತೆ ಮನದಲ್ಲಿ ಅಚ್ಚಾದ ಮಾತುಗಳಿವು: ಹಕ್ಕಿಗಳು ಸಂಪೂರ್ಣ ಬೆಳೆದಿವೆ. ಮನೆ ಪಂಜರವಾಗಿದೆ. ರೆಕ್ಕೆ ಕತ್ತರಿಸುವುದು ಬೇಡ (ಇದನ್ನು ಓದಿದಾಗ ಮನದಲ್ಲಿ ಮೂಡಿದ್ದು “ನಾನೇ ಸಾಕಿದ ಗಿಳಿ ಹದ್ದಾಗಿ ಕುಕ್ಕಿತಲ್ಲೋ ಪದ್ಯ)”. ಒಂಟಿ ಹಕ್ಕಿ ತನ್ನ ಪಯಣದಲ್ಲಿ ಕೆಲವರಿಗಾದರೂ ಗೂಡು, ಗುಟುಕು ನೀಡಿತಲ್ಲ! ಅದರಲ್ಲೇ ಜೀವನದ ಸಾರ್ಥಕತೆಯನ್ನು ಕಂಡುಕೊಂಡದ್ದು ಕಡಿಮೆಯೇನಲ್ಲ’, ‘ಜೀವನಕ್ಕೆ ಬೇಕಾದ ಎಲ್ಲಾ ಸೌಕರ್ಯಗಳಿದ್ದರೂ ಸರಿಯಾದ ಕಟ್ಟುನಿಟ್ಟಾದ ಮಾರ್ಗದರ್ಶನ ಸಿಗದಿದ್ದರೆ ಅದು ಎಳೆಯರಿಗೆ ಬೆಳಕಿಲ್ಲದ ಬದುಕು:, “ಯಶಸ್ಸಿಗೆ ಸೋಲಿರಬಹುದು, ಆದರೆ ಪ್ರಯತ್ನಕ್ಕೆ ಎಂದೂ ಸೋಲಿಲ್ಲ”, “ಜೀವ ವಿಮೆ ಎಂದರೆ ವೈಜ್ಞಾನಿಕ ತಳಹದಿಯ ಮೇಲೆ ಸ್ಥಾಪಿಸಿದ ಮನುಷ್ಯ ಜೀವನ-ಮರಣಕ್ಕೆ ಸಂಬಂಧಿಸಿದ ಅತೀ ಅವಶ್ಯಕ ಯೋಜನೆ”, ರಕ್ತವನ್ನು ಬೆವರಾಗಿಸಿದವಳು. ರಕ್ತವನ್ನು ಹಾಲಾಗಿಸಿ ಉಣಿಸಿದವಳಿಗೆ ಯಾವ ಹಕ್ಕೂ ಇಲ್ಲ ಎಂಬುದು ಸಾಮಾಜಿಕ ದುರಂತ”, “ ಕೂಡು ಕುಟುಂಬದಲ್ಲಿ ಕೆಲಸ ಮಾಡಿದವಳಿಗೆ ಕೆಲಸದ ದಣಿವಿರಲಿಲ್ಲ, ತಮ್ಮವರ ಅಲಕ್ಯತೆ, ದೂರವಾಗುವಿಕೆ ಸಹಿಸಲಾರದ ಪೆಟ್ಟು”, ಸಂಸಾರ ಆನಂದ ಸಾಗರವಾಗಬೇಕು ನಿಜ, ಆದರೆ ಸಾಗರದಲ್ಲಿ ಹವಳ ಮುತ್ತುಗಳಂಥ ಅಮೂಲ್ಯ ವಸ್ತುಗಳ ಕೂಡ ಮೊಸಳೆ ಪ್ರಾಣಾಪಾಯ ಒಡ್ಡುವ ಜಲಚರಗಳೂ ಇರುತ್ತವೆ ಎಂಬುದನ್ನು ಮರೆಯಬಾರದು”, “ಉರಿಯುವ ಸೂರ್ಯ ಇಳಿಯಲೇ ಬೇಕು”…..